ಅಳುವ ಬಾಲಕಿ ಚಿತ್ರಕ್ಕೆ ಪ್ರಶಸ್ತಿ

ಶನಿವಾರ, ಏಪ್ರಿಲ್ 20, 2019
29 °C
ಅಮೆರಿಕ ಗಡಿಯಲ್ಲಿ ಅಕ್ರಮ ವಲಸಿಗರ ಸಂಕಷ್ಟ ಬಿಂಬಿಸಿದ ಚಿತ್ರ

ಅಳುವ ಬಾಲಕಿ ಚಿತ್ರಕ್ಕೆ ಪ್ರಶಸ್ತಿ

Published:
Updated:
Prajavani

ಅಮ್‌ಸ್ಟರ್‌ಡಂ,ನೆದರ್‌ಲೆಂಡ್ಸ್: ಅಮೆರಿಕದ ಗಡಿಯಲ್ಲಿ ತಾಯಿಯ ಜೊತೆ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಪುಟ್ಟ ಬಾಲಕಿ ಅಳುತ್ತಿರುವ ಮನಕಲಕುವ ಚಿತ್ರಕ್ಕೆ ಪ್ರತಿಷ್ಠಿತ ವರ್ಲ್ಡ್‌ ಪ್ರೆಸ್‌ ಫೊಟೊ ಪ್ರಶಸ್ತಿ ಲಭಿಸಿದೆ.

ಅಮೆರಿಕ ಮತ್ತು ಮೆಕ್ಸಿಕೊ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದ ಹೊಂಡುರಸ್‌ನ ಸಾಂಡ್ರಾ ಸನ್‌ಚೇಜ್‌ ಮತ್ತು ಮಗಳು ಯನೇಲಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದ ಸಂದರ್ಭದಲ್ಲಿ ಗೆಟ್ಟಿ ಇಮೇಜಸ್‌ನ ಛಾಯಾಗ್ರಾಹಕ ಜಾನ್‌ ಮೂರ್‌ ಈ ಚಿತ್ರವನ್ನು ಸೆರೆಹಿಡಿದಿದ್ದರು.

ತಾಯಿಯನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಕಾಲಬುಡದಲ್ಲಿ ನಿಂತು ಭಯದಿಂದ ಅಳುತ್ತಿರುವ ಬಾಲಕಿ ಯನೇಳಾಳ ಚಿತ್ರ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು.

ಈ ಚಿತ್ರ ಹಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಅಕ್ರಮ ವಲಸಿಗರಿಂದ ಅವರ ಮಕ್ಕಳನ್ನು ಬೇರ್ಪಡಿಸುವ ಅಮೆರಿಕದ ನೀತಿಗೆ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿತ್ತು.

‘ಯನೇಲಾಳನ್ನು ತಾಯಿಯಿಂದ ಬೇರ್ಪಡಿಸಿಲ್ಲ’ ಎಂದು ಅನಂತರ ಅಮೆರಿಕದ ಗಡಿ ಭದ್ರತಾ ಪಡೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ವಲಸೆ ನೀತಿಯನ್ನು ಪರಿಷ್ಕರಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !