ಶುಕ್ರವಾರ, ಜನವರಿ 27, 2023
21 °C

ಆಕಾಶ್‌ಝೆಪ್‌: ಯುವಕರಿಗೆ ವಾಯುಪಡೆಗೆ ಸೇರಲು ಸ್ಪೂರ್ತಿ ನೀಡುವ ಕೃತಿ

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ನಿವೃತ್ತ ಏರ್‌ ಮಾರ್ಷಲ್‌ ಭೂಷಣ್‌ ಗೋಖಲೆ ಮತ್ತು ಅವರ ಪತ್ನಿ ಮೇಘನಾ ಜೊತೆಯಾಗಿ ರಚಿಸಿರುವ 'ಆಕಾಶ್‌ಝೆಪ್‌' ಕೃತಿಯನ್ನು ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಅವರು ಪುಣೆಯಲ್ಲಿ ಗುರುವಾರ ಬಿಡುಗಡೆಗೊಳಿಸಿದರು. ಈ ಪುಸ್ತಕವು ಯುವಕರನ್ನು ಭಾರತೀಯ ವಾಯು ಪಡೆ (ಐಎಎಫ್‌)ಗೆ ಸೇರಲು ಸ್ಪೂರ್ತಿ ನೀಡುತ್ತದೆ ಎಂದರು.

ಭಾರತೀಯ ವಾಯು ಪಡೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅವಧಿಯ ಅನುಭವಗಳನ್ನು ಮತ್ತು ಘಟನೆಗಳನ್ನು ಗೋಖಲೆ ಅವರು ಕೃತಿಯಲ್ಲಿ ಹಂಚಿಕೊಂಡಿದ್ದಾರೆ.

ಗೋಖಲೆ ಅವರು ಅತ್ಯುತ್ತಮ ನಾಯಕ. ವೃತ್ತಿಯಲ್ಲಿ ಅಸಾಧಾರಣ ನಿರ್ವಹಣೆ ತೋರಿದ್ದಾರೆ. ಹೆಚ್ಚಿನದಾಗಿ ಕೃತಿಕಾರರಾದ ಗೋಖಲೆ ಜೋಡಿ ಮಾನವೀಯತೆಯ ದ್ಯೋತಕ ಎಂದು ಚೌಧರಿ ಶ್ಲಾಘಿಸಿದರು

ಯುವಕರಿಗೆ ಸ್ಪೂರ್ತಿ ನೀಡುವ ಕೃತಿಯಿದು. ಈ ಪುಸ್ತಕವನ್ನು ಓದಿದ ಬಳಿಕ ಸಾವಿರಾರು ಯುವಕರು ಭಾರತೀಯ ವಾಯು ಪಡೆಗೆ ಸೇರಲು ಉತ್ಸುಕರಾಗುತ್ತಾರೆ ಮತ್ತು ಗೋಖಲೆ ಅವರ ಹೆಜ್ಜೆಗಳನ್ನು ಹಿಂಬಾಲಿಸುತ್ತಾರೆ ಎಂಬುದನ್ನು ಖಂಡಿತವಾಗಿ ಹೇಳಬಲ್ಲೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು