ಸೇಲಂ (ತಮಿಳುನಾಡು): ಪೂರ್ವ ಲಡಾಖ್ನಲ್ಲಿ ಭಾರತ–ಚೀನಾ ಸೇನೆ ಹಿಂಪಡೆಯುವಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಒಂಬತ್ತು ಸುತ್ತಿನ ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆ ಬಳಿಕ ಇದು ಸಾಧ್ಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಭಾರತೀಯ ಜನತಾ ಯುವ ಮೋರ್ಚಾದ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭಾರತವು ತನ್ನ ಗಡಿಯಲ್ಲಿ ಯಾವುದೇ ರೀತಿಯ ಏಕಪಕ್ಷೀಯ ಕ್ರಮಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಅಂತಹ ಪ್ರಯತ್ನ ಕಂಡುಬಂದಲ್ಲಿ ಅದನ್ನು ತಡೆಯಲು ಯಾವುದೇ ರೀತಿಯ ಬೆಲೆ ತೆರಲೂ ಸಿದ್ಧವಿದೆ’ ಎಂದು ಹೇಳಿದ್ದಾರೆ.

ಓದಿ:ಜನರ ಸಂಕಟದಿಂದ ಲಾಭ ಗಳಿಸುವ ಕೇಂದ್ರ: ಇಂಧನ ಬೆಲೆ ಏರಿಕೆ ವಿರುದ್ಧ ಸೋನಿಯಾ ಕಿಡಿ

‘ಸೇನಾ ಹಿಂಪಡೆಯುವಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ದುರದೃಷ್ಟವಶಾತ್, ಭಾರತೀಯ ಸೇನೆಯ ಶೌರ್ಯದ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸುತ್ತಿದೆ. ಇದು ಮಹೋನ್ನತ ತ್ಯಾಗ ಮಾಡುವ ಯೋಧರನ್ನು ಅವಮಾನಿಸಿದಂತಲ್ಲವೇ’ ಎಂದು ರಾಜನಾಥ್ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಎಂದಿಗೂ ಏಕತೆ, ಭೌಗೋಳಿಕ ಸಮಗ್ರತೆ ಹಾಗೂ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದೂ ಅವರು ಹೇಳಿದ್ದಾರೆ.

ಓದಿ:ಆಸ್ಪತ್ರೆಯಿಂದ ತೆರಿಗೆ ವಂಚನೆ: ಕೋಟ್ಯಂತರ ರೂಪಾಯಿ ವಹಿವಾಟಿಗೆ ಲೆಕ್ಕವೇ ಇಲ್ಲ

ಕಳೆದ ವರ್ಷ ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಚೀನಾ ಯೋಧರ ಜತೆ ನಡೆದಿದ್ದ ಸಂಘರ್ಷದಲ್ಲಿ ಭಾರತೀಯ ಸೇನೆಯ 20 ಮಂದಿ ಹುತಾತ್ಮರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.