ದಿನ ಭವಿಷ್ಯ: ಈ ರಾಶಿಯವರು ಪ್ರಭಾವಿ ವ್ಯಕ್ತಿಗಳನ್ನು ಸಂಧಿಸಬೇಕಾಗಬಹುದು..
Published 15 ಆಗಸ್ಟ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬದುಕನ್ನು ಒಂದು ವ್ಯವಸ್ಥೆಗೆ ತರಲು ದಿನದ ಅಲ್ಪ ಸಮಯವನ್ನು ಮೀಸಲಿಡಿ. ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ವಾಹನಗಳು ಅಥವಾ ನಿತ್ಯ ಬಳಕೆಯ ಯಂತ್ರೋಪಕರಣಗಳು ರಿಪೇರಿಗೆ ಬರಲಿವೆ.
15 ಆಗಸ್ಟ್ 2025, 23:30 IST
ವೃಷಭ
ಗಂಭೀರ ಹಂತದಲ್ಲಿರುವ ವೈಯಕ್ತಿಕ ಹಾಗೂ ಔದ್ಯೋಗಿಕ ಸಂಬಂಧಗಳನ್ನು ಸರಿಗೊಳಿಸುವುದರಲ್ಲಿ ಯಶಸ್ವಿಯಾಗುವಿರಿ. ನಾಲ್ಕು ಜನರ ಮಧ್ಯದಲ್ಲಿ ನಾಯಕತ್ವ ಪಟ್ಟ ಸಿಗಲಿದೆ.
15 ಆಗಸ್ಟ್ 2025, 23:30 IST
ಮಿಥುನ
ಹಳೆಯ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸುವಿರಿ. ವಿದೇಶದಲ್ಲಿ ಉದ್ಯೋಗದ ಅನ್ವೇಷಣೆಗೆ ಒಳ್ಳೆಯ ದಿನ. ಪ್ರಯಾಣ ಸುಗಮವಾಗಿರುವುದಿಲ್ಲ. ಅನಿವಾರ್ಯವಿದ್ದರಷ್ಟೆ ಪ್ರಯಾಣ ಮಾಡಿ.
15 ಆಗಸ್ಟ್ 2025, 23:30 IST
ಕರ್ಕಾಟಕ
ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ತೀರ್ಮಾನಿಸಿ, ಬಂಧುಗಳ ಸಹಾಯ ಸಿಗಲಿದೆ. ತಾಯಿಯ ಆರೋಗ್ಯ ಸುಧಾರಿಸಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ವರಮಾನವನ್ನು ಹೆಚ್ಚಿಸಿಕೊಳ್ಳುವಿರಿ.
15 ಆಗಸ್ಟ್ 2025, 23:30 IST
ಸಿಂಹ
ಯೋಜನೆಗಳು ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗಲಿವೆ. ವಾಹನ ಚಾಲನೆಯಂಥ ಕಾರ್ಯದಲ್ಲಿ ಯಾವುದೇ ರೀತಿಯ ಆತುರ ಒಳ್ಳೆಯದಲ್ಲ. ಹಣ್ಣು ಮಾರಾಟಗಾರರಿಗೆ ಲಾಭ ಇರುವುದು.
15 ಆಗಸ್ಟ್ 2025, 23:30 IST
ಕನ್ಯಾ
ಪ್ರಭಾವಿ ವ್ಯಕ್ತಿಗಳನ್ನು ಸಂಧಿಸಬೇಕಾಗಬಹುದು. ಹೆಚ್ಚಿನ ಮಾಹಿತಿಗಳನ್ನು ಪಡೆಯುವಿರಿ. ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಕೆಲವು ವಿಷಯಗಳು ಬೇಸರ ಹುಟ್ಟಿಸುವಂತಾಗಲಿದೆ.
15 ಆಗಸ್ಟ್ 2025, 23:30 IST
ತುಲಾ
ಮನೆಗಾಗಿ ವಿಲಾಸಿ ಸಾಮಗ್ರಿಗಳನ್ನು ಖರೀದಿಸುವುದು ಖರ್ಚಿಗೆ ದಾರಿಯಾಗಲಿದೆ. ದೈವಾನುಗ್ರಹದಿಂದ ಒಳ್ಳೆಯ ಲಾಭವನ್ನು ಪಡೆಯುವಿರಿ. ದೂರ ದೃಷ್ಟಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗಿ.
15 ಆಗಸ್ಟ್ 2025, 23:30 IST
ವೃಶ್ಚಿಕ
ಆದಾಯದಲ್ಲಿ ಸಣ್ಣ ಪುಟ್ಟ ಸಾಲದ ಹಣವನ್ನು ಹಿಂತಿರುಗಿಸುವ ಬಗ್ಗೆ ತೀರ್ಮಾನಿಸಿ. ಮದುವೆಯ ವಿಷಯಗಳು ಪ್ರಸ್ತಾಪಕ್ಕೆ ಬರಲಿವೆ. ಮಕ್ಕಳ ಮತ್ತು ಮನೆಯವರ ಆರೋಗ್ಯ ಕಡೆಗೆ ಕಾಳಜಿ ವಹಿಸಿ.
15 ಆಗಸ್ಟ್ 2025, 23:30 IST
ಧನು
ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಸಂತಸವಿರುವುದು. ಸ್ನೇಹಿತರೊಂದಿಗೆ ಭೂಖರೀದಿಗಾಗಿ ಪ್ರಯತ್ನ ನಡೆಸುವಿರಿ. ಮನೆಯಲ್ಲಿ ಸ್ವಲ್ಪ ಮಟ್ಟಿನ ಹೊಂದಾಣಿಕೆ ಅಗತ್ಯ ಎನಿಸಲಿದೆ.
15 ಆಗಸ್ಟ್ 2025, 23:30 IST
ಮಕರ
ಉತ್ತಮ ಗುಣಗಳು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಹಾಯ ಮಾಡುವುದು. ವಿಷಯವನ್ನು ಮುಂದೂಡುವುದು ಸರಿಯಲ್ಲ. ನಿರ್ಮಾಣ ಕಾರ್ಯದಲ್ಲಿರುವವರಿಗೆ ಆಶಾಕಿರಣ ದೊರೆಯುತ್ತದೆ.
15 ಆಗಸ್ಟ್ 2025, 23:30 IST
ಕುಂಭ
ಇಷ್ಟು ದಿನಗಳ ಕಠಿಣ ಪರಿಶ್ರಮದಿಂದ ಬಿಡುಗಡೆ ಬೇಕೆನಿಸಲಿದೆ. ಅರ್ಧಕ್ಕೆ ನಿಂತ ಎಲ್ಲಾ ಕಾರ್ಯಗಳಿಗೆ ಇಂದು ಪುನಃ ಚಾಲನೆ ದೊರೆಯಲಿವೆ. ಸ್ನೇಹಿತರೊಂದಿಗಿನ ಪ್ರವಾಸ ಯೋಜನೆ ಯೋಚನೆಯಾಗಿ ಉಳಿಯುವುದು.
15 ಆಗಸ್ಟ್ 2025, 23:30 IST
ಮೀನ
ವೃತ್ತಿ ಬದುಕಿನ ಯೋಜನೆಯ ಸುಳಿವು ಯಾರಲ್ಲೂ ಹಂಚಿಕೊಳ್ಳಬೇಡಿ. ನಂಬಿಸಿ ಮೋಸ ಮಾಡುವವರು ಸುತ್ತಲೂ ಇರುವರು. ವ್ಯವಹಾರದಲ್ಲಿ ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ಬರಲಿದೆ.
15 ಆಗಸ್ಟ್ 2025, 23:30 IST