ನವದೆಹಲಿ: ‘ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ ಹಿಂದಿ ಭಾಷೆಯನ್ನು ಹೇರುತ್ತಿದೆ’ ಎಂದು ರಾಜ್ಯಸಭೆಯಲ್ಲಿ ತಮಿಳುನಾಡಿನ ವಿವಿಧ ಸದಸ್ಯರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡಿದ್ದ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು, ‘ಗೃಹ ಸಚಿವಾಲಯವು ರಾಜ್ಯವನ್ನು ಈ ವಿಷಯದಲ್ಲಿ ಬಲಿಪಶು ಮಾಡುತ್ತಿದೆ’ ಎಂದು ಟೀಕಿಸಿದರು.

‘ಹಿಂದುತ್ವ ನೀತಿ, ಆರ್ಎಸ್ಎಸ್ ನೀತಿ, ಹಿಂದಿ, ಸಂಸ್ಕೃತ ಭಾಷೆ ಹೇರಿಕೆ ವಿರೋಧಿಸುತ್ತೇವೆ ಎಂದು ಪ್ರಕೃತಿ ವಿಕೋಪ ಪರಿಹಾರ ನಿಧಿ ಬಿಡುಗಡೆ ಕುರಿತು ರಾಜ್ಯವನ್ನು ಬಲಿಪಶು ಮಾಡಲಾಗುತ್ತಿದೆ’ ಎಂದರು.

ಎಐಎಡಿಎಂಕೆ ಸದಸ್ಯ ಎಂ.ತಂಬಿದೊರೈ ಅವರು, ‘ಹಿಂದಿ ಹೇರಿಕೆ ವಿಷಯದಲ್ಲಿ ನಾನು ವೈಕೊ ಅವರ ಮಾತು ಬೆಂಬಲಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.