ಬುಧವಾರ, ಆಗಸ್ಟ್ 10, 2022
23 °C

ಪೋಷಕರ ಅರಸುತ್ತಾ ನಾಂದೇಡ್‌ಗೆ ಬಂದ ‘ಹಿಂದೂಸ್ತಾನ್‌ ಕಿ ಬೇಟಿ‘ ಗೀತಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಂದೇಡ್: ಬಹಳ ವರ್ಷಗಳ ಕಾಲ ಪಾಕಿಸ್ತಾನದಲ್ಲಿ ನೆಲೆಸಿ, ಐದು ವರ್ಷಗಳ ಹಿಂದಷ್ಟೇ ಭಾರತಕ್ಕೆ ಮರಳಿದ ವಾಕ್‌ ಮತ್ತು ಶ್ರವಣ ದೋಷವಿರುವ ಮಹಿಳೆ ಗೀತಾ, ತನ್ನ ಪೋಷಕರನ್ನು ಹುಡುಕತ್ತಾ ಈಗ ಮಹಾರಾಷ್ಟ್ರದ ನಾಂದೇಡ್‌ಗೆ ಬಂದಿದ್ದಾರೆ.

20 ವರ್ಷಗಳ ಹಿಂದೆ ಪಾಕಿಸ್ತಾನದ ಲಾಹೋರ್‌ನ ಸಂಜೋತಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪತ್ತೆಯಾದ ಸುಮಾರು ಎಂಟು ವರ್ಷದ ಗೀತಾಳನ್ನು ಪಾಕಿಸ್ತಾನದ ಪೊಲೀಸರು ರಕ್ಷಿಸಿದ್ದರು. ಅಲ್ಲಿನ ಇದಾಹಿ ಪ್ರತಿಷ್ಠಾನದವರು ಈಕೆಯನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರ ಪ್ರಯತ್ನದ ಮೇರೆಗೆ 2015ರ ಅಕ್ಟೋಬರ್ 26ರಂದು ಗೀತಾ ಅವರನ್ನು ಇಂದೋರ್‌ಗೆ ಕರೆತರಲಾಯಿತು. ಸುಷ್ಮಾ ಸ್ವರಾಜ್ ಅವರು ಈಕೆಯನ್ನು ‘ಹಿಂದೂಸ್ತಾನ್ ಕಿ ಬೇಟಿ‘ (ಭಾರತದ ಮಗಳು) ಎಂದು ಕರೆದಿದ್ದರು. ಜತೆಗೆ ಗೀತಾರನ್ನು ಭೇಟಿಯಾಗಿದ್ದ ಸುಷ್ಮಾ ಸ್ವರಾಜ್‌, ಅವರ ಪೋಷಕರನ್ನು ಹುಡುಕಿಸಿಕೊಡುವ ಭರವಸೆ ನೀಡಿದ್ದರು.

ಇದನ್ನೂ ಓದಿ: ಮಾನವೀಯತೆ ಮೆರೆದಿದ್ದ ಜನಪ್ರತಿನಿಧಿ ಸುಷ್ಮಾ ಸ್ವರಾಜ್

ಪ್ರಸ್ತುತ ಗೀತಾ ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಶ್ರವಣ ದೋಷ ವ್ಯಕ್ತಿಗಳಿಗಾಗಿ ಕೆಲಸ ಮಾಡುತ್ತಿರುವ ಆನಂದ್ ಸೇವಾ ಸಮಾಜ ಎಂಬ ಸ್ವಯಂ ಸೇವಾಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ.

ಈ ನಡುವೆ, ಅನೇಕ ದಂಪತಿ ತಾವು ಗೀತಾ ಪೋಷಕರು ಎಂದು ಹೇಳಿಕೊಂಡು ಬಂದಿದ್ದಾರೆ. ಆದರೆ, ಗೀತಾ ಅವರನ್ನು ಗುರುತಿಸಿಲ್ಲ. ಮಧ್ಯಪ್ರದೇಶ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆ ಈಕೆಯ ಮನೆ ಮತ್ತು ಕುಟುಂಬದವರ ಪತ್ತೆಗಾಗಿ ಪ್ರಯತ್ನಿಸುತ್ತಿದೆ. ಈಗ ಸ್ವಯಂ ಸೇವಾ ಸಂಸ್ಥೆಯವರು ಗೀತಾ ಅವರೊಂದಿಗೆ ಪೋಷಕರನ್ನು ಹುಡಕಲು ನಾಂದೇಡ್‌ಗೆ ಬಂದಿದ್ದಾರೆ.

ಸ್ವಯಂ ಸೇವಾ ಸಂಸ್ಥೆಯ ಸಂಜ್ಞಾ ಭಾಷಾ ತಜ್ಞ ಜ್ಞಾನೇಂದ್ರ ಪುರೋಹಿತ್ ಅವರ ನೆರವಿನೊಂದಿಗೆ ನಾಂದೇಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ, ‘ನನ್ನ ಪೋಷಕರನ್ನು ಹುಡುಕುವ ಪ್ರಯತ್ನದಲ್ಲಿದ್ದೇನೆ. ನನ್ನ ಮನೆ ಇಲ್ಲೇ ರೈಲ್ವೆ ನಿಲ್ದಾಣದ ಬಳಿ ಇದ್ದ ನೆನಪು. ಸಮೀಪದಲ್ಲಿ ನದಿ ಇತ್ತು. ದೇವಸ್ಥಾನವಿತ್ತು’ ಎಂದು ಮಾಹಿತಿ ಹಂಚಿಕೊಂಡರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು