ಗ್ಯಾಂಗ್ಟೋಕ್: ಸಿಕ್ಕಿಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಆರು ಯೋಧರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಎನ್‌ಡಿಆರ್‌ಎಫ್‌ನ 23 ಸದಸ್ಯರ ತಂಡ ಮಂಗಳವಾರ ಶೋಧ ಕಾರ್ಯಕ್ಕೆ ಕೈಜೋಡಿಸಿದೆ. ಮಂಗನ್ ಜಿಲ್ಲೆಯ ಲಾಚೆನ್ ಪಟ್ಟಣದ ಸಮೀಪ ಭಾನುವಾರ ರಾತ್ರಿ 7ರ ಸುಮಾರಿಗೆ ಸೇನೆಯ ಶಿಬಿರ ಇರುವ ಜಾಗದಲ್ಲಿ ಭೂಕುಸಿತ ಸಂಭವಿಸಿತ್ತು. ಘಟನೆಯಲ್ಲಿ ಮೂವರು ಯೋಧರು ಮೃತಪಟ್ಟು ಆರು ಯೋಧರು ನಾಪತ್ತೆಯಾಗಿದ್ದರು.