ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಎಕ್ಸ್‌ಬಿಬಿ.1.5 ತಳಿ ಸೋಂಕಿನ ಐದು ಪ್ರಕರಣಗಳು ಪತ್ತೆ

Last Updated 3 ಜನವರಿ 2023, 15:38 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ಒಂದು ಪ್ರಕರಣ ಸೇರಿದಂತೆ, ಕೊರೊನಾ ವೈರಸ್‌ನ ಎಕ್ಸ್‌ಬಿಬಿ.1.5 ತಳಿ ಸೋಂಕಿನ ಒಟ್ಟು ಐದು ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ.

ಉಳಿದಂತೆ, ಮೂರು ಪ್ರಕರಣಗಳು ಗುಜರಾತ್‌ ಹಾಗೂ ಒಂದು ಪ್ರಕರಣ ರಾಜಸ್ಥಾನದಲ್ಲಿ ಪತ್ತೆಯಾಗಿವೆ ಎಂದು ವೈರಾಣು ಸಂರಚನಾ ವಿಶ್ಲೇಷಣೆ ಸಂಸ್ಥೆ (ಐಎನ್‌ಎಸ್‌ಎಸಿಒಜಿ) ಮಂಗಳವಾರ ಬಿಡುಗಡೆ ಮಾಡಿರುವ ದತ್ತಾಂಶಗಳಿಂದ ತಿಳಿದು ಬಂದಿದೆ.

ಅಮೆರಿಕದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಎಕ್ಸ್‌ಬಿಬಿ.1.5 ತಳಿಯೇ ಕಾರಣವಾಗಿದೆ. ಅಲ್ಲಿ ಕಂಡುಬಂದಿರುವ ಒಟ್ಟು ಪ್ರಕರಣಗಳಲ್ಲಿ ಈ ತಳಿ ಸೋಂಕಿನ ಪ್ರಕರಣಗಳ ಪಾಲು ಶೇ 44ರಷ್ಟು.

‘ಎಕ್ಸ್‌ಬಿಬಿ.1.5’ ತಳಿಯು ‘ಓಮೈಕ್ರಾನ್‌ ಎಕ್ಸ್‌ಬಿಬಿ’ ತಳಿಗೆ ಸಂಬಂಧಿಸಿದ್ದು. ಇದು, ‘ಓಮೈಕ್ರಾನ್‌ ಬಿಎ.2.10.1’ ಹಾಗೂ ‘ಬಿಎ.2.75’ ಉಪತಳಿಗಳ ಮರುಸಂಯೋಜನೆಯಿಂದ ಹೊರಹೊಮ್ಮಿರುವ ತಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT