ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
11/08/2024 - 17/08/2024
ವಾರ ಭವಿಷ್ಯ | ಕೃಷಿಕರಿಗೆ ಉತ್ತಮ ಅಭಿವೃದ್ಧಿ ಇರುತ್ತದೆ
Published 11 ಆಗಸ್ಟ್ 2024, 0:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಬಂಧುಗಳ ನಡುವೆ ಗೌರವ ಪಡೆಯಲು ಯತ್ನಿಸುವಿರಿ. ಆದಾಯವು ನಿಮ್ಮ ಅವಶ್ಯಕತೆ ಯನ್ನು ಪೂರೈಸುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರತಿ ಕೆಲಸದಲ್ಲೂ ವಿದ್ಯೆ ಬಗ್ಗೆ ಆಲೋಚನೆ ಮಾಡುವರು ಹಾಗೂ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಉದರ ಸಂಬಂಧಿ ದೋಷಗಳು ನಿಮ್ಮನ್ನು ಕಾಡಬಹುದು. ನಿಮ್ಮ ಸಂಗಾತಿಯು ನಡೆಸುವ ವಿದ್ಯಾ ಕೇಂದ್ರಗಳಿಂದ ಹೆಚ್ಚುಲಾಭವಿರುತ್ತದೆ. ಹಿರಿಯರಿಂದ ವ್ಯವಹಾರ ಗಳ ಬಗ್ಗೆ ಸಾಕಷ್ಟು ಸಲಹೆಗಳು ಸೂಚನೆಗಳು ಬರುತ್ತವೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾ ದರೂ ಸಹ ಅದರಿಂದ ಲಾಭ ಸಿಗುತ್ತದೆ. ವಿದೇಶ ಗಳಿಗೆ ವಿಹಾರಕ್ಕಾಗಿ ಹೋಗಿ ಬರಬಹುದು. ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ. ನೆಚ್ಚಿನ ಒಳಿತಿಗಾಗಿ ದುರ್ಗಾ ಆರಾಧನೆ ಮುಖ್ಯ.
ವೃಷಭ
ಬಂಧುಗಳ ನಡುವೆ ಗೌರವಕ್ಕೆ ಪಾತ್ರ ರಾಗುವಿರಿ. ಆದಾಯವು ಮಧ್ಯಮ ಗತಿಯಲ್ಲಿ ರುತ್ತದೆ. ಗುರು ಹಿರಿಯರಿಗೆ ಸಾಕಷ್ಟು ಗೌರವ ಕೊಡುವಿರಿ ಮತ್ತು ಗುರು ಹಿರಿಯರಿಂದ ಸ್ವಲ್ಪ ಪ್ರಶಂಸೆ ಸಹಸಿಗುತ್ತದೆ. ಮಧ್ಯವರ್ತಿ ವ್ಯವಹಾರ ಮಾಡುವವರಿಗೆ ಆದಾಯಹೆಚ್ಚುತ್ತದೆ.ವಿದ್ಯಾರ್ಥಿ ಗಳಿಗೆ ಯಶಸ್ಸು ಕಡಿಮೆ ಇರುತ್ತದೆ. ಧಾರ್ಮಿಕ ವಿದ್ಯ ಕಲಿಯುತ್ತಿರುವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಅನಾರೋಗ್ಯ ಪೀಡಿತ ಮಹಿಳೆಯರ ಆರೋಗ್ಯದಲ್ಲಿಸುಧಾರಣೆಯನ್ನುಕಾಣಬಹುದು. ನಿಮ್ಮ ಸಂಗಾತಿಯು ನಿಮ್ಮ ನೆರಳಾಗಿ ಸಹಕರಿ ಸುವರು. ತಂದೆಯಿಂದ ವೃತ್ತಿಯಲ್ಲಿ ಸಲ್ಪ ಸಹಾಯ ವಾಗು ತ್ತದೆ. ಹಾಲಿನ ಉತ್ಪನ್ನಗಳನ್ನು ವಿದೇಶದಲ್ಲಿ ತಯಾರಿಸಿ ಮಾರುವವರಿಗೆ ಲಾಭವಿದೆ. ಹೆಚ್ಚಿನ ಒಳಿತಿಗಾಗಿ ಗಣೇಶನ ಧ್ಯಾನ ಮಾಡಿರಿ.
ಮಿಥುನ
ಬುದ್ಧಿವಂತಿಕೆಯಿಂದ ಮಾತನಾಡುವಿರಿ ಹಾಗೂ ಇದರಿಂದ ಜನರನ್ನು ಆಕರ್ಷಣೆ ಮಾಡುವಿರಿ. ನಿಮ್ಮ ಅಗತ್ಯವನ್ನು ಪೂರೈಸುವ ಷ್ಟಿರುತ್ತದೆ. ಸರ್ಕಾರದಿಂದ ಬರಬೇಕಾದ ಹಣ ಗಳು ಈಗ ಬರುತ್ತವೆ. ಸರ್ಕಾರಿ ಅಧಿಕಾರಿಗಳಿಗೆ ಆದಾಯ ಹೆಚ್ಚುತ್ತದೆ.ಬಂಧು ಬಾಂಧವರ ಜೊತೆ ವ್ಯವಹಾರ ಮಾಡುವಿರಿ. ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿಯ ಕಡೆಯವರಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಹಣದ ವ್ಯವಹಾರ ಮಾಡುವುದು ಅಷ್ಟುಒಳಿತಲ್ಲ. ಕೃಷಿ ಉತ್ಪನ್ನ ಗಳಿಂದ ಲಾಭ ಹೆಚ್ಚುತ್ತದೆ. ಹೆಚ್ಚಿನ ಒಳಿತಿಗಾಗಿ ಶಿವ ಮತ್ತು ಸುಬ್ರಹ್ಮಣ್ಯ ಧ್ಯಾನ ಅಗತ್ಯ.
ಕರ್ಕಾಟಕ
ಆತ್ಮಗೌರವವು ಬಹಳ ಹೆಚ್ಚಾಗಿರುತ್ತದೆ. ಎಲ್ಲರೂ ಎಲ್ಲರೂ ನಿಮಗೆ ಬೆಲೆ ಕೊಡಬೇಕೆಂಬ ಮನೋಭಾವವಿರುತ್ತದೆ. ಆದಾಯ ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಬಂಧುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಗಳು ಬರಬ ಹುದು. ಕೃಷಿಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬಹುದು. ಭೂಮಿ ವ್ಯಾಪಾರ ಮಾಡುವವರಿಗೆ ಹೆಚ್ಚಿನ ವ್ಯವಹಾರವಿರುತ್ತದೆ. ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವ ವರಿಗೆ ಲಾಭವಿರುತ್ತದೆ. ಕ್ಷೀರೋತ್ಪನ್ನಗಳನ್ನು ಮಾರುವವರಿಗೆ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗ ಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಬೆಂಕಿಯೊ ಡನೆ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದ ಮಾಡಿರಿ. ಸಂಗಾತಿಯ ಮಾತುಗಳು ಸ್ವಲ್ಪ ಕಠಿಣ ವೆನಿಸಬಹುದು. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಧ್ಯಾನ ಮಾಡಿರಿ.
ಸಿಂಹ
ಹೆಚ್ಚು ವ್ಯವಹಾರಿಕ ಬುದ್ಧಿ ನಿಮ್ಮಲ್ಲಿ ಇರುತ್ತದೆ. ಆದಾಯವು ಕಡಿಮೆ ಇರುತ್ತದೆ. ಸೌಮ್ಯವಾಗಿ ಮಾತನಾಡುವುದು ಬಹಳ ಒಳ್ಳೆ ಯದು. ಸೋದರಿಯರ ಜೊತೆ ಮಾಡಿದ ವ್ಯವ ಹಾರಗಳಲ್ಲಿ ಲಾಭವಿರುತ್ತದೆ. ಬಂಧುಗಳ ಸಹಾಯದಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾ ನಿಕ್ಸ್ ವಿದ್ಯೆಯನ್ನು ಓದುತ್ತಿರುವವರಿಗೆಅಭಿವೃದ್ಧಿ ಇರುತ್ತದೆ. ರಾಜಕೀಯ ನಾಯಕರುಗಳಿಗೆ ಜನ ಸಂಪರ್ಕ ಹೆಚ್ಚುತ್ತದೆ.ವಿದೇಶಕ್ಕೆ ಹೋಗಬೇಕೆನ್ನು ತ್ತಿರುವವರಿಗೆ ಸ್ವಲ್ಪ ಹಿನ್ನಡೆಯಾಗಬಹುದು.ವೃತ್ತಿ ಯಲ್ಲಿ ಒತ್ತಡಗಳಿದ್ದರೂ ಸಹ ಹಿರಿಯಅಧಿಕಾರಿ ಗಳು ನಿಮಗೆ ಸಹಕಾರ ನೀಡುವವರು. ಹೆಚ್ಚಿನ ಒಳಿತಿಗಾಗಿ ಶನಿ ಮತ್ತು ದುರ್ಗಾ ಧ್ಯಾನಮಾಡಿರಿ.
ಕನ್ಯಾ
ಮನಸ್ಸನ್ನು ತಿಳಿಯಾಗಿ ಇಟ್ಟುಕೊಳ್ಳುವುದು ಉತ್ತಮ, ಕ್ಲೇಶಗಳನ್ನು ದೂರ ಮಾಡಿಕೊಳ್ಳಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಜನರ ಸಹಕಾರ ನಿಮ್ಮ ಕೆಲಸ ಕಾರ್ಯಗಳಿಗೆ ದೊರೆಯುತ್ತದೆ. ಆಸ್ತಿ ಸಂಬಂಧಿತ ವಿಷಯಗ ಳಲ್ಲಿ ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರ ವಹಿಸಿರಿ. ಮಕ್ಕಳ ಓದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು. ವಾಯು ಪ್ರಕೋಪ ಕೆಲವರನ್ನು ಕಾಡಬಹುದು. ಸಂಗಾತಿಯಿಂದ ಕೆಲವೊಮ್ಮೆ ನಿರೀಕ್ಷಿತ ಸಹಾಯಗಳುಸಿಗುವುದು ಕಡಿಮೆ. ವೃತ್ತಿಯಲ್ಲಿ ಸಾಕಷ್ಟು ಗೊಂದಲಗಳಿರು ತ್ತವೆ.ಗಣಿಗಾರಿಕೆ ಮಾಡುವವರಿಗೆ ಉತ್ತಮ ಅವಕಾಶವಿದೆ. ಹೆಚ್ಚಿನ ಒಳಿತಿಗಾಗಿ ದುರ್ಗಾ ಮತ್ತು ಗಣೇಶನ ಆರಾಧನೆ ಮಾಡಿರಿ.
ತುಲಾ
ವಾರದ ಆರಂಭ ಆನಂದದಾಯಕವಾಗಿರುತ್ತದೆ. ಆದಾಯವು ಸ್ವಲ್ಪ ಕಡಿಮೆಮಟ್ಟದಲ್ಲಿ ಇರುತ್ತದೆ. ನಿಮ್ಮ ಹಿರಿಯರು ಮತ್ತುಬಂಧು ಗಳಿಂದ ನಿಮ್ಮ ಕೆಲಸಕಾರ್ಯಗಳಿಗೆ ಪ್ರತಿರೋಧ ಬರುತ್ತದೆ. ರಾಜಕೀಯಪಟುಗಳಿಗೆ ಅವರಸ್ಥಾನ ದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಹೊಸ ಹೊಸ ಮಾರ್ಗಗಳು ಸಿಗುತ್ತವೆ. ಕೃಷಿಕರಿಗೆ ಉತ್ತಮ ಅಭಿವೃದ್ಧಿ ಇರುತ್ತದೆ. ಸಾಲಗಾರರಿಂದ ಕೆಲವರಿಗೆ ತೊಂದರೆ ಬರಬಹುದು. ಕೆಲವರಿಗೆ ಶತ್ರುಗಳ ಮೇಲೆ ಹಿಡಿತ ಸಾಧಿಸಲು ಅನುಕೂಲ ವಾಗುತ್ತದೆ. ಬಂಧುಗಳಿಗೆ ಕೊಟ್ಟ ಹಣ ವಾಪಸ್ ಬರುವುದಿಲ್ಲ.ಅನಿರೀಕ್ಷಿತವಾಗಿ ಕೃಷಿ ಭೂಮಿ ಸಿಗುವ ಯೋಗವಿದೆ.ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಮತ್ತು ಸುಬ್ರಹ್ಮಣ್ಯ ಧ್ಯಾನ ಮಾಡಿರಿ.
ವೃಶ್ಚಿಕ
ಆತ್ಮಸ್ಥೈರ್ಯ ಬಹಳ ಹೆಚ್ಚಾಗಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಚಾಣಾಕ್ಷತನದಿಂದ ಆದಾಯದ ಮೂಲಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ವೈರಿಗಳನ್ನು ಕಾದು ಸದಬಡಿಯುವ ತಂತ್ರ ನಿಮಗೆ ತಿಳಿದಿರುತ್ತದೆ. ಕೃಷಿಗೆ ಸ್ವಲ್ಪ ಅಭಿವೃದ್ಧಿ ಇರುತ್ತದೆ. ವಿದೇಶಿಭಾಷೆಗಳನ್ನು ಕಲಿಯುವವರಿಗೆ ಅನುಕೂಲವಿರುತ್ತದೆ. ಮಕ್ಕಳ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾ ಗಬಹುದು. ಹಿರಿಯರ ಅನಾರೋಗ್ಯ ತಹ ಬಂದಿಗೆ ಬರುತ್ತದೆ. ಸಂಗಾತಿ ಕಡೆಯವರಿಂದ ನಿಮಗೆ ಹೆಚ್ಚು ಅನುಕೂಲವಾಗುತ್ತದೆ.ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇಲ್ಲದಿದ್ದರೂನಷ್ಟವಿರು ವುದಿಲ್ಲ.ಹೆಚ್ಚಿನ ಒಳಿತಿಗಾಗಿ ದುರ್ಗಾ ಪ್ರಾರ್ಥನೆ ಯನ್ನು ಮಾಡಿರಿ.
ಧನು
ವಾರದ ಆರಂಭದಲ್ಲಿ ಸ್ವಲ್ಪ ಆಲಸೀತನ ವಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ರಾಜಕೀಯ ನಾಯಕರುಗಳಿಗೆ ಆದಾಯವಿರು ತ್ತದೆ. ರಾಜಕೀಯ ನಾಯಕರುಗಳು ತಮ್ಮ ಗುಂಪುಗಳನ್ನು ಬಲಪಡಿಸಿಕೊಳ್ಳಬಹುದು. ವಿದೇಶಿ ವ್ಯವಹಾರಗಳಲ್ಲಿ ಹೆಚ್ಚು ಹೆಚ್ಚು ಸಾಧನೆ ಮಾಡಬಹುದು. ಬಂಧುಗಳಿಂದ ನಿಮ್ಮ ಕೆಲವು ಕೆಲಸಕಾರ್ಯಗಳಿಗೆಸಹಕಾರದೊರೆಯುತ್ತದೆ.ಬಂಧುಗಳು ಹಣಕಾಸಿಗಾಗಿ ಬರಬಹುದು ಎಚ್ಚರ. ಸಂಗಾತಿಯ ಸಲಹೆಯಂತೆ ನಡೆಸಿದ ವ್ಯವಹಾರಗಳಲ್ಲಿಲಾಭವಿರುತ್ತದೆ.ತಾಯಿಯಿಂದ ಸಾಕಷ್ಟು ಧನಸಹಾಯ ದೊರೆಯುತ್ತದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಮತ್ತು ಗುರುವಿನ ಆರಾಧನೆ ಮಾಡಿರಿ.
ಮಕರ
ರಾಜಕೀಯ ಪ್ರವೇಶ ಮಾಡಬೇಕೆನ್ನು ವವರಿಗೆ ಉತ್ತಮ ಅನುಕೂಲವಿರುತ್ತದೆ. ನಿಮ್ಮ ಶ್ರಮದಿಂದ ಹೆಚ್ಚು ಸಂಪಾದನೆ ಮಾಡಿಕೊಳ್ಳು ವಿರಿ. ಬಂಧುಗಳನಡುವೆ ಬಿಗುವಿನವಾತಾವರಣ ಇರಬಹುದು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ಕೃಷಿ ವಿಧ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಪಾಲುದಾ ರಿಕೆ ಮತ್ತು ಶ್ರದ್ದೆ ಬಹಳ ಮುಖ್ಯ. ಈಗ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಮುನ್ನಡೆಯು ಇರುತ್ತದೆ. ವೃತ್ತಿಯಲ್ಲಿರುವ ಮಹಿಳೆಯರಿಗೆ ಕೆಲಸದ ಒತ್ತಡಗಳು ಹೆಚ್ಚಾಗಬಹುದು. ಹೆಚ್ಚಿನ ಒಳಿತಿಗಾಗಿ ಲಕ್ಷ್ಮೀನಾರಾಯಣನ ಧ್ಯಾನವನ್ನು ಮಾಡಿರಿ.
ಕುಂಭ
ಹಿರಿಯರಿಗೆ ಹೆಚ್ಚು ಗೌರವ ದೊರೆಯುತ್ತದೆ. ವಿದೇಶದಲ್ಲಿರುವವರಿಗೆ ಸಂಪಾದನೆ ಹೆಚ್ಚುತ್ತದೆ. ರಾಜಕಾರಣಿಗಳು ಮಾತನಾಡುವಾಗ ಎಚ್ಚರವಾ ಗಿರಿ, ಇದು ನಿಮ್ಮನ್ನೇ ಸುತ್ತಿಕೊಳ್ಳಬಹುದು. ಬಾಹುಬಲದ ಮೇಲೆ ಅತಿಯಾದ ನಂಬಿಕೆ ಇಟ್ಟಿ ರುವವರಿಗೆ ಪೆಟ್ಟು ಬೀಳುತ್ತದೆ.ಕ್ರೀಡಾ ತರಬೇತು ದಾರರಿಗೆ ಹೆಚ್ಚು ಅವಕಾಶಗಳು ದೊರೆಯುತ್ತವೆ. ಸಂಗಾತಿಯ ನಿಂತಿದ್ದ ಓದುಗಳನ್ನು ಮುಂದು ವರೆಸಬಹುದು. ಕಣ್ಣಿನ ತೊಂದರೆ ಇರುವವರು ಎಚ್ಚರ ವಹಿಸಿರಿ. ಹಿರಿಯರ ಜೊತೆ ವಿನಾಕಾರಣ ಕಲಹ ಬೇಡ. ಸಂಗಾತಿ ಮಾಡುವ ವ್ಯವಹಾರಗ ಳಲ್ಲಿ ಲಾಭವಿರುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ.ಹೆಚ್ಚಿನ ಒಳಿತಿಗಾಗಿ ಮತ್ತು ದುರ್ಗಾ ಮತ್ತು ಶನೇಶ್ಚರ ಧ್ಯಾನ ಮಾಡಿರಿ.
ಮೀನ
ಅನವಶ್ಯಕ ಗೊಂದಲಗಳನ್ನು ಮಾಡಿ ಕೊಳ್ಳಬೇಡಿರಿ. ನಿಮ್ಮ ಮಾತು ನಿಮ್ಮ ನಡವಳಿಕೆ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಕೆಲವು ಸಿಗುವ ಸಹಾಯಗಳು ನಿಲ್ಲುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಮೈಯಲ್ಲ ಕಣ್ಣಾಗಿರುವುದು ಒಳ್ಳೆಯದು. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ. ಚರ್ಮರೋಗ ಅಥವಾ ಗುಪ್ತ ರೋಗಗಳಿರುವವರು ಹೆಚ್ಚು ಎಚ್ಚರ ವಹಿಸಿರಿ. ಕೆಲವೊಂದು ವಿಚಾರಗಳು ಬಂದಾಗ ಸಂಗಾತಿಯು ನಿಮ್ಮಿಂದ ವಿಮುಖರಾಗುವರು. ಕಚೇರಿ ಕೆಲಸ ಮಾಡುವವರಿಗೆ ಸಹೋದ್ಯೋಗಿ ಗಳಿಂದ ಕಿರುಕುಳಗಳು ಆಗಬಹುದು. ಇನ್ನೂ ಹೆಚ್ಚಿನ ಒಳಿತಿಗಾಗಿ ಗಣೇಶನ ಧ್ಯಾನವನ್ನು ಮಾಡಿರಿ.
ADVERTISEMENT
ADVERTISEMENT