ಹಣ ಪತ್ತೆ ಆಗಿಲ್ಲ: ಸ್ಪಷ್ಟನೆ
ಯಶವಂತ್ ವರ್ಮಾ ಅವರ ನಿವಾಸಕ್ಕೆ ಬಿದ್ದಿದ್ದ ಬೆಂಕಿ ನಂದಿಸಲು ತೆರಳಿದ್ದ ಸಿಬ್ಬಂದಿಗೆ ಅಲ್ಲಿ ಯಾವುದೇ ನಗದು ಸಿಕ್ಕಿಲ್ಲ ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್ ಗರ್ಗ್ ಶುಕ್ರವಾರ ಹೇಳಿದ್ದಾರೆ. ‘ವರ್ಮಾ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಮಾರ್ಚ್ 14ರ ರಾತ್ರಿ 11.35ಕ್ಕೆ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಬೆಂಕಿ ನಂದಿಸಿದ ತಕ್ಷಣ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಿಂದ ಹೊರಟುಹೋದರು. ನಮ್ಮ ತಂಡಕ್ಕೆ ಯಾವುದೇ ನಗದು ಸಿಕ್ಕಿಲ್ಲ’ ಎಂದರು.