ಕೇಂದ್ರಾಪಡಾ, ಒಡಿಶಾ: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ 92 ವರ್ಷದ ವ್ಯಕ್ತಿಗೆ ಸ್ಥಳೀಯ ಕೋರ್ಟ್ 3 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಮೂರು ವರ್ಷಗಳ ಹಿಂದೆ ಬಾಲಕಿ ಮೇಲೆ ದೌರ್ಜನ್ಯ ನಡೆದಿತ್ತು.

ಹೆಚ್ಚುವರಿ ಕೇಂದ್ರಪಡಾ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ತ್ರಿದಿಕ್ರಮ್ ಕೇಶರಿ ಚಿನ್ಹಾರ ಅವರು ಮಂಗಳವಾರ ಈ ತೀರ್ಪು ನೀಡಿದ್ದಾರೆ.

ಆರೋಪಿಗೆ ₹ 3,000 ದಂಡವನ್ನು ವಿಧಿಸಲಾಗಿದೆ. ದಂಡ ತೆರುವಲ್ಲಿ ವಿಫಲಗೊಂಡರೆ ಹೆಚ್ಚುವರಿ 6 ತಿಂಗಳು ಜೈಲಿನಲ್ಲೇ ಕಳೆಯಬೇಕಿದೆ.

2019ರ ಜನವರಿ 26ರಂದು, ಮರ್ಷಘೈ ಪ್ರದೇಶದ ಗ್ರಾಮವೊಂದರಲ್ಲಿ ಮನೆಯಲ್ಲಿ ಬಾಲಕಿ ಒಬ್ಬಂಟಿಯಾಗಿದ್ದ ಸಂದರ್ಭ ಕೃತ್ಯ ನಡೆದಿತ್ತು. ಈ ಬಗ್ಗೆ ಎಲ್ಲೂ ಬಾಯಿ ಬಿಡದಂತೆ ಬಾಲಕಿಗೆ ಬೆದರಿಕೆಯನ್ನು ಒಡ್ಡಲಾಗಿತ್ತು. ಬಳಿಕ ಬಾಲಕಿ ಪೋಷಕರಿಗೆ ತಿಳಿಸಿದ್ದಳು. ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.