ಮಹಾರಾಷ್ಟ್ರದ ಅಭಿವೃದ್ಧಿಗೆ ವಿಶೇಷವಾಗಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪವಾರ್ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ
ದ್ರೌಪದಿ ಮುರ್ಮು ರಾಷ್ಟ್ರಪತಿ
ಅಜಿತ್ ದಾದಾ’ ಅವರು ತಳಮಟ್ಟದಲ್ಲಿ ಬಲವಾದ ಸಂಪರ್ಕ ಹೊಂದಿದ್ದ ಜನ ನಾಯಕ. ಗ್ರಾಮೀಣ ಪ್ರದೇಶದ ಏಳಿಗೆಗೆ ಶ್ರಮಿಸಿದವರು. ಮಹಾರಾಷ್ಟ್ರ ಮತ್ತು ಭಾರತದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ
ನರೇಂದ್ರ ಮೋದಿ ಪ್ರಧಾನಿ
ಅಜಿತ್ ಪವಾರ್ ಅವರ ಅಗಲಿಕೆಯಿಂದ ಎನ್‌ಡಿಎ ಕುಟುಂಬಕ್ಕೆ ಮಾತ್ರವಲ್ಲದೆ ನನಗೂ ವೈಯಕ್ತಿವಾಗಿ ನಷ್ಟವಾಗಿದೆ
ಅಮಿತ್ ಶಾ ಕೇಂದ್ರ ಗೃಹ ಸಚಿವ
ಇದನ್ನು ನಂಬಲು ಆಗುತ್ತಿಲ್ಲ. ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಶೂನ್ಯ ಅವರಿಸಿದೆ. ರಾಜ್ಯದ ಬಗ್ಗೆ ಚೆನ್ನಾಗಿ ತಿಳಿದಿದ್ದ ಸಮಸ್ಯೆಗಳ ಬಗ್ಗೆ ಆಳವಾದ ಅರಿವು ಹೊಂದಿದ್ದ ನಾಯಕ ಅವರಾಗಿದ್ದರು
ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಮಹಾರಾಷ್ಟ್ರ
ನಾನು ಅಣ್ಣನನ್ನು ಕಳೆದುಕೊಂಡಿದ್ದೇನೆ. ಅವರು ಉತ್ತಮ ಸಹೋದ್ಯೋಗಿ ಆತ್ಮೀಯ ಸ್ನೇಹಿತನಾಗಿದ್ದರು. ಅವರ ಸಾವು ದುರದೃಷ್ಟಕರ. ವೈಯಕ್ತಿಕವಾಗಿ ನನಗೆ ತೀವ್ರ ದುಃಖ ತರಿಸಿದೆ. ವಿಮಾನ ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು
ಏಕನಾಥ ಶಿಂದೆ ಉಪ ಮುಖ್ಯಮಂತ್ರಿ ಮಹಾರಾಷ್ಟ್ರ
ಮ್ಮ ನಡುವೆ ಉತ್ತಮ ಬಾಂಧವ್ಯ ಇತ್ತು. ಅಜಿತ್ ಮುಕ್ತ ಮನಸ್ಸಿನ ವ್ಯಕ್ತಿ. ರಾಜಕೀಯದಲ್ಲಿ ಅವರು ಪಥ ಬದಲಿಸಿದ್ದರೂ ನಮ್ಮಿಬ್ಬರ ಸಂಬಂಧ ಕಡಿದುಕೊಂಡಿರಲಿಲ್ಲ