ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಗಳಿಂದ ದೇಣಿಗೆಯಾಗಿ ದೊರೆತ ವೈದ್ಯಕೀಯ ಸಾಮಗ್ರಿಗಳ ಹಂಚಿಕೆ: ಕೇಂದ್ರ

Last Updated 29 ಮೇ 2021, 21:26 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಗಳಿಂದ ದೇಣಿಗೆಯಾಗಿ ದೊರೆತ 18,040 ಸಾವಿರ ಆಮ್ಲಜನಕ ಸಾಂದ್ರಕಗಳು, 19,085 ಆಮ್ಲಜನಕ ಸಿಲಿಂಡರ್‌ಗಳು ಹಾಗೂ 7.7 ಲಕ್ಷ ರೆಮ್‌ಡಿಸಿವಿರ್‌ ವಯಲ್‌ಗಳನ್ನು ಏಪ್ರಿಲ್‌ 27 ರಿಂದ ಮೇ 28ರ ಅವಧಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.

ಕೋವಿಡ್‌– 19 2ನೇ ಅಲೆ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಏಪ್ರಿಲ್ 27 ರಿಂದ ವಿವಿಧ ದೇಶಗಳು ಮತ್ತು ಸಂಸ್ಥೆಗಳಿಂದ ವೈದ್ಯಕೀಯ ಸಲಕರಣೆಗಳ ರೂಪದಲ್ಲಿ ದೇಣಿಗೆ ಪಡೆದಿದೆ. ಅವುಗಳನ್ನು ತಕ್ಷಣವೇ ಹಂಚಿಕೆ ಮಾಡಲಾಗಿದೆ. ಆಮ್ಲಜನಕ ಸಾಂದ್ರಕಗಳು, ಆಮ್ಲಜನಕ ಸಿಲಿಂಡರ್‌ಗಳ ಜೊತೆಗೆ 19 ಆಮ್ಲಜನಕ ಉತ್ಪಾದನಾ ಘಟಕಗಳು, 15,256 ವೆಂಟಿಲೇಟರ್‌ಗಳು, ಸುಮಾರು 12 ಲಕ್ಷ ಫಾವಿಪಿರವಿರ್ ಮಾತ್ರೆಗಳನ್ನು ಪಡೆದಿದ್ದು, ಅವುಗಳನ್ನು ರಸ್ತೆ ಹಾಗೂ ವಿಮಾನದ ಮೂಲಕ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ.

ವೈದ್ಯಕೀಯ ಸಲಕರಣೆಗಳ ಹಂಚಿಕೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ವ್ಯವಸ್ಥೆ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಅನುದಾನ, ನೆರವು ಮತ್ತು ದೇಣಿಗೆಗಳ ರೂಪದಲ್ಲಿ ಅಂತರರಾಷ್ಟ್ರೀಯ ಸಹಕಾರವಾಗಿ ವಿದೇಶಗಳಿಂದ ಪಡೆಯುವ ಪರಿಹಾರ ಸಾಮಗ್ರಿಗಳು ಮತ್ತು ಹಂಚಿಕೆಯನ್ನು ಸರಿಯಾಗಿ ನಿರ್ವಹಿಸಲು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಕೋಶವನ್ನು ರಚಿಸಲಾಗಿದ್ದು, ಅದು ಏಪ್ರಿಲ್ 26 ರಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT