ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಮನೆಯಲ್ಲಿ ಉದ್ವೇಗದ ವಾತಾವರಣ ಎದುರಾಗಬಹುದು
Published 29 ನವೆಂಬರ್ 2023, 0:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂದಿನ ಕೆಲಸ ನಾಳೆ ಮಾಡಿದಾಯಿತು ಎಂದು ಮುಂದೂಡುವುದು ಸರಿಯಲ್ಲ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮನೆಯಲ್ಲಿ ಉದ್ವೇಗದ ವಾತಾವರಣ ಎದುರಾಗಬಹುದು.
ವೃಷಭ
ಖರ್ಚು-ವೆಚ್ಚಗಳಲ್ಲಿ ಹಿಡಿತವಿರಲಿ. ಇತರರು ನಿಮ್ಮ ವಿಶ್ವಾಸ ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಎಚ್ಚರವಾಗಿರಿ. ಇಂದು ನಿರೀಕ್ಷೆಗೆ ತಕ್ಕಂತೆ ಶುಭ ಕಾಲ ಕೂಡಿಬರಲಿದೆ. ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ.
ಮಿಥುನ
ಸಂಬಂಧಿಕರ ಅತಿ ವಿಶ್ವಾಸ, ಪ್ರೀತಿಗೆ ಮರುಳಾಗಬೇಡಿ. ನಿಮ್ಮ ಬುದ್ಧಿಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳುವುದರಿಂದ ಒಳಿತು. ಮನೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಪಾಪ ಪರಿಹಾರವಾಗಲಿದೆ.
ಕರ್ಕಾಟಕ
ಕಾರ್ಯ ರಂಗದಲ್ಲಿ ಸತತ ಪ್ರಯತ್ನ ಮತ್ತು ಅನುಭವಸ್ತರ ಸಹಯೋಗದಿಂದಾಗಿ ಪ್ರಗತಿ ಕಾಣಬಹುದು. ಮನೆಯಲ್ಲಿನ ಅಹಿತರ ಘಟನೆಯಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ ಇಲ್ಲದಂತಾಗಲಿದೆ.
ಸಿಂಹ
ಇಂದಿನ ನಿಮ್ಮ ನಡವಳಿಕೆ ಎಲ್ಲರ ಕೇಂದ್ರ ಬಿಂದುವಾಗಲಿದೆ. ಈ ದಿನ ದೊರೆತ ಖ್ಯಾತಿ ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನವಿರಲಿ. ಮನರಂಜನೆಗೂ ಸಮಯ ಮೀಸಲಿಟ್ಟು ಮಡದಿ, ಮಕ್ಕಳ ಜತೆ ಸಂಸತದಿಂದ ಇರುವಿರಿ.
ಕನ್ಯಾ
ಕೊಡು ಕೊಳ್ಳುವಿಕೆಯ ವ್ಯವಹಾರದಿಂದ ಅಧಿಕ ಲಾಭ ಬರಲಿದೆ. ಸಗಟು ವ್ಯಾಪಾರಿಗಳಿಗೆ ಹೇರಳ ವ್ಯಾಪಾರ ಇರುತ್ತದೆ. ರಾಜಕಾರಣಿಗಳು ಚುನಾವಣಾ ದೃಷ್ಟಿಯಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಉತ್ತಮ.
ತುಲಾ
ತೈಲ ಲೇಪನದಂತಹ ಆಯ್ಕೆಯಿಂದಾಗಿ ಕಾಲು ನೋವು ಸಂಪೂರ್ಣವಾಗಿ ಉಪಶಮನವಾಗಲಿದೆ. ವಿದ್ಯಾರ್ಥಿ ಸಮೂಹಕ್ಕೆ ಉತ್ತಮ ಅವಕಾಶಗಳಿವೆ. ತೈಲ ಉದ್ಯಮಿಗಳಿಗೆ ಶತ್ರು ಬಾಧೆ ನಿವಾರಣೆ ಆಗಲಿದೆ.
ವೃಶ್ಚಿಕ
ನಂಬಿಕಸ್ಥರಿಂದ ಮೋಸ ಕೃತ್ಯಗಳು ನಡೆಯುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ನಿಮ್ಮ ವ್ಯವಹಾರಗಳ ಬಗ್ಗೆ ನೀವೇ ಹೆಚ್ಚಿನ ಗಮನಹರಿಸುವುದು ಮುಖ್ಯ. ಮನೆಯಲ್ಲಿ ಪರಿಸ್ಥಿತಿಗಳು ಸುಧಾರಿಸಲಿವೆ.
ಧನು
ಹಣಕಾಸು ಸಂಸ್ಥೆಯ ಜವಾಬ್ದಾರಿ ನೋಡುವವರಿಗೆ ಆತಂಕವಾಗಲಿದೆ. ಮಕ್ಕಳ ಸಂತಸ ಸಡಗರ ಕಂಡು ಮನಸ್ಸಿಗೆ ಸಂತೋಷವಾಗಲಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮ ವೇತನದ ನೌಕರಿ ಸಿಗಲಿದೆ.
ಮಕರ
ಹಲವಾರು ಕಾರಣಗಳಿಗೆ ಸ್ನೇಹಿತರು ನಿಮ್ಮ ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರ ಅಪೇಕ್ಷಿಸಲಿದ್ದಾರೆ. ಕೃಷಿ ಮತ್ತು ಹೈನು ಉತ್ಪನ್ನಗಳಲ್ಲಿನ ಹೆಚ್ಚಿನ ವ್ಯಾಪಾರಗಳಿಂದ ಹೇರಳ ಲಾಭವಾಗಲಿದೆ.
ಕುಂಭ
ಕೌಟುಂಬಿಕ ವಿಷಯಗಳಲ್ಲಿ ಸಹೋದರ, ಸಹೋದರಿಯರ ಪ್ರೀತಿ ವಿಶ್ವಾಸದಿಂದ ಬಹಳ ಖುಷಿ ಸಿಗಲಿದೆ. ವನಸ್ಪತಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಷೇರು ವ್ಯಾಪಾರವು ಇಂದು ಅದೃಷ್ಟದಾಯಕವಾಗಿರುತ್ತದೆ.
ಮೀನ
ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೊಸ ಯೋಜನೆ ಆರಂಭಿಸುವ ಬಗ್ಗೆ ಚರ್ಚೆ ನಡೆಸುವಿರಿ. ದೈವಬಲ ಒದಗುವುದರಿಂದ ನಿಮ್ಮ ಪ್ರಯತ್ನ ಕಾರ್ಯಗಳೆಲ್ಲ ಹೆಚ್ಚಿನ ಶುಭ ಫಲಗಳನ್ನೇ ನೀಡಲಿದೆ.