ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು: ಬಣವೆಗೆ ಹೊತ್ತಿದ ಬೆಂಕಿ ನಂದಿಸಲು ಮುಂದಾದ ರೈತ ಸಜೀವ ದಹನ

ಸವಣೂರು ತಾಲ್ಲೂಕಿನ ಶಿರಬಡಗಿ ಗ್ರಾಮದ ತಾಂಡಾದಲ್ಲಿ ಮಂಗಳವಾರ ಮೇವಿನ ಬಣವೆಗೆ ಹೊತ್ತಿದ ಬೆಂಕಿ ನಂದಿಸಲು ಮುಂದಾದ ರೈತರೊಬ್ಬರು ಸಜೀವ ದಹನವಾಗಿದ್ದಾರೆ.
Published 27 ಫೆಬ್ರುವರಿ 2024, 13:17 IST
Last Updated 27 ಫೆಬ್ರುವರಿ 2024, 13:17 IST
ಅಕ್ಷರ ಗಾತ್ರ

ಸವಣೂರು (ಹಾವೇರಿ ಜಿಲ್ಲೆ): ಸವಣೂರು ತಾಲ್ಲೂಕಿನ ಶಿರಬಡಗಿ ಗ್ರಾಮದ ತಾಂಡಾದಲ್ಲಿ ಮಂಗಳವಾರ ಮೇವಿನ ಬಣವೆಗೆ ಹೊತ್ತಿದ ಬೆಂಕಿ ನಂದಿಸಲು ಮುಂದಾದ ರೈತರೊಬ್ಬರು ಸಜೀವ ದಹನವಾಗಿದ್ದಾರೆ.

ಗಂಗಪ್ಪ ಮಂಗಲಪ್ಪ ಲಮಾಣಿ (68) ಮೃತರು. ಬಣವೆಗೆ ಹೊದಿಸಿದ್ದ ತಾಡಪತ್ರಿಯು ಹೊತ್ತಿಕೊಂಡು ರೈತನ ಮೇಲೆ ಬಿದ್ದ ಪರಿಣಾಮ ಗಂಗಪ್ಪ ಮೃತಪಟ್ಟರು ಎನ್ನಲಾಗಿದೆ. 

ಸವಣೂರು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು. ದಾವಣಗೆರೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ ಕುಮಾರ, ಸಹಾಯಕ ಠಾಣಾಧಿಕಾರಿ ಎಂ.ಡಿ.ಗೋಕಾಕ, ಸಿಬ್ಬಂದಿ ಮಂಜುನಾಥ ಮೇಟಿ, ಸುರೇಶ ಗಂಜಳ, ವಿನಯ ವಡೆಯರಹಟ್ಟಿ, ಬಸವರಾಜ ಸಂಕಣ್ಣವರ, ಶಿವರಾಜಕುಮಾರ, ನಿಕಿಲ್, ಸ್ವಾಮಿಲಿಂಗ ಗೊಲ್ಲರ, ಮಂಜುನಾಥ ಮಾಳಗಿಮನಿ, ಮಂಜುನಾಥ ತವರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT