ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
28/05/2023 - 03/06/2023
ವಾರ ಭವಿಷ್ಯ: ಜೂನ್ 04, ಭಾನುವಾರದಿಂದ ಜೂನ್ 10, ಶನಿವಾರದವರೆಗೆ 
Published 3 ಜೂನ್ 2023, 18:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಗೆಳೆತನಕ್ಕೆ ಸಂಬಂಧಿಸಿದ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆಯನ್ನು ಇಡಿರಿ. ದಿನಸಿ ವರ್ತಕರು ಒಟ್ಟೊಟ್ಟಿಗೆ ಹೆಚ್ಚಿನ ಬಂಡವಾಳವನ್ನು ಈಗ  ಹೂಡುವುದು ಬೇಡ.  ಸಾಧುಸಂತರ ದರ್ಶನಕ್ಕಾಗಿ ದೂರದೂರಿಗೆ ಹೋಗಿ ಬರುವಿರಿ. ಹಲವಾರು ಅವಕಾಶಗಳು ನಿಮ್ಮೆದುರಿಗಿ ದ್ದರೂ ಸಹ ಗೊಂದಲದಿಂದ ಆಯ್ಕೆ ಮಾಡಿಕೊಳ್ಳಲು ವಿಫಲವಾಗುವಿರಿ. ವೃತ್ತಿಯಲ್ಲಿ ದೂರದ ಊರಿಗೆ ವರ್ಗಾವಣೆಯಾಗಬಹುದು.ಹಣದ ಒಳಹರಿವುನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಬುದ್ಧಿವಂತಿಕೆಯಿಂದ ಜನರನ್ನು ಸೆಳೆಯುವಿರಿ.  ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗೆ ಅಲೆದಿದ್ದ ನಿಮಗೆ ದಾಖಲೆಸಿಗುವ  ಸಂದರ್ಭ ವಿದೆ.ನ್ಯಾಯಾಲಯದ ದಾವೆ ವಿಚಾರದಲ್ಲಿ ಸಂತಸದ ಸುದ್ದಿಗಳು ಕೇಳಿ ಬರಬಹುದು. ಗೌರವಾನ್ವಿತ ಹುದ್ದೆ ಯಲ್ಲಿರುವವರಿಗೆ ಅನುಯಾಯಿಗಳು ಹೆಚ್ಚಾಗುವರು.
ವೃಷಭ
ಅತಿಯಾದ ಆತ್ಮ ಗೌರವ ನಿಮ್ಮಲ್ಲಿ ಇರುತ್ತದೆ. ಸಂಗೀತಗಾರನಿಗೆ ಅಥವಾ ನಾಟ್ಯಕಾರರಿಗೆ ಉತ್ತಮ ವೇದಿಕೆಯ ಜೊತೆಗೆ ಉತ್ತಮ ಸಂಭಾವನೆ  ಸಿಗುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಆದರ್ಶವಾದಿಗಳ ಗುಂಪಿನ ಚಟುವಟಿಕೆಗಳಲ್ಲಿ ನೀವು ಪಾಲ್ಗೊಂಡು ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಕಾಣುವಿರಿ ಮತ್ತು ಪುಣ್ಯಕ್ಷೇತ್ರದ ದರ್ಶನ ಮಾಡುವಿರಿ. ಸ್ನೇಹಿತರೊಡನೆ ಕೂಡಿ  ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಕೆಲವರೊಂದಿಗೆ ಮನಬಿಚ್ಚಿ ಮಾತನಾ ಡುವ ಆಸೆ ಪೂರ್ಣಗೊಳ್ಳುತ್ತದೆ. ಹಿರಿಯ ಅಧಿಕಾರಿ ಗಳು ಕಚೇರಿಯಲ್ಲಿ ಯಾರೊಂದಿಗೂ ಸಲುಗೆ  ಬೆಳೆಸ ದಿರುವುದು ಬಹಳ ಉತ್ತಮ. ಸ್ವಂತ ಉದ್ದಿಮೆಯನ್ನು  ನಡೆಸುತ್ತಿರುವವರಿಗೆ ಅಭಿವೃದ್ಧಿಯ ಯೋಗವಿದೆ. ಕೆಲವೊಮ್ಮೆ ನಿಮ್ಮ ಬುದ್ಧಿವಂತಿಕೆ ಕೈಕೊಡುವ ಸಾಧ್ಯತೆ  ಇದೆ.
ಮಿಥುನ
ಮುದ್ರಣ ವೃತ್ತಿಯಲ್ಲಿ  ಇರುವವರಿಗೆ ಕೈ ತುಂಬಾ ಕೆಲಸ ಬರುವ ಸಾಧ್ಯತೆ ಇದೆ. ನಿಮ್ಮ ಕೆಲವೊಂದು ತೊಂದರೆಗಳು ತನ್ನಿಂದ ತಾನೇ ಉಪಶಮನಗೊಳ್ಳುವ ಸಾಧ್ಯತೆ ಇದೆ.ನ್ಯಾಯವಾದಿಗಳಿಗೆ ಅವರ ಕೆಲಸಗಳಲ್ಲಿ ಜಯವಿರುತ್ತದೆ. ಕುಟುಂಬದಲ್ಲಿ ಮಹತ್ವದ್ಯನಿಸುವ  ವಿಚಾರಗಳ ದೀರ್ಘಸಮಾಲೋಚನೆ ನಡೆಯುವುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶ ಇರುತ್ತದೆ. ಕೆಲವೊಂದು ಸಮಸ್ಯೆಯಿಂದ ಹೊರಬರಲು ನೀವು ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳುವಿರಿ. ಅತಿ ಶೀತಬಾಧೆ ಕೆಲವರನ್ನು ಕಾಡಿಸಬಹುದು. ಕೃಷಿಯಿಂದ ಹೆಚ್ಚಿನ ಲಾಭವಿರುತ್ತದೆ. ನವೀನ ರೀತಿಯ ಬೆಳಗಳಿಗೆ ಬೇಡಿಕೆ ಹೆಚ್ಚುತ್ತದೆ. ಬಂಧುಗಳೊಂದಿಗೆ ಸಾಲಗಳ ವ್ಯವಹಾರ ಖಂಡಿತ ಬೇಡ ಇದು ನಷ್ಟಕ್ಕೆ  ಕಾರಣವಾಗ ಬಹುದು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಸಾಕಷ್ಟು ಹಿನ್ನಡೆಯನ್ನು ಕಾಣಬಹುದು.
ಕರ್ಕಾಟಕ
ಸ್ವಂತ ಹೋಟೆಲ್ ಓಪನ್ ಮಾಡುವ ಕೆಲವರ ಆಸೆ, ಈಡೇರುತ್ತದೆ. ಆತ್ಮ ಗೌರವ ಕಾಪಾಡಿಕೊಳ್ಳಲು  ಕುಟುಂಬದವರೊಡನೆ ದಿಡೀರ್ ಹೊಂದಾಣಿಕೆಯನ್ನು  ಮಾಡಿಕೊಳ್ಳುವಿರಿ. ಪ್ರೇಮಿಗಳ ಭಿನ್ನಾಭಿಪ್ರಾಯದ ಮಾತುಗಳಿಂದ ಪ್ರೇಮದಿಂದ ದೂರವಾಗುವ ಸಾಧ್ಯತೆ ಇದೆ.  ಅನವಶ್ಯಕ ವಿವಾದಗಳಿಂದ ದೂರ ಉಳಿಯು ವುದು ನಿಮಗೆ ಒಳ್ಳೆಯದು. ವೈದ್ಯಕೀಯ ವಿದ್ಯಾರ್ಥಿ ಗಳಿಗೆ ವಿದೇಶದಲ್ಲಿ ಓದುವ ಅವಕಾಶ ದೊರೆಯುತ್ತದೆ. ಕಾರ್ಯಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಬೆಂಬಲಗಳು ದೊರೆಯುತ್ತವೆ. ಬಹುನಿರೀಕ್ಷಿತ ಧನಸಹಾಯ  ನಿಮಗೆ ದೊರೆಯುವ ಸಾಧ್ಯತೆ ಇದೆ.ಹಣದಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ನಿಮ್ಮ ಮಕ್ಕಳ ಅಭಿ ವೃದ್ಧಿಯ ಬಗ್ಗೆ ಉತ್ತಮ ವಾರ್ತೆಗಳು ಕೇಳಿ ಬರುತ್ತವೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಸಾಕಷ್ಟುಮುನ್ನಡೆ ಯನ್ನು ಕಾಣಬಹುದು.
ಸಿಂಹ
ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರು ಹೆಚ್ಚು ಅಭ್ಯಾಸ ಮಾಡಬೇಕು. ತಂದೆಯಿಂದ ವ್ಯವಹಾರದ ಬಗ್ಗೆ ಸಲಹೆ ಸೂಚನೆಗಳು ಹಾಗೂ ಸಹಾಯ ದೊರೆ ಯುತ್ತದೆ. ಹೈನುಗಾರಿಕೆ ಮಾಡುವವರಿಗೆ ಉತ್ತಮ ಸಂಪಾದನೆ ಇರುತ್ತದೆ. ಆಸ್ತಿ ಸಂಬಂಧಿಕ ವಿಚಾರದಲ್ಲಿ ಮುನ್ನಡೆಯನ್ನುಕಾಣಬಹುದು. ಆಹಾರ ವ್ಯತ್ಯಾಸ ದಿಂದ ಅನಾರೋಗ್ಯದ ಸಮಸ್ಯೆ ಬರಬಹುದು. ಶತ್ರು ಗಳ ಮೇಲೆ ಹಿಡಿತ  ಸಾಧಿಸುವ ನಿಮ್ಮ ಪ್ರಯತ್ನಕ್ಕೆ  ಸ್ವಲ್ಪಮಟ್ಟಿನ ಜಯ ದೊರೆಯುತ್ತದೆ. ಕುಟುಂಬದಲ್ಲಿ ಕಾವೇರಿದ ವಾತಾವರಣಗಳಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ನಿಮಗೆ ಪಾಲುದಾರಿಕೆ ದೊರೆಯು ತ್ತದೆ. ವಿದೇಶದಲ್ಲಿ ಆಹಾರ ವಸ್ತುಗಳನ್ನು ಮಾರುವವ ರಿಗೆ ಹೆಚ್ಚುವರಿ ವ್ಯಾಪಾರವಿರುತ್ತದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಯ ಜೊತೆಗೆ ಹೊಸ ಸ್ಥಾನ ಸಹ  ಸಿಗುವ ಸಾಧ್ಯತೆ ಇದೆ. 
ಕನ್ಯಾ
ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಕೆಲವು ದೋಷಾರೋಪಗಳು ಕೇಳಿ ಬರಬಹುದು. ಮರದ ವ್ಯಾಪಾರಮಾಡುವವರಿಗೆ ಸಾಕಷ್ಟುಲಾಭವಿದೆ.ಮರದ ಕೆತ್ತನೆ ಕೆಲಸವನ್ನು ಮಾಡುವವರಿಗೆ ಬೇಡಿಕೆ ಹೆಚ್ಚಾಗು ತ್ತದೆ. ಸೋದರಿಯರಿಂದ ನಿಮ್ಮ ಕೆಲಸಕ್ಕೆ ಪ್ರೋತ್ಸಾಹ ದೊರೆಯುತ್ತದೆ. ಹಣ ಹೂಡಿಕೆ ವಿಚಾರದಲ್ಲಿ ಸಾಕಷ್ಟು  ಎಚ್ಚರವಿರಲಿ. ಮಕ್ಕಳ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಚಿಂತೆ ಕಾಣುತ್ತದೆ. ಸಂಗಾತಿಯ ಬೇಜವಾಬ್ದಾರಿ  ನಡ ವಳಿಕೆ ಬೇಸರ ತರಬಹುದು. ವಿದೇಶಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆ ವ್ಯವಹಾರ ವಿಸ್ತರಣೆಯ ಯೋಗವಿದೆ. ತಂದೆಯ ನೆರವಿನಿಂದ ಸದ್ಯದ ಸ್ಥಿತಿ ಯಲ್ಲಿ ನಿಮಗೆ ಕೆಲವೊಂದು ಸಹಾಯಗಳು ಒದಗಿ ಬರುವ ಸಾಧ್ಯತೆಗಳಿವೆ. ನವೀನ ರೀತಿಯ ಕೃಷಿಯನ್ನು ಮಾಡುವವರಿಗೆ ಸೂಕ್ತ ಸಲಹೆ ಹಾಗೂ ಸಹಾಯಧನ ಗಳು ದೊರೆಯುತ್ತವೆ.
ತುಲಾ
ಅತಿಯಾದ ಆಲಸೀತನ ನಿಮ್ಮನ್ನು ಆವರಿಸಿಕೊಳ್ಳಬಹುದು. ಹಣದ ಒಳಹರಿವು ಸ್ವಲ್ಪ  ಮಟ್ಟಿಗೆ ಸುಧಾರಿಸುತ್ತದೆ. ನಿಮ್ಮ ನಡವಳಿಕೆಯಿಂದ ಸ್ನೇಹಿತರನ್ನು ಗೆಲ್ಲುವಿರಿ. ಕೃಷಿಕರಿಗೆ ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ. ಅನಾರೋಗ್ಯ ಪೀಡಿತರ  ಸ್ಥಿತಿ  ಉತ್ತಮಗೊಳ್ಳುತ್ತದೆ. ಅತಿಯಾದ ವಾಗ್ವಾದ ನಿಮ್ಮ ಘನತೆಗೆ ಧಕ್ಕೆಯನ್ನು ತರಬಹುದು. ಸೂಕ್ಷ್ಮ ವಿಚಾರ ಗಳಲ್ಲಿ ಹಿರಿಯರ ಮಾರ್ಗ ದರ್ಶನದಂತೆ ನಡೆಯು ವುದು ಉತ್ತಮ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು. ಸಂಗಾತಿಯ ಉಳಿತಾಯಗಳು ನಿಮಗೆ ಸಹಕಾರಿಯಾಗುತ್ತವೆ. ಕುಸರಿ ಕಲೆಗಳನ್ನು ಮಾಡುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಹಾಗೂ ಸಂಪಾದನೆಯಾಗುತ್ತದೆ. ರಫ್ತು ವ್ಯವಹಾರಗಳನ್ನು ನಡೆಸುವವರಿಗೆ ಕಾನೂನಿನ ತೊಡಕು ಎದುರಾಗಬಹುದು.
ವೃಶ್ಚಿಕ
ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳನ್ನು ಹೊರಲು ಸಿದ್ದರಾಗಬೇಕಾಗಿದೆ. ಮನೆಯವರ ಒಳಿತಿಗಾಗಿ ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಕೃಷಿ ಸಂಬಂಧಿತ ಕೆಲಸ ಕಾರ್ಯಗಳು ವೇಗವನ್ನು ಪಡೆದು ಸಾಗುತ್ತವೆ. ರಾಜಕೀಯ ವ್ಯಕ್ತಿಗಳು ಸ್ಥಾನಮಾನ ಪಡೆ ಯಲು ಹಿಂಬಾಲಕರನ್ನು ಬಳಸಿಕೊಳ್ಳುವರು. ನಿಮ್ಮ ಮಕ್ಕಳಿಂದ ಖರ್ಚುಹೆಚ್ಚಾಗುವ ಸಾಧ್ಯತೆ ಇದೆ,ಹಾಗಾಗಿ ಖರ್ಚಿಗೆ ಕಡಿವಾಣವನ್ನು  ಹಾಕಿರಿ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ.ಸಂಗಾತಿಯಿಂದ ನಿಮ್ಮಎಲ್ಲಾ ಕೆಲಸಗಳಿಗೆ ಪೂರಕ ಸಹಾಯ ದೊರೆಯುತ್ತದೆ. ಗೃಹ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಈಗ ಬೇಡಿಕೆ ಕಡಿಮೆಯಾಗಬಹುದು. ಪಿತ್ರಾರ್ಜಿತ ಆಸ್ತಿಯು ಒದಗುವ ಸಂದರ್ಭವಿದೆ. ವ್ಯವಹಾರಗಳಲ್ಲಿ ಲಾಭ ಕಡಿಮೆ ಇದ್ದರೂ ನಷ್ಟವಿರುವುದಿಲ್ಲ. ಆರೋಗ್ಯದ ಬಗ್ಗೆ ಎಚ್ಚರ ಇರಲಿ.
ಧನು
ನಿಮ್ಮ ಹೊಸ ಯೋಜನೆಗೆ ಸ್ಪಷ್ಟ ರೂಪವನ್ನು ನೀಡಲು ಈಗ ಕಾಲಕೂಡಿ ಬರುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಉತ್ತಮಕಾಲ. ವಿದೇಶದಲ್ಲಿ ಓದಬೇಕೆನ್ನುವ ವರಿಗೆ ಸೂಕ್ತ ಅವಕಾಶಗಳು ದೊರೆಯುತ್ತವೆ. ಹಣದ ಒಳಹರಿವು  ಸಾಮಾನ್ಯ ಗತಿಯಲ್ಲಿರುತ್ತದೆ. ಕುಟುಂಬ ದಲ್ಲಿ ಹೊಸ ಸಂತೋಷ ಮೂಡುವ ಸಾಧ್ಯತೆ ಇದೆ. ಮಾನಸಿಕ ವ್ಯತ್ಯಾಸಗಳನ್ನು ಹೊಂದಿರುವವರ ಬಗ್ಗೆ ಕುಟುಂಬದವರು ಹೆಚ್ಚಿನ ಗಮನವನ್ನು ಕೊಡಬೇಕು. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಖಂಡಿತ ಕಾಣಬಹುದು. ಸಾಹಿತ್ಯ ರಚನೆಕಾರರಿಗೆ ಉತ್ತಮ ಸಾಹಿತ್ಯ ರಚನೆ ಮಾಡುವ ಯೋಗವಿದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಆದಾಯ ಕಡಿಮೆಯಾಗ ಬಹುದು.,ತಂದೆಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ. ವೃತ್ತಿಯಲ್ಲಿ ನಿಮ್ಮ ಹೆಸರು ಎಲ್ಲರ ಗಮನ ಸೆಳೆಯುತ್ತದೆ.
ಮಕರ
ಹಣ ನಿರ್ವಹಣೆಯಿಂದ ಕುಟುಂಬದಲ್ಲಿ  ಆರ್ಥಿಕ ಸ್ಥಿರತೆಯನ್ನು ಕಾಣುವಿರಿ. ಸ್ನೇಹಿತರಲ್ಲಿನ ಭಯವನ್ನು ಹೋಗಲಾಡಿಸಿ ಅವರು ಮುನ್ನುಗ್ಗುವಂತೆ  ಮಾಡುವಲ್ಲಿ ಯಶಸ್ವಿಯಾಗುವಿರಿ. ಪ್ರಾಪಂಚಿಕ ಜ್ಞಾನ ವನ್ನು ಹೆಚ್ಚಿಸಿಕೊಳ್ಳಲು ಹಲವಾರು ಪುಸ್ತಕಗಳನ್ನು ಓದುವಿರಿ.ಧನಾದಾಯವು ಸಾಮಾನ್ಯ ಗತಿಯಲ್ಲಿರು ತ್ತದೆ. ವಿದೇಶದಲ್ಲಿ ನೆಲಸಿರುವವರಿಗೆ ಸಿರಾಸ್ತಿಯನ್ನು ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ಬರಬೇಕಾ ಗಿದ್ದ ಸಹಾಯಧನಗಳು ಬರುತ್ತವೆ.ಮಕ್ಕಳಿಂದ ನಿಮಗೆ ಗೌರವ ದೊರೆಯುತ್ತದೆ.ಪಿತ್ರಾರ್ಜಿತ ಆಸ್ತಿಯು ನಿಮಗೆ ದೊರೆಯುವ ಕಾಲ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ವಾಣಿಜ್ಯ ಒಪ್ಪಂದಗಳ ನಿಯಮ ಉಲ್ಲಂಘನೆಯಾಗ ದಂತೆ ಎಚ್ಚರ ವಹಿಸಿರಿ. ಸಿನಿಮಾ ಸಾಹಸಕಲಾವಿದರು ಗಳಿಗೆ ಅನಿರೀಕ್ಷಿತ ಅವಕಾಶಗಳು ದೊರೆತು ಧನ ಸಂಪಾದನೆಯಾಗುತ್ತದೆ.
ಕುಂಭ
ಕಳೆದು ಹೋಗಿದ್ದ ವಸ್ತು ಒಂದು ದೊರೆತು ಸಂತಸ ಪಡುವಿರಿ. ಕೆಲವು ರಾಜಕೀಯ ಪಟುಗಳಿಗೆ ನಿರ್ಲಿತರಾಗುವ ಅವಕಾಶ ಬರುತ್ತದೆ. ನಿಮ್ಮ ಆರ್ಥಿಕ ಸಹಾಯಕ್ಕೆ ತಂದೆ ನಿಲ್ಲುವರು. ಅದ್ಭುತವಾದ ಹೊಸ ಆಲೋಚನೆಗಳನ್ನು ಗೆಳೆಯರೊಡನೆ ಹಂಚಿಕೊಂಡು ಕಾರ್ಯರೂಪಕ್ಕೆ ತರಲು ಯತ್ನಿಸುವಿರಿ. ಸಿವಿಲ್ ಇಂಜಿನಿಯರ್ ಗಳಿಗೆ ಉತ್ತಮ ಕೆಲಸ ಕಾರ್ಯಗಳು ದೊರೆಯುತ್ತವೆ. ಉಪವೃತ್ತಿಯಿಂದ ಹೆಚ್ಚಿನ ಧನ ಸಂಪಾದನೆ ಆಗಬಹುದು. ಹಿರಿಯರು ಸಮಾಜದಲ್ಲಿ ಇತರರಿಗೆ ಸಹಾಯ ಮಾಡಲು ಮುಂದಾಗುವರು. ಬಯಸುತ್ತಿದ್ದ ನಿವೇಶನವನ್ನು ಈಗ ಖರೀದಿಯನ್ನು  ಮಾಡಬಹುದು. ಮಕ್ಕಳು ನಿಮ್ಮ ಆಶೋತ್ತರಗಳಿಗೆ ಪೂರಕವಾಗಿ ನಡೆದುಕೊಳ್ಳುವರು.  ಧನದಾಯವು ಸಾಮಾನ್ಯವಾಗಿರುತ್ತದೆ. ವೃತ್ತಿಯಲ್ಲಿದ್ದ ಗೊಂದಲಗಳು ಪರಿಹಾರವಾಗುತ್ತದೆ.
ಮೀನ
ಮನೆ ಮಾಡುವ ಬಗ್ಗೆ ಸಾಕಷ್ಟು ಆಲೋಚಿಸಿ ಕಾರ್ಯಪ್ರವೃತ್ತರಾಗುವಿರಿ. ಧನದಾಯವು ತೃಪ್ತಿಕರ ವಾಗಿರುತ್ತದೆ. ಇತರರ ಭಾವನೆಗಳನ್ನು ಅರಿತು ಅದಕ್ಕೆ ಗೌರವ ಕೊಡುವುದು ಉತ್ತಮ. ಇಂಧನ ಮಾರಾಟ ಗಾರರಿಗೆ ಸಾಕಷ್ಟು ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಸಹಾಯ ದೊರೆಯು ತ್ತದೆ.  ನಿಮ್ಮ ವ್ಯಾಪಾರ ವ್ಯವಹಾರಗಳನ್ನು ಸರಿಯಾಗಿ ಗಮನಿಸುವುದು ಉತ್ತಮ,ಇಲ್ಲವಾದಲ್ಲಿ ಹಣಸೋರಿಕೆ ಯಾಗಿ ನಷ್ಟಕ್ಕೆ ಕಾರಣವಾಗಬಹುದು.  ಕೆಲವೊಂದು ಕೆಲಸಗಳಿಗೆ ಆಪ್ತರ ಸಲಹೆ ಪಡೆಯುವುದು ಮುಖ್ಯ. ಆದಾಯದಷ್ಟೇ ಖರ್ಚು ಇರುವುದರಿಂದ ಖರ್ಚಿಗೆ ಕಡಿವಾಣ ಹಾಕುವುದು ಮುಖ್ಯ. ನಿಮ್ಮ ಕೆಲವೊಂದು ಕೆಲಸಗಳಿಗೆ ಹಿರಿಯರ ಸಹಕಾರ ದೊರೆಯುತ್ತದೆ. ಅದಿರು ವ್ಯಾಪಾರ ಮಾಡುವವರಿಗೆ ಲಾಭವಿರುತ್ತದೆ.
ADVERTISEMENT
ADVERTISEMENT