ಭಾನುವಾರ, ಸೆಪ್ಟೆಂಬರ್ 27, 2020
27 °C

ರಾಜಸ್ಥಾನ: ಹಿಂದೂ ವಲಸಿಗರ ಕುಟುಂಬದ 11 ಸದಸ್ಯರ ಶಂಕಾಸ್ಪದ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೋಧ್‌ಪುರ: ಪಾಕಿಸ್ತಾನದ ಹಿಂದೂ ವಲಸಿಗರ ಕುಟುಂಬದ 11 ಸದಸ್ಯರು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಶವಗಳು ಭಾನುವಾರ ಬೆಳಿಗ್ಗೆ ಇಲ್ಲಿನ ಲೋಡ್ತಾ ಗ್ರಾಮದಲ್ಲಿ ಕಂಡುಬಂದಿವೆ.

ಪಾಕಿಸ್ತಾನದ ಭಿಲ್‌‌ ಸಮುದಾಯದ ಕುಟುಂಬವೊಂದು ಡೆಚುವ್‌ ಪ್ರಾಂತ್ಯದ ಲೊಟ್ಟಾ ಗ್ರಾಮದ ಗುಡಿಸಲೊಂದರಲ್ಲಿ ವಾಸವಿದ್ದರು. ಅವರ ಗುಡಿಸಲಿನ ಪಕ್ಕದಲಿದ್ದ ಜಮೀನನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಕುಟುಂಬದ ಏಕ ಮಾತ್ರ ಸದಸ್ಯ ಬದುಕುಳಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು. 

ಅವಘಡ ಕಳೆದ ರಾತ್ರಿ ನಡೆದಿರುವ ಶಂಕೆ ಇದ್ದು, ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಆದರೆ, ಉಳಿದಿರುವ ಕುಟುಂಬದ ಸದಸ್ಯ 'ತನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾನೆ' ಎಂದು ಹಿರಿಯ ಪೊಲೀಸ್‌ ಅಧಿಕಾರಿ ರಾಹುಲ್‌ ಬೃಹತ್‌ ಮಾಹಿತಿ ನೀಡಿದ್ದಾರೆ.

‘ಅವರ ದೇಹಗಳಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಸಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು