ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ನ್ಯಾಯ ಯಾತ್ರೆ: ನಾಗಾಲ್ಯಾಂಡ್ ಜನರೊಂದಿಗೆ ರಾಹುಲ್ ಸಂವಾದ

Published 16 ಜನವರಿ 2024, 7:33 IST
Last Updated 16 ಜನವರಿ 2024, 7:33 IST
ಅಕ್ಷರ ಗಾತ್ರ

ಕೊಹಿಮ(ನಾಗಲ್ಯಾಂಡ್‌): ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ನ್ಯಾಯ ಯಾತ್ರೆ ಮೂರನೇ ದಿನವಾದ ಇಂದು ನಾಗಾಲ್ಯಾಂಡ್ ರಾಜಧಾನಿ ಕೊಹಿಮ ತಲುಪಿದೆ.

ಮೊದಲಿಗೆ ಕೊಹಿಮ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಾಹುಲ್, ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ. ನಂತರ ಜನರನುದ್ದೇಶಿಸಿ ಮಾತನಾಡಿದ ಅವರು, ‘ನೀವು ಚಿಕ್ಕ ರಾಜ್ಯದವರಾದರೇನು, ನೀವು ದೇಶದ ಇತರಷ್ಟೇ ಸಮಾನರು. ಭಾರತ್‌ ಜೋಡೊ ನ್ಯಾಯ ಯಾತ್ರೆಯ ಉದ್ದೇಶವೂ ಅದೇ ಆಗಿದೆ’ ಎಂದು ಹೇಳಿದರು.

‘ವಿವಿಧ ಸಂಸ್ಕೃತಿ, ಧರ್ಮ, ಭಾಷೆಗಳಿಂದ ಬೇರ್ಪಟ್ಟಿದ್ದ ಎಲ್ಲ ಮನಸ್ಸುಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಕಳೆದ ಬಾರಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡಿದ್ದೇವು. ಪಶ್ವಿಮದಿಂದ ಪೂರ್ವದ ಕಡೆಗೆ ಯಾತ್ರೆ ಕೈಗೊಳ್ಳಬೇಕು ಎಂದು ಆಗ ನಾವು ಭಾವಿಸಿದ್ದೇವು. ಇದೀಗ ಅದನ್ನು ಸಾಧಿಸಿದ್ದೇವೆ’ ಎಂದು ಹೇಳಿದರು.

‘ಜನರಿಗೆ ಸಮಾನ ನ್ಯಾಯ ಒದಗಿಸುವುದರ ಜೊತೆಗೆ ದೇಶದ ರಾಜಕೀಯ, ಆರ್ಥಿಕ ರಚನೆಯನ್ನು ಹೆಚ್ಚು ಸಮಾನವಾಗಿ ಹಾಗೂ ಎಲ್ಲರನ್ನೂ ಒಳಗೊಳ್ಳುವ ಹಾಗೆ ಮಾಡುವುದು ಈ ಯಾತ್ರೆಯ ಉದ್ದೇಶವಾಗಿದೆ’ ಎಂದರು.

ಯುದ್ಧ ಸ್ಮಾರಕಕ್ಕೆ ರಾಹುಲ್ ಭೇಟಿ

ಯುದ್ಧ ಸ್ಮಾರಕಕ್ಕೆ ರಾಹುಲ್ ಭೇಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT