‘ಬರ ನಿರ್ವಹಣೆ: ಜಾಗತಿಕ ನಾಯಕತ್ವಕ್ಕೆ ಭಾರತ ಸಮರ್ಥ’

7

‘ಬರ ನಿರ್ವಹಣೆ: ಜಾಗತಿಕ ನಾಯಕತ್ವಕ್ಕೆ ಭಾರತ ಸಮರ್ಥ’

Published:
Updated:

ವಿಶ್ವಸಂಸ್ಥೆ : ‘ಬರ ಹಾಗೂ ಭೂಮಿ ಫಲವತ್ತತೆ ಕಳೆದುಕೊಳ್ಳುವಂತಹ ಸವಾಲುಗಳನ್ನು, ಭೂಮಿಯ ಸುಧಾರಿತ ಬಳಕೆ ಮತ್ತು ನಿ‌ರ್ವಹಣೆ ಮೂಲಕ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವಂತಹ ಅಗಾಧ ಸಾಮರ್ಥ್ಯ ಭಾರತಕ್ಕಿದೆ’ ಎಂದು ವಿಶ್ವಸಂಸ್ಥೆಯ ಬರ ನಿರ್ವಹಣೆ ಒಪ್ಪಂದದ ಸಭೆ (ಯುಎನ್‌ಸಿಸಿಡಿ) ಅಭಿಪ್ರಾಯಪಟ್ಟಿದೆ.

‘ಈ ನಿಟ್ಟಿನಲ್ಲಿ ಜಗತ್ತು ಕೈಗೊಳ್ಳ ಬೇಕಾದ ದಿಟ್ಟ ಕ್ರಮಗಳ ಕುರಿತು ಭಾರತ ನಾಯಕತ್ವ ವಹಿಸಬಲ್ಲದು. ಬರ, ಭೂಮಿ ಫಲವತ್ತತೆ ಕಳೆದುಕೊಳ್ಳುವ ಕುರಿತು ನಡೆಯುವ ಜಾಗತಿಕ ಸಮಾವೇಶಕ್ಕೆ ಈ ಬಾರಿ ಭಾರತ ಆತಿಥೇಯ ರಾಷ್ಟ್ರವಾಗಲಿದೆ’ ಎಂದು ಯುಎನ್‌ಸಿಸಿಡಿ ಕಾರ್ಯಕಾರಿ ಕಾರ್ಯದರ್ಶಿ ಮೊನಿಕ್ ಬಾರ್ಬಟ್ ತಿಳಿಸಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ಅಕ್ಟೋಬರ್ 7ರಿಂದ 18ರವರೆಗೆ ಸಮಾವೇಶ ನಡೆಯುವ ನಿರೀಕ್ಷೆ ಇದೆ.

ಬರದಿಂದ ಭೂಮಿ ಬರಡಾದ ಸಮಸ್ಯೆಗೆ ಗುರಿಯಾದ 169ರಲ್ಲಿ 120 ರಾಷ್ಟ್ರಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. 2000ದಿಂದ ಈವರೆಗೆ ಸಂಗ್ರಹಿಸಲಾಗಿರುವ ಈ ವೈಜ್ಞಾನಿಕ ವಿವರಗಳನ್ನು, ಒಪ್ಪಂದದಲ್ಲಿ ಭಾಗಿಯಾಗಿರುವ 197 ಸದಸ್ಯ ರಾಷ್ಟ್ರಗಳ ಜತೆಗೆ ಇದೇ ಮೊದಲ ಬಾರಿಗೆ ಹಂಚಿಕೊಳ್ಳಲಾಗುತ್ತದೆ.

ಜಾಗತಿಕ ಸಂಸ್ಥೆ ‘ಹವಾಮಾನ ಬದಲಾವಣೆ ಕುರಿತ ಅಂತರರಾಷ್ಟ್ರೀಯ ಸಮಿತಿ’ (ಐಪಿಸಿಸಿ) ಸಿದ್ಧಪಡಿಸಿರುವ ವರದಿಯನ್ನು ಸಹ ಸದಸ್ಯ ರಾಷ್ಟ್ರಗಳಿಗೆ ನೀಡಲಾಗುತ್ತದೆ ಎಂದು ಬಾರ್ಬಟ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !