ದಿನ ಭವಿಷ್ಯ: ಆಫೀಸಿನ ಜನರ ಬಗ್ಗೆ ಗಮನವಿಟ್ಟುಕೊಳ್ಳಿ
Published 30 ಜನವರಿ 2026, 0:13 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉತ್ತಮವಾಗಿ ಅಂಕಗಳನ್ನು ಪಡೆಯುತ್ತಿದ್ದ ಮಕ್ಕಳು ಏಕಾಗ್ರತೆಯನ್ನು ಕಡಿಮೆ ಮಾಡಿದ ಕಾರಣ ಗಮನಹರಿಸಬೇಕಾಗುತ್ತದೆ. ದರ್ಜಿಯ ನೌಕರರಿಗೆ ಆರ್ಥಿಕವಾಗಿ ಅನುಕೂಲವಾಗುವುದು.
ವೃಷಭ
ಇಂದಿನ ಪರಿಸ್ಥಿತಿ ಮನದ ಭಾವನೆಗಳನ್ನು ಇತರರೊಂದಿಗೆ ಹಂಚಿ ಕೊಳ್ಳುವಂತೆ ಪ್ರೇರೇಪಿಸುತ್ತದೆ. ಮಗಳಿಗೆ ತಾಯಿಯ ಕಡೆಯಿಂದ ಅಥವಾ ಹತ್ತಿರದ ಸಂಬಂಧಿಕರಿಂದ ವರ ನಿಶ್ಚಯವಾಗುವುದು.
ಮಿಥುನ
ಗೃಹಿಣಿಯರು ದೇವರಿಗೆ ವಿಶೇಷವಾಗಿ ಪೂಜೆ ಪುನಸ್ಕಾರವನ್ನು ನಡೆಸುವ ಮೂಲಕ ಪುಣ್ಯ ಸಂಪಾದನೆ ಮಾಡುವಿರಿ. ಕೆಲಸದಲ್ಲಿ ಬದಲಾವಣೆ ಬಯಸಿದಲ್ಲಿ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿ.
ಕರ್ಕಾಟಕ
ವ್ಯವಹಾರದಲ್ಲಿ ಬೇಕಾದ ರೀತಿಯಲ್ಲಿ ಲಾಭ ಮಾಡಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಿರಿ. ಬಟ್ಟೆ ವ್ಯಾಪಾರಿಗಳು ರಿಯಾಯಿತಿ ಮಾರಾಟಗಳಿಂದ ಲಾಭವನ್ನು ಹೊಂದುವಿರಿ.
ಸಿಂಹ
ಮಧ್ಯಮವರ್ಗದ ಕುಟುಂಬದಲ್ಲಿ ಸಂಬಂಧಿಕರ ಎದುರು ಕೆಲವು ಇರಿಸು ಮುರಿಸುಗಳು ಆಗಬಹುದು. ಬೇಸರ ಪಡುವುದು ಬೇಡ. ಆಫೀಸಿನ ಜನರ ಬಗ್ಗೆ ಗಮನವಿಟ್ಟುಕೊಳ್ಳಿ. ಪರ್ವತಾರೋಹಣ ಮಾಡುವ ಸಾಧ್ಯತೆ ಇದೆ.
ಕನ್ಯಾ
ಅನುಕೂಲಕರ ವಾತಾವರಣವಿದ್ದಲ್ಲಿ ವಿಶೇಷ ದಿನಗಳಿಗೆ ಬೇಕಾದ ವಸ್ತು ಖರೀದಿ ಮಾಡಿ. ವೈದ್ಯರಿಗೆ ಬಿಡುವಿಲ್ಲದ ಅಭ್ಯಾಸದ ಜತೆಗೆ ಉನ್ನತ ಜವಾಬ್ದಾರಿ ಸಿಗಲಿದೆ.
ತುಲಾ
ಮೋಸದಿಂದ ಬೇರೆಯವರ ಕೈ ಸೇರಿದ ಹಣ ಹಿಂತಿರುಗುವ ಸೂಚನೆಗಳು ಕಾಣುತ್ತವೆ. ಕಠಿಣ ಪರಿಶ್ರಮದಿಂದ ಬೆಳೆಸಿದ ಸಂಸ್ಥೆ ಜನಮಾನಸವನ್ನು ಗೆಲ್ಲುವುದು. ಧಾರ್ಮಿಕ ಕಾರ್ಯಕ್ಕೆ ಹಣವ್ಯಯವಾಗುವುದು.
ವೃಶ್ಚಿಕ
ತಮಾಷೆಯ ಮಾತುಗಳು ಹಿರಿಯರ ಮನಸ್ಸನ್ನು ನೋಯಿಸುವುದು. ಮಾತಿನಲ್ಲಿ ಹಿಡಿತವಿರಲಿ. ದಾಂಪತ್ಯದಲ್ಲಿ ಪತಿ ಪತ್ನಿಯರ ನಡುವೆ ಪ್ರಬುದ್ಧತೆಯಿಂದ ಸಾಮರಸ್ಯ ಹೆಚ್ಚುತ್ತದೆ. ಅನವಶ್ಯಕ ಚಿಂತೆ ಬೇಡ.
ಧನು
ಹೂಡಿಕೆ ಮಾಡುವುದಿದ್ದರೆ ಅನುಭವಸ್ಥ ನಂಬಿಕಸ್ಥರಿಂದ ಕೇಳಿ ತಿಳಿದು ನಂತರವಷ್ಟೇ ಮಾಡಿ. ವೃತ್ತಿಯಲ್ಲಿ ಅನಿರೀಕ್ಷಿತ ಸ್ಥಾನ-ಮಾನದಲ್ಲಿ ಏರುಪೇರಾಗುವಂಥ ಬದಲಾವಣೆಗಳಾಗಬಹುದು.
ಮಕರ
ಗೃಹ ವಸ್ತುಗಳ ಖರೀದಿ ಮಾಡಿ ಬಂದ ನಂತರ ನೀವು ಕೊಟ್ಟ ಹಣ ದುಬಾರಿಯಾಯಿತೆಂದು ಪರಿತಪಿಸಬೇಕಾದೀತು. ರಿಯಾಯಿತಿಯ ವಸ್ತ್ರ ಖರೀದಿಯಿಂದಾಗಿ ಹೆಚ್ಚು ಹಣವನ್ನು ಉಳಿತಾಯ ಮಾಡುವಿರಿ.
ಕುಂಭ
ವಿಶೇಷ ಘಟನೆಯಿಂದಾಗಿ ಕಾರ್ಯಾಲಯದ ಎಲ್ಲಾ ವ್ಯಕ್ತಿಗಳು ನಿಮಗೆ ಹತ್ತಿರದವರಾಗುತ್ತಾರೆ. ನಡೆಸುತ್ತಿರುವ ಶುಭ ಕಾರ್ಯಕ್ರಮಗಳಿಗೆ ಅಶೌಚದ ಆತಂಕ ಎದುರಾಗುವುದು.
ಮೀನ
ಸ್ವಗ್ರಾಮ ಬಿಟ್ಟು ಬೇರೆ ಎಲ್ಲಿಯಾದರೂ ಆಸ್ತಿಯನ್ನು ಖರೀದಿಸುವ ಯೋಚನೆ ಇದ್ದಲ್ಲಿ ಸರಿಯಾದ ವ್ಯಕ್ತಿಯಲ್ಲಿ ವಿಚಾರವನ್ನು ನಡೆಸಿ. ಬಂಧು ಬಾಂದವರೊಂದಿಗೆ ಅತ್ಯಂತ ಗೌಪ್ಯ ವಿಷಯವನ್ನು ತಿಳಿಸದಿರಿ.