ದಿನ ಭವಿಷ್ಯ: ಈ ರಾಶಿಯವರಿಗೆ ಇಂದಿನ ಸಮಯವು ಅವಿಸ್ಮರಣೀಯವಾಗುವುದು..
Published 19 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಶಿಕ್ಷಕರಾಗಿದ್ದರೆ ಗಿಳಿ ಪಾಠದಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಹಬ್ಬದ ಕೆಲಸಗಳು ಮಕ್ಕಳ ಸಹಾಯದಿಂದ ಸುಗಮವಾಗಿ ನಡೆಯಲಿವೆ.
ವೃಷಭ
ವ್ಯವಹಾರ ವಿಶ್ಲೇಷಣೆಗೂ ಹಾಗೂ ವಾಸ್ತವ ಪರಿಸ್ಥಿತಿಗೂ ಹಲವು ವ್ಯತ್ಯಾಸಗಳು ಉಂಟಾಗಬಹುದು. ಚಿನ್ನ, ಬೆಳ್ಳಿ ವ್ಯಾಪಾರಿಗಳು ಅಭಿವೃದ್ಧಿ ಹೊಂದುವರು. ಊಟ ಉಪಹಾರಗಳನ್ನು ಸ್ವಗೃಹದಲ್ಲಿ ಮಾಡಿ.
ಮಿಥುನ
ಎಂಜಿನಿಯರ್‌ಗಳಿಗೆ ಹಿರಿಯ ಅನುಭವಿ ವ್ಯಕ್ತಿಗಳಿಂದ ಮಾರ್ಗದರ್ಶನ ದೊರೆಯುತ್ತದೆ. ಬರವಣಿಗೆಯ ಹವ್ಯಾಸಗಳಿಂದ ವರಮಾನ ಹೆಚ್ಚಲಿದೆ. ಇಂದಿನ ಸಮಯವು ಅವಿಸ್ಮರಣೀಯವಾಗುವುದು.
ಕರ್ಕಾಟಕ
ಇಷ್ಟದ ವಸ್ತು ಉಡುಗೊರೆಯ ರೂಪದಲ್ಲಿ ಕೈಸೇರುತ್ತದೆ. ನಿವೇಶನ ಅಥವಾ ಜಮೀನು ಖರೀದಿಸುವ ಯೋಚನೆಗಳು ಬರಲಿವೆ. ಕೆಮ್ಮು, ಶೀತವನ್ನು ಕಡೆಗಣಿಸದಿರಿ.
ಸಿಂಹ
ಮನದಲ್ಲಿರುವ ಆಲೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಲು ಬೇಕಾದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಿ. ಯಾರಾದರೂ ಜೀವನದ ಬಗ್ಗೆ ಕೆಟ್ಟದಾಗಿ ಯೋಚನೆಯನ್ನು ಮಾಡುತ್ತಿದ್ದರೆ ತಡೆಗಟ್ಟಲು ಸಾಧ್ಯ.
ಕನ್ಯಾ
ಮಸಾಲೆ ಪದಾರ್ಥ ಅಥವಾ ಖಾದ್ಯ ವಸ್ತುಗಳ ಮಾರಾಟದ ಉದ್ಯೋಗದವರು ನೆಮ್ಮದಿ ಕಾಣಬಹುದು. ಸಂಬಂಧಿಕರ ಆಗಮನದಿಂದ ಸಡಗರ ಹೆಚ್ಚಳವಾಗುವುದು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ.
ತುಲಾ
ನವದಂಪತಿಗೆ ಉಲ್ಲಾಸಕರ ಸಮಯವನ್ನು ಅನುಭವಿಸಲು ಕಾಲಾವಕಾಶ ಸಿಗಲಿದೆ. ಮಕ್ಕಳ ಸಣ್ಣ ಪುಟ್ಟ ಜಗಳಗಳನ್ನು ಬಗೆ ಹರಿಸಲು ಭಾಗಿಯಾಗದಿರಿ. ಸ್ವಯಂ ಸಾಮರ್ಥ್ಯದಿಂದ ಅವಕಾಶ ಸಿಗಲಿದೆ.
ವೃಶ್ಚಿಕ
ಮನಸ್ಸಿಗೆ ಒಪ್ಪಿಗೆ ಇಲ್ಲದಂಥ ಕೆಲಸಗಳನ್ನು ಮಾಡುವಂತಹ ಸಾಹಸಕ್ಕೆ ಕೈಹಾಕಲು ಹೋಗದಿರಿ. ವಾರ್ಷಿಕವಾಗಿ ಆಚರಿಸುವ ದೇವತಾ ಕಾರ್ಯಗಳತ್ತ ಗಮನವನ್ನು ನೀಡಿ. ಹೊಸ ವಸ್ತುಗಳ ಖರೀದಿ ಇಂದು ಬೇಡ.
ಧನು
ಮಗನ ಕೆಲಸಗಳಿಗಾಗಿ ಅಲೆದಾಟ ಹೆಚ್ಚಿ ದಣಿವಾದರೂ ಕೆಲಸ ಕೈಗೊಂಡಿದ್ದಕ್ಕೆ ಮನಸ್ಸಿಗೆ ಸಮಾಧಾನ ಸಿಗುವುದು. ವ್ಯಕ್ತಿಗಳನ್ನು ಸರಿಯಾಗಿ ಮಾತನಾಡಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಉತ್ತಮ.
ಮಕರ
ಶತ್ರುಗಳ ಪ್ರಾಬಲ್ಯವನ್ನು ನಿಮ್ಮ ಬುದ್ಧಿಮಟ್ಟದಿಂದ ಮಟ್ಟ ಹಾಕುವ ಸಮಯ ಇದಾಗಲಿದೆ. ಮನೆಯ ವ್ಯಕ್ತಿಗಳ ದೂರಪ್ರಯಾಣವು ಆತಂಕಕ್ಕೆ ಎಡೆ ಮಾಡಿಕೊಡಬಹುದು. ರಫ್ತು ವ್ಯಾಪಾರದಿಂದ ಹೇರಳ ಲಾಭ ಸಿಗುತ್ತದೆ.
ಕುಂಭ
ಅವಮಾನಿಸಿದ ವ್ಯಕ್ತಿಗಳಿಂದ ಗೌರವ ಪಡೆಯುವಂತಹ ದಿನ. ಮಗಳು ಮತ್ತು ಸೊಸೆ ಎನ್ನುವ ಭಾವನೆಯಿಲ್ಲದೆ ಸಮಾನವಾಗಿ ಕಾಣುವ ನಿಮ್ಮ ಗುಣದ ಉತ್ತಮ ಫಲಗಳು ಕಾಣಸಿಗುತ್ತವೆ.
ಮೀನ
ವಿದ್ಯಾವಂತರಾಗಿದ್ದರೂ ಪ್ರಜ್ಞಾವಂತಿಕೆ ಕಳೆದುಕೊಂಡರೆ ವಿದ್ಯೆಗೆ ಬೆಲೆ ಬರುವುದಿಲ್ಲ. ತಾಯಿ ತಂದೆ ಆರೋಗ್ಯದ ಮೇಲೆ ವಿಶೇಷ ಕಾಳಜಿ ವಹಿಸಿ. ಆಹಾರದಲ್ಲಿ ಅನಿಶ್ಚಿತ ಬದಲಾವಣೆಗಳು ಬೇಡ.