ಮಂಗಳವಾರ, ಮಾರ್ಚ್ 28, 2023
30 °C

’ನೀಟ್‘‌ ನಡೆಸಲು ಎನ್‌ಟಿಎ ಸಿದ್ಧತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜೆಇಇ ಮೇನ್‌ ನಂತರ ರಾಷ್ಡ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್ (ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ)‌ ನಡೆಸಲು ಸಿದ್ಧತೆ ನಡೆಸಿದೆ.

ಸೆ. 13ರಂದು ನಡೆಯಲಿರುವ ಈ ಪರೀಕ್ಷೆಗಾಗಿ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ.

ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿನ ಜೆಇಇ (ಮೇನ್‌) ಸೆಪ್ಟಂಬರ್‌ 1ರಂದು ಆರಂಭವಾಗಿ, ಭಾನುವಾರ ಮುಕ್ತಾಯವಾಯಿತು. ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದ ಈ ಪರೀಕ್ಷೆಗಳನ್ನು ಕೋವಿಡ್‌–19 ಕಾರಣದಿಂದಾಗಿ ಎರಡು ಬಾರಿ ಮುಂದೂಡಲಾಗಿತ್ತು. 

ಕೋವಿಡ್‌–19 ವ್ಯಾಪಿಸುವ ಆತಂಕದ ನಡುವೆ ಮತ್ತೊಂದು ಪ್ರಮುಖ ಪರೀಕ್ಷೆ ಸಂಘಟಿಸಲು ಮುಂದಾಗಿರುವ ಎನ್‌ಟಿಎ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಈ ಮೊದಲು 2,546 ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಅವುಗಳ ಸಂಖ್ಯೆಯನ್ನು 3,843ಕ್ಕೆ ಹೆಚ್ಚಿಸಲಾಗಿದೆ.

ಪ್ರತಿ ಕೊಠಡಿಯಲ್ಲಿ 24 ಜನರ ಬದಲಾಗಿ 12 ಜನ ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಎನ್‌ಟಿಎ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು