ವಯನಾಡು: ವಯನಾಡಿನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಭೇಟಿಯಾಗಿ ಸಾಂತ್ವನ ಹೇಳಿದರು.

ಮಾನವ-ಪ್ರಾಣಿ ಸಂಘರ್ಷಗಳಿಗೆ ಪರಿಹಾರ ಕೋರಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆ ರಾಹುಲ್ ಗಾಂಧಿ ಶನಿವಾರ ರಾತ್ರಿ ತಮ್ಮ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ವಾರಾಣಸಿಯಲ್ಲಿ ಸ್ಥಗಿತಗೊಳಿಸಿ ಕಣ್ಣೂರು ಜಿಲ್ಲೆಗೆ ತೆರಳಿದ್ದರು.

ಕಣ್ಣೂರಿನಿಂದ ರಸ್ತೆ ಮಾರ್ಗವಾಗಿ ವಯನಾಡಿಗೆ ತೆರಳಿದ ಅವರು, ಕಳೆದ ವಾರ ಮಾನಂದವಾಡಿ ಪ್ರದೇಶದಲ್ಲಿ ರೇಡಿಯೋ ಕಾಲರ್ ಅಳವಡಿಸಿದ್ದ ಆನೆಯ ದಾಳಿಯಿಂದ ಮೃತಪಟ್ಟ ಅಜಿ (42) ಅವರ ಮನೆಯಲ್ಲಿ ಅವರು 20 ನಿಮಿಷಗಳ ಕಾಲ ಕಳೆದರು, ನಂತರ ಶುಕ್ರವಾರ ಕುರುವ ದ್ವೀಪದ ಬಳಿ ಕಾಡಾನೆ ದಾಳಿಯಿಂದ ಮೃತರಾದ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ಮಾರ್ಗದರ್ಶಕ ಪಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸಿದರು. ರಾಹುಲ್ ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ಇತರ ಸ್ಥಳೀಯ ಮುಖಂಡರು ಇದ್ದರು.

ವಯನಾಡಿನಲ್ಲಿ ಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಜನರ ಮೇಲೆ ಕಾಡು ಪ್ರಾಣಿಗಳು ದಾಳಿ ನಡೆಸಿದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿದ್ದ ಹರತಾಳ ಹಿಂಸಾಚಾರಕ್ಕೆ ತಿರುಗಿತ್ತು.
.ಕಾಡುಪ್ರಾಣಿಗಳ ಉಪಟಳ: ನ್ಯಾಯ ಯಾತ್ರೆ ಮೊಟಕುಗೊಳಿಸಿ ವಯನಾಡಿಗೆ ದೌಡಾಯಿಸಿದ ರಾಹುಲ್.ವಯನಾಡ್: ಹಿಂಸಾರೂಪ ತಾಳಿದ ಹರತಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.