ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cauvery issue: ಸಿಎಂ ಅಂಕಲ್, ತಮಿಳುನಾಡಿಗೆ ನೀರು ಬಿಡಬೇಡಿ ಪ್ಲೀಸ್...

Published 23 ಸೆಪ್ಟೆಂಬರ್ 2023, 8:02 IST
Last Updated 23 ಸೆಪ್ಟೆಂಬರ್ 2023, 8:02 IST
ಅಕ್ಷರ ಗಾತ್ರ

ಮಂಡ್ಯ: 'ಕುಡಿಯಲು ನೀರಿಲ್ಲ, ಗದ್ದೆ ಕೆಲಸಕ್ಕೆ ನೀರಿಲ್ಲ, ಹಸುವಿಗೆ ನೀರಿಲ್ಲ. ಸಿ.ಎಂ ಅಂಕಲ್ ಪ್ಲೀಸ್ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ' ಎಂದು ತಾಲ್ಲೂಕಿನ ಕ್ಯಾತುಂಗೆತೆ ಗ್ರಾಮದ ಶಾಲಾ ಬಾಲಕಿಯರು ಮುಗ್ಧವಾಗಿ ಹೇಳಿದರು.

ಕ್ಯಾತುಂಗೆರೆ ಗ್ರಾಮಸ್ಥರು ಮಕ್ಕಳೊಂದಿಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿಭಟನಾ‌ ಸ್ಥಳಕ್ಕೆ ಮೆರವಣಿಗೆ ಮೂಲಕ ಬಂದು ಬೆಂಬಲ ನೀಡಿದರು.

ಮಳೆ ಇಲ್ಲದ ಕಾರಣ ನಾಲೆಯಲ್ಲಿ ನೀರು ಬರುತ್ತಿಲ್ಲ. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು. ಖಾಲಿ ಕೊಡ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT