ನವದೆಹಲಿ: ‘ಮನಮೋಹನ್ ಸಿಂಗ್ ಅವರು ವೈದ್ಯರಾಗಬೇಕೆಂದು ಅವರ ತಂದೆ ಬಯಸಿದ್ದರಿಂದ ಪ್ರಿ-ಮೆಡಿಕಲ್ ಕೋರ್ಸ್ಗೆ ಸೇರಿಸಿದ್ದರು. ಆದರೆ, ಒಂದೆರಡು ತಿಂಗಳ ನಂತರ ವೈದ್ಯಕೀಯ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡರು’

– ಮನಮೋಹನ್ ಅವರ ಮಗಳು ದಮನ್ ಸಿಂಗ್, ತಮ್ಮ ತಂದೆಯ ಕುರಿತು ಬರೆದ ಪುಸ್ತಕದಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದಾರೆ.

ದಮನ್ ಬರೆದಿರುವ ‘ಸ್ಟ್ರಿಕ್ಟ್ಲಿ ಪೊಲಿಟಿಕಲ್: ಮನಮೋಹನ್ ಆ್ಯಂಡ್ ಗುರುಶರನ್’ ಪುಸ್ತಕ 2014ರಲ್ಲಿ ಪ್ರಕಟಗೊಂಡಿತ್ತು. ಅರ್ಥಶಾಸ್ತ್ರ ವಿಷಯದಲ್ಲಿ ಅವರಿಗೆ ಅತೀವ ಪ್ರೀತಿಯಿತ್ತು ಎಂದು ಅವರು ಬರೆದಿದ್ದಾರೆ.

‘ಮಗನನ್ನು ವೈದ್ಯನಾಗಿಸಬೇಕು ಎಂಬ ಕಾರಣದಿಂದ ವೈದ್ಯಕೀಯದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಎರಡು ವರ್ಷಗಳ ಎಫ್ಎಸ್ಸಿ ಕೋರ್ಸ್ಗೆ ಸೇರಿಸಿದ್ದರು. ಒಂದೆರಡು ತಿಂಗಳ ನಂತರ, ಅವರು ಆ ಕೋರ್ಸ್ನಲ್ಲಿ ಆಸಕ್ತಿ ಕಳೆದುಕೊಂಡರು. ವಾಸ್ತವವಾಗಿ, ವಿಜ್ಞಾನ ವಿಷಯವನ್ನು ಅಧ್ಯಯನ ಮಾಡುವ ಆಸಕ್ತಿ ಅವರಿಗೆ ಇರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

‘ನಾನು ಅಪ್ಪನಿಗೆ ನೆರವಾಗಲು ಕೆಲ ಸಮಯ ಅವರ ಜತೆ ಅಂಗಡಿಗೆ ಹೋಗುತ್ತಿದ್ದೆ. ಆದರೆ ಅದೂ ನನಗೆ ಇಷ್ಟವಾಗಲಿಲ್ಲ, ಏಕೆಂದರೆ, ನನ್ನನ್ನು ಅಲ್ಲಿ ಕೀಳಾಗಿ ಕಾಣಲಾಯಿತು. ನೀರು, ಚಹಾ ತರುವ ಕೆಲಸವನ್ನು ನನಗೆ ನೀಡಲಾಯಿತು. ಶಿಕ್ಷಣ ಪಡೆಯುವುದೇ ಒಳಿತು ಎಂದು ಯೋಚಿಸಿ ಕಾಲೇಜು ಸೇರಲು ನಿರ್ಧರಿಸಿದೆ. 1948ರಲ್ಲಿ ಹಿಂದೂ ಕಾಲೇಜಿಗೆ ಪ್ರವೇಶ ಪಡೆದೆ’ ಎಂದು ದಮನ್ ಅವರು ತಮ್ಮ ತಂದೆಯವರ ಹೇಳಿಕೆಯನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

‘ಬಡತನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಾನು ಆಸಕ್ತಿ ಹೊಂದಿದ್ದೇನೆ. ಕೆಲವು ದೇಶಗಳು ಏಕೆ ಹಿಂದುಳಿದಿವೆ, ಕೆಲವು ದೇಶಗಳು ಏಕೆ ಶ್ರೀಮಂತವಾಗಿವೆ ಎಂಬುದರ ಬಗ್ಗೆ ಯೋಚಿಸುತ್ತಿದ್ದೆ. ಇಂತಹ ಪ್ರಶ್ನೆಗಳನ್ನು ಅರ್ಥಶಾಸ್ತ್ರದಲ್ಲಿ ಕೇಳಲಾಗುತ್ತದೆ ಎಂದು ನನಗೆ ತಿಳಿಸಲಾಯಿತು’ ಎಂದು ಸಿಂಗ್ ಅವರು ಹೇಳಿರುವುದನ್ನು ಪುಸ್ತಕದಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.