ಅಪ್ಪನೊಂದಿಗೆ ನಾನೂ ರೈತಳಾದೆ

7

ಅಪ್ಪನೊಂದಿಗೆ ನಾನೂ ರೈತಳಾದೆ

Published:
Updated:

ನಾನು ಆರನೇ ತರಗತಿ ಕನ್ನಡ ಪ್ರಾಥಮಿಕ ಶಾಲೆಗೆ ಕಾಲಿಟ್ಟಿದ್ದೆ. ಓದಲು ಬರೆಯಲು ಇಷ್ಟವಿಲ್ಲದ ನನಗೆ ಒತ್ತಾಯಪೂರ್ವಕವಾಗಿ ಶಾಲೆಗೆ ಸೇರಿಸಿದ್ದರು.

ಮಳೆಯ ದಾರಿಯನ್ನೆ ನೋಡುತ್ತಿದ್ದ ಸಮಯವದು. ತಣ್ಣನೆ ಬೀಸುವ ಗಾಳಿ, ಮೋಡ ಕವಿದ ವಾತಾವರಣ ಕಂಡ ಅಪ್ಪ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಕಬ್ಬಿನ ಹೊಲಕ್ಕೆ ಕರೆದುಕೊಂಡು ಹೋಗಿದ್ದರು. ಅಷ್ಟರಲ್ಲೆ ಮಳೆಯ ಸುರಿಯಲು ಆರಂಭಿಸಿತು. ಗುಡುಗು, ಮಿಂಚು ಶುರುವಾಗಿತ್ತು. 

ಯಾವ ಜನ್ಮದ ಪುಣ್ಯವೋ ಏನೋ ಆವತ್ತು ಆಲಿಕಲ್ಲಿನ ಮಳೆ ಜೋರಾಯಿತು. ಆನಂದದಲ್ಲಿ ಅಪ್ಪ ಕಬ್ಬನ್ನು ನೆಡಲು ಪ್ರಾರಂಭಿಸಿದ. ನನಗೆ ಮಳೆಯಲಿ ನೆನೆಯುವ ಆಸೆ ಹೆಚ್ಚಾಗಿ, ನಾನೂ ಗದ್ದೆಗೆ ಇಳಿದೆ. ನನ್ನ ಪುಟಾಣಿ ಕಾಲಿಗೆ ಅಂಟಿಕೊಂಡಿದ್ದ ಕೆಸರ ಮೇಲೆ ಮಳೆಹನಿಯ ಮಾಲೆ.. ಆಲಿಕಲ್ಲು ತಿನ್ನುವ ಖುಷಿಯೇ ಬೇರೆಯಾಗಿತ್ತು. ಆಹಾ..! ಅದೆಂಥ ಅನುಭವ. ರೈತ ಅಪ್ಪನೊಂದಿಗೆ ಅಂದು ನಾನು ನಿಜವಾಗಿಯೂ ಮಣ್ಣಿನ ಮಗಳಾಗಿದ್ದೆ. 

ಯಮಗರ, ಕರಜಗಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !