ಸಮಷ್ಠಿಪುರ(ಬಿಹಾರ): ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವದಲ್ಲಿ ಎನ್ಡಿಎ ಮೈತ್ರಿಕೂಟವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳ ದಾಖಲೆಗಳನ್ನು ಮುರಿಯಲಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.

ಬಿಹಾರದ ಸಮಷ್ಠಿಪುರದಲ್ಲಿ ಸಾರ್ವಜನಿಕ ಚುನಾವಣಾ ರ್ಯಾಲಿಯಲ್ಲಿ ಅವರು ಭಾಗವಹಿಸಿದ್ದರು.

‘ನಿತೀಶ್ ಕುಮಾರ್ ಅವರು 2005ರಲ್ಲಿ ಬಿಹಾರದಲ್ಲಿ ಅಧಿಕಾರಕ್ಕೆ ಬಂದರು. ಆದರೆ, ದಶಕಗಳ ಕಾಲ ಅವರ ಆಡಳಿತಕ್ಕೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಡ್ಡಿಪಡಿಸಿದೆ. ಕಳೆದ 11 ವರ್ಷಗಳಲ್ಲಿ ಬಿಹಾರಕ್ಕೆ ಕೇಂದ್ರ ಸರ್ಕಾರದ ನೆರವು ಹೆಚ್ಚಾಗಿದೆ. ಹೂಡಿಕೆದಾರರು ಇಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ’ ಎಂದು ಮೋದಿ ತಿಳಿಸಿದ್ದಾರೆ.

ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರಿಗೆ ಮೊಬೈಲ್ ಪೋನ್ನ ಟಾರ್ಚ್ ಬೆಳಗಿಸಲು ಹೇಳಿದರು. ನಂತರ, ‘ಎಲ್ಲಾ ಜನರಿಗೆ ಆಧುನಿಕ ಗ್ಯಾಜೆಟ್ಗಳು ಲಭ್ಯವಿರುವಾಗ, ಯಾರಿಗೂ ಲಾಟೀನಿನ ಅವಶ್ಯಕತೆಯಿಲ್ಲ’ ಎಂದು ಮೋದಿ ಅವರು ಆರ್ಜೆಡಿ ಪಕ್ಷಕ್ಕೆ ಕುಟುಕಿದರು.

ವಿರೋಧ ಪಕ್ಷಗಳ ಒಕ್ಕೂಟವು ‘ಮಹಾಘಟಬಂಧನ’ವಾಗಿಲ್ಲ, ಬದಲಾಗಿ ಅವರೊಳಗೆ ಕಿತ್ತಾಡಿಕೊಳ್ಳುತ್ತಿರುವ ‘ಲಟ್ಬಂಧನ’ವಾಗಿದೆ. ಎನ್ಡಿಎ ಒಕ್ಕೂಟವು ಅದಕ್ಕೆ ವ್ಯತಿರಿಕ್ತವಾಗಿದ್ದು, ಒಗ್ಗಟಿನಿಂದಿದೆ ಎಂದಿದ್ದಾರೆ.

243 ಸಂಖ್ಯಾಬಲದ ಬಿಹಾರ ವಿಧಾನಸಭಾ ಚುನಾವಣೆಗೆ ನ.6 ಹಾಗೂ ನ.11ರಂದು ಎರಡು ಹಂತದಲ್ಲಿ ಚುನಾವಣೆ ಜರುಗಲಿದೆ. ನ.14ರಂದು ಫಲಿತಾಂಶ ಘೋಷಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.