ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹಿ ಈದ್ಗಾ ಮಸೀದಿ ತೆರವಿಗೆ ಮಥುರಾ ನ್ಯಾಯಾಲಯದಲ್ಲಿ ಮೂರನೇ ಅರ್ಜಿ

Last Updated 25 ಡಿಸೆಂಬರ್ 2020, 14:01 IST
ಅಕ್ಷರ ಗಾತ್ರ

ಮಥುರಾ: ಇಲ್ಲಿನ ಶ್ರೀಕೃಷ್ಣನ ಜನ್ಮಭೂಮಿ ಬಳಿ ಇರುವ ಶಾಹಿಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೋರಿ ಮಥುರಾ ನ್ಯಾಯಾಲಯವೊಂದಕ್ಕೆ ಮೂರನೇ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.

ಸಿವಿಲ್‌ ನ್ಯಾಯಾಧೀಶರಾದ ನೇಹಾ ಭದೌರಿಯಾ ಅವರ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಸಲಾಗಿದ್ದು, ಮಥುರಾ ನ್ಯಾಯಾಲಯವೊಂದರ ತೀರ್ಪಿನಂತೆ 1968ರಲ್ಲಿ ಮಾಡಿಕೊಂಡ ಸಂಧಾನವನ್ನು ಅಸಿಂಧುಗೊಳಿಸುವಂತೆ ಕೋರಲಾಗಿದೆ. ‘ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿಯನ್ನು ಸ್ಥಳಾಂತರಗೊಳಿಸಬೇಕು ಎನ್ನುವುದೇ ಅರ್ಜಿಯೇ ಮುಖ್ಯ ಮನವಿ’ ಎಂದು ವಕೀಲ ಮಹೇಂದ್ರ ಪ್ರತಾಪ್‌ ಸಿಂಗ್‌ ತಿಳಿಸಿದರು.

ಮುಖ್ಯ ಅರ್ಚಕರಾದ ವಿರಾಜಮಾನ್‌ ಠಾಕೂರ್‌ ಕೇಶವ್‌ ದೇವ್‌ ಜಿ ಮಹಾರಾಜ್‌ ಕತ್ರ ಕೇಶವ್‌ ದೇವ್‌, ವಕೀಲರಾದ ರಾಜೇಂದ್ರ ಮಹೇಶ್ವರಿ, ಯುನೈಟೆಡ್‌ ಹಿಂದೂ ಫ್ರಂಟ್‌ನ ಜೇ ಭಗವಾನ್‌ ಗೋಯಲ್‌, ಧರ್ಮ ರಕ್ಷ ಸಂಘ ವೃಂದಾವನದ ಅಧ್ಯಕ್ಷ ಸೌರಬ್‌ ಗೌರ್‌ ಜಂಟಿಯಾಗಿ ಈ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT