ಭಾನುವಾರ, 2 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
02/11/2025 - 08/11/2025
ವಾರ ಭವಿಷ್ಯ: 2-11-2025ರಿಂದ 8-11-2025 ರವರೆಗೆ; ವ್ಯವಹಾರದಲ್ಲಿ ಅಭಿವೃದ್ಧಿ
Published 2 ನವೆಂಬರ್ 2025, 1:29 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವಾರದ ಆರಂಭದಲ್ಲಿ ಬಹಳ ಉತ್ಸಾಹವಿರುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಸ್ಥೈರ್ಯ ಬರುತ್ತದೆ. ಸರ್ಕಾರದಿಂದ ಸಹಕಾರ ಈಗ ದೊರೆಯುತ್ತದೆ. ಆದಾಯವು ಕಡಿಮೆ ಇದ್ದರೂ ಬದಲಿ ಆದಾಯಗಳನ್ನು ಹುಡುಕಬಹುದು. ಬಂಧುಗಳ ಜೊತೆ ವ್ಯಾಪಾರ ವ್ಯವಹಾರ ಖಂಡಿತ ಬೇಡ. ಕೆಲವು ಉಪಾಧ್ಯಾಯರುಗಳಿಗೆ ಉತ್ತಮ ಬೇಡಿಕೆ ಬರುತ್ತದೆ. ಈಗ ವಿದೇಶದಲ್ಲಿ ವ್ಯಾಪಾರ ಮಾಡುತ್ತಿರುವವರು ಹೊಸ ಶಾಖೆಗಳನ್ನು ತೆರೆಯಬಹುದು. ಇತರರ ಕೆಲಸಗಳ ಯಶಸ್ಸಿಗಾಗಿ ಸಲಹೆ ನೀಡುವ ಅವಕಾಶ ದೊರೆಯುತ್ತದೆ. ಈ ಹಿಂದೆ ನಿಲ್ಲಿಸಿದ್ದ ವಿದ್ಯಾಭ್ಯಾಸವನ್ನು ಪುನಃ ಆರಂಭಿಸಲು ಸೂಕ್ತ ಆಲೋಚನೆ ಮಾಡುವಿರಿ.
ವೃಷಭ
ಈ ವಾರ ಒಂದು ರೀತಿ ಸುಖ ಜೀವನವನ್ನು ಕಾಣಬಹುದು. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ದೇಶ ವಿದೇಶದಲ್ಲಿ ಧರ್ಮ ಪ್ರಚಾರ ಮಾಡುವವರಿಗೆ ಮಾನ್ಯತೆ ಮತ್ತು ಗೌರವ ದೊರೆಯುತ್ತದೆ. ತಾಯಿಯ ಹಿತನುಡಿಗಳು ನಿಮಗೆ ಒಳಿತನ್ನು ಮಾಡುತ್ತವೆ. ಈಗ ವಿನಾಕಾರಣವಾದ ವಿವಾದಗಳನ್ನು ಎಳೆದುಕೊಳ್ಳುವುದು ಬೇಡ. ವ್ಯವಹಾರದಲ್ಲಿ ಸಾಮಾನ್ಯ ಅಭಿವೃದ್ಧಿಯನ್ನು ಖಂಡಿತ ಕಾಣಬಹುದು. ಮನೆ ಬಳಕೆಯ ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ವಿಪರೀತ ಕೆಲಸದ ನಡುವೆ ದೇಹಾಲಸ್ಯ ಆಗಬಹುದು. ಈ ಸಂದರ್ಭದಲ್ಲಿ ಮಿತ್ರರ ಸಹಾಯ ದೊರೆತು ಕೆಲಸ ಪೂರ್ಣವಾಗುವುದು. ನ್ಯಾಯಾಲಯದಲ್ಲಿನ ವ್ಯವಹಾರಗಳಿಗೆ ಅಡೆತಡೆ ಬರುವ ಸಾಧ್ಯತೆಗಳು ಈಗ ಕಾಣುತ್ತಿವೆ.
ಮಿಥುನ
ಮುನ್ನುಗ್ಗುವ ಹುಮ್ಮಸ್ಸು ಸ್ವಲ್ಪ ಕಡಿಮೆಯಾದಂತೆ ಅನಿಸುತ್ತದೆ. ಆದಾಯವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಬರುತ್ತದೆ. ವೈಯಕ್ತಿಕ ವ್ಯವಹಾರಗಳ ಹೋರಾಟದಲ್ಲಿ ಪ್ರಗತಿಯನ್ನು ಈಗ ಕಾಣುವಿರಿ. ಮನೆಯವರ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಕೆಲವರಿಗೆ ಅಧ್ಯಯನದ ನಿಮಿತ್ತವಾಗಿ ದೂರ ಪ್ರಯಾಣ ಮಾಡಬೇಕಾದ ಸಂದರ್ಭವಿರುತ್ತದೆ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸವೊಂದು ಈಗ ಕೈಗೂಡುವುದು. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ವಾರ್ತೆಯನ್ನು ಕೇಳುವಿರಿ. ಅತಿಯಾದ ಜಿಪುಣತನ ಮಾಡಿ ನಿಮ್ಮ ಕುಟುಂಬದವರ ಎದುರು ಮುಜುಗರಕ್ಕೆ ಒಳಗಾಗುವಿರಿ.
ಕರ್ಕಾಟಕ
ಸಮಾಜದಿಂದ ಸಾಕಷ್ಟು ಗೌರವ ದೊರೆಯುತ್ತದೆ. ಆದಾಯವು ಕಡಿಮೆ ಇದ್ದರೂ ಏನು ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮುನ್ನಡೆಯನ್ನು ಕಾಣಬಹುದು. ಇತರರ ಅಭಿವೃದ್ಧಿಯ ಬಗ್ಗೆ ಚಿಂತೆ ಮಾಡದೆ ನಿಮ್ಮ ಅಭಿವೃದ್ಧಿಯ ಬಗ್ಗೆ ಗಮನಹರಿಸಿರಿ. ಕ್ರೀಡಾಪಟುಗಳಿಗೆ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ದೊರೆಯಬಹುದು. ಕ್ರೀಡೆಯನ್ನು ವ್ಯವಹಾರವಾಗಿ ಪರಿಗಣಿಸಿದವರಿಗೆ ಆದಾಯ ಸ್ವಲ್ಪ ಕಡಿಮೆಯಾಗುತ್ತದೆ. ವಿವಾದಿತ ವಿಷಯವನ್ನು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಲು ನಿಮಗೆ ಅವಕಾಶ ದೊರೆಯುತ್ತದೆ. ಕೋರ್ಟು ಹಾಗೂ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆಯನ್ನು ಖಂಡಿತವಾಗಿ ಕಾಣಬಹುದು.
ಸಿಂಹ
ಆರಂಭ ಮಂಕು ಕವಿದಂತೆ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಹಿರಿಯರ ಸಹಕಾರ ನಿಮಗೆ ದೊರೆಯುತ್ತದೆ. ಉದ್ಯೋಗದಲ್ಲಿ ಈಗ ಸ್ಥಾನ ಬದಲಾವಣೆಯ ಸಾಧ್ಯತೆಗಳಿವೆ. ನಿಮ್ಮ ಸಮಾಜದ ಪ್ರಮುಖರೊಂದಿಗೆ ಬಾಂಧವ್ಯ ವೃದ್ಧಿ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. ವಾಹನ ಚಾಲನೆ ಮಾಡುವಾಗ ಸ್ವಲ್ಪಎಚ್ಚರವಾಗಿರಿ. ಪಾಲುಗಾರಿಕೆ ವ್ಯವಹಾರದಲ್ಲಿ ಹೊಸ ತಿರುವು ಬಂದು ನಿಮಗೆ ಹೆಚ್ಚಿನ ಅಧಿಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆವಹಿಸಬೇಕು. ಆರಕ್ಷಕ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳಿವೆ. ಮಹಿಳಾ ರಾಜಕಾರಣಿಗಳಿಗೆ ಜನ ಬೆಂಬಲ ದೊರೆಯುತ್ತದೆ.
ಕನ್ಯಾ
ಎಲ್ಲವನ್ನು ತಿಳಿದವರಂತೆ ವರ್ತಿಸುವಿರಿ. ಆದಾಯವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ಆದರೆ ಆಡಂಬರಕ್ಕೆ ಕೊರತೆ ಇರುವುದಿಲ್ಲ. ಚುಚ್ಚು ಮಾತುಗಳಿಂದ ಜನಬೆಂಬಲ ಕಳೆದುಕೊಳ್ಳುವಿರಿ. ಧೃಡ ಸಂಕಲ್ಪದಿಂದ ಮಾಡಿದ ಕೆಲಸಗಳು ಅಪೂರ್ಣಗೊಳ್ಳುವವು. ಬಂಧುಗಳ ನಡುವೆ ವಿರೋಧವನ್ನು ಕಟ್ಟಿಕೊಳ್ಳುವಿರಿ. ಕೃಷಿ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಮೂಡಿ ಅದರಲ್ಲಿ ತೊಡಗಿಕೊಳ್ಳುವಿರಿ. ನೃತ್ಯ ಕಲಾವಿದರುಗಳಿಗೆ ಹೆಚ್ಚಿನ ಕೆಲಸಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ಹಿರಿಯರ ಬಗ್ಗೆ ಗೌರವವನ್ನು ತೋರುವುದು ಒಳ್ಳೆಯದು. ಹೊಟ್ಟೆಯೊಳಗೆ ತೊಂದರೆ ಇರುವವರು ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವುದು ಉತ್ತಮ. ಪುಸ್ತಕ ವ್ಯಾಪಾರಿಗಳಿಗೆ ಲಾಭ ಹೆಚ್ಚು.
ತುಲಾ
ಬಹಳ ಮೇಧಾವಿಯಂತೆ ವರ್ತಿಸಲು ಹೋಗಿ ಸಿಕ್ಕಿಬೀಳುವಿರಿ, ಎಚ್ಚರ. ಆದಾಯವು ಬಂದರೂ ಅದಕ್ಕಿಂತ ಹೆಚ್ಚು ಖರ್ಚಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಂದರ್ಭವಿದೆ. ಈಗ ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಬಹುದು. ರಾಜಕಾರಣಕ್ಕೆ ಸೇರಬೇಕೆನ್ನುವವರು ತಮ್ಮ ಸ್ಥಾನಮಾನಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ. ಹೂಡಿಕೆ ವ್ಯವಹಾರಗಳಿಂದ ಹೆಚ್ಚಿನ ಹಣ ಬರುತ್ತದೆ. ವಿದ್ಯುತ್ ಕ್ಷೇತ್ರದಲ್ಲಿ ಉತ್ಪಾದಕರಾಗಿರುವವರಿಗೆ ಬೇಡಿಕೆ ಬಂದು ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಕೃಷಿ ಭೂಮಿಯನ್ನು ಕೊಳ್ಳಬಹುದು.
ವೃಶ್ಚಿಕ
ಈ ವಾರ ಸಾಕಷ್ಟು ದ್ವಂದ್ವ ನಿಮ್ಮಲ್ಲಿ ಇರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಬಂಧುಗಳ ಸಹಕಾರ ಸಿಗದಿದ್ದರೂ ಸಹ ಹಿತೈಷಿಗಳ ಸಹಕಾರ ಸಿಗುತ್ತದೆ. ವಿದೇಶದಲ್ಲಿರುವವರು ಮಾತೃಭೂಮಿಯಲ್ಲಿ ಆಸ್ತಿಯನ್ನು ಕೊಳ್ಳಬಹುದು. ವಿದ್ಯುತ್ ಉಪಕರಣಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ಬಗೆಹರಿಯಬೇಕಿದ್ದ ವ್ಯಾಜ್ಯಗಳು ಈಗ ನಿಮ್ಮತ್ತ ಆಗುವ ಸೂಚನೆಗಳು ಕಂಡುಬರುತ್ತವೆ. ನಯವಂಚನೆಯಿಂದ ನಿಮ್ಮ ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿಯನ್ನು ಕಂಡರೂ ಸಾಮಾಜಿಕ ಜೀವನದಲ್ಲಿ ಕಳಂಕ ಬರುವ ಸಾಧ್ಯತೆ ಇದೆ. ಸಂದೇಹಾಸ್ಪದ ವ್ಯಕ್ತಿಗಳಿಂದ ದೂರವಿರುವುದು ಬಹಳ ಒಳ್ಳೆಯದು.
ಧನು
ಈ ವಾರದಲ್ಲಿ ಕೆಲವೊಂದು ಅನಿರೀಕ್ಷಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಆದಾಯವು ಕಡಿಮೆ ಇರುತ್ತದೆ. ಹೊಸವಾಹನ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ದಿನಸಿ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಿ ಸಹಕಾರ ನೀಡುವ ನಿಮ್ಮ ಮನೋಭಾವಕ್ಕೆ ಗೌರವ ದೊರೆಯುತ್ತದೆ. ನ್ಯಾಯವಾದಿಗಳಿಗೆ ವಾದಗಳಲ್ಲಿ ಜಯ ದೊರೆತು ಗೌರವ ಹೆಚ್ಚುತ್ತದೆ. ಕಬ್ಬಿಣ, ಉಕ್ಕನ್ನು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹೆಚ್ಚು ವ್ಯಾಪಾರವಾಗಿ ಲಾಭ ಹೆಚ್ಚುತ್ತದೆ. ಷೇರುಪೇಟೆ ವ್ಯವಹಾರ ಮಾಡುವ ಕೆಲವರಿಗೆ ಹೆಚ್ಚು ಆದಾಯದ ಸಾಧ್ಯತೆ ಇದೆ. ಹೆಣ್ಣುಮಕ್ಕಳಿಗೆ ತವರಿನಿಂದ ಉಡುಗೊರೆ ದೊರೆಯಬಹುದು.
ಮಕರ
ಯಾವುದೇ ಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಇರುತ್ತದೆ. ಆದಾಯವು ಸ್ವಲ್ಪಮಟ್ಟಿಗೆ ಚೇತರಿಕೆಯನ್ನು ಕಾಣುತ್ತದೆ. ನಿಮ್ಮ ಶತ್ರುಗಳು ನಿಮ್ಮನ್ನು ಕಂಡು ಭಯಪಡುವರು. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸ್ವಲ್ಪ ಮುನ್ನಡೆಯನ್ನು ಕಾಣಬಹುದು. ಸ್ವಯಂ ಉದ್ಯೋಗ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಊಟ ತಿಂಡಿಗಳನ್ನು ಅಲ್ಪಪ್ರಮಾಣದಲ್ಲಿ ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಲೇಖಕರು ಹೊಸ ವಿಚಾರದ ಬಗ್ಗೆ ಚಿಂತನ ಮಂಥನ ನಡೆಸಿ ಹೊಸ ಪ್ರಬಂಧವನ್ನು ಬರೆಯುವರು. ಅವಿವಾಹಿತರಿಗೆ ವಿವಾಹ ಯೋಗವಿದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಏರಿಕೆ ಇರುತ್ತದೆ.
ಕುಂಭ
ವಿದೇಶದಲ್ಲಿರುವವರಿಗೆ ಸ್ವದೇಶಾಭಿಮಾನ ಹೆಚ್ಚುತ್ತದೆ. ಆದಾಯವು ಕಡಿಮೆ ಇದ್ದರೂ ತೊಂದರೆ ಇರುವುದಿಲ್ಲ. ಹಿರಿಯರಿಗೆ ಕೆಲವು ಸಂಸ್ಥೆಗಳ ನಾಯಕತ್ವವನ್ನು ವಹಿಸುವ ಅವಕಾಶ ದೊರೆಯುತ್ತದೆ. ಶೃಂಗಾರ ಸಾಧನಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರ ಹೆಚ್ಚಾಗುತ್ತದೆ. ಸ್ಥಿರಾಸ್ತಿ ಖರೀದಿ ಮಾಡುವ ಆಲೋಚನೆ ಸದ್ಯಕ್ಕೆ ಬೇಡ. ಯುವಕರ ಅತಿಯಾದ ಆತ್ಮವಿಶ್ವಾಸವು ಅವರನ್ನು ನಗೆಪಾಟಲಿಗೆ ದೂಡುವ ಸಾಧ್ಯತೆ ಇದೆ. ಕೆಲವರ ಪ್ರೀತಿ ಪ್ರೇಮ ಬಹಿರಂಗಗೊಂಡು ಹಿರಿಯರು ಅದನ್ನು ಒಪ್ಪುವ ಸಾಧ್ಯತೆಗಳಿವೆ. ಬೆಂಕಿಯೊಡನೆ ಕೆಲಸ ಮಾಡುವವರು ಸಾಕಷ್ಟು ಎಚ್ಚರವಾಗಿರುವುದು ಒಳ್ಳೆಯದು.
ಮೀನ
ವಾರದ ಆರಂಭದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತವೆ. ವ್ಯವಹಾರದಲ್ಲಿ ಸ್ವಲ್ಪ ಚೇತರಿಕೆಯಾಗಿ ಆದಾಯ ಬರುತ್ತದೆ. ನಿಮ್ಮ ಕೊಂಕು ಮಾತುಗಳಿಂದ ಬಂಧುಗಳನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅವರ ವಿಷಯದ ಆಯ್ಕೆಯ ಬಗ್ಗೆ ಗೊಂದಲಗಳು ಉಂಟಾಗುತ್ತವೆ. ಸಂಗಾತಿಯ ಸಹಕಾರದಿಂದ ಸ್ವಂತ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಸಾಧಿಸುವಿರಿ. ಕಟ್ಟಡ ಕಟ್ಟುವ ಕಾರ್ಮಿಕರಿಗೆ ಹೆಚ್ಚಿನ ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ವೈದ್ಯ ವೃತ್ತಿಯಲ್ಲಿ ಇರುವವರ ಆದಾಯ ಹೆಚ್ಚುತ್ತದೆ. ವಾಣಿಜ್ಯ ಬೆಳೆಗಳ ದಲ್ಲಾಳಿಗಳಿಗೆ ಆದಾಯದಲ್ಲಿ ಏರಿಕೆಯಾಗಲಿದೆ.
ADVERTISEMENT
ADVERTISEMENT