ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶೀಯ ಪಾವತಿ ಸ್ವೀಕರಿಸಲಷ್ಟೇ ಆಲ್ಟ್‌ ನ್ಯೂಸ್‌ಗೆ ಅನುಮತಿಸಲಾಗಿತ್ತು: ರೇಜರ್‌ಪೇ

ಅಕ್ಷರ ಗಾತ್ರ

ನವದೆಹಲಿ: ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ ‘ಆಲ್ಟ್‌ ನ್ಯೂಸ್‌’ ಸ್ವೀಕರಿಸಿದ ದೇಣಿಗೆಗೆ ಸಂಬಂಧಿಸಿದಂತೆ ಹಣಕಾಸು ತಂತ್ರಜ್ಞಾನ ಸೇವಾ ಸಂಸ್ಥೆ, ರೇಜರ್‌ಪೇ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅಧಿಕಾರಿ ಹರ್ಷಿಲ್ ಮಾಥುರ್ ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿದೇಶದಿಂದ ದೇಣಿಗೆ ಪಡೆದಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪ ಹೊರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಥುರ್, ‘ಕೇವಲ ದೇಶೀಯ ಪಾವತಿಗಳನ್ನು ಸ್ವೀಕರಿಸಲಷ್ಟೇ ‘ಆಲ್ಟ್‌ ನ್ಯೂಸ್‌’ಗೆ ಅನುಮತಿಸಲಾಗಿತ್ತು. ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆ–2010ರ ಅನುಮೋದನೆ ಇಲ್ಲದೇ ವಿದೇಶಿ ವಹಿವಾಟುಗಳಿಗೆ ಅವಕಾಶ ನೀಡಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಆಲ್ಟ್‌ ನ್ಯೂಸ್‌’ನ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ನಿರ್ದಿಷ್ಟ ತನಿಖೆಗಾಗಿ ನಿರ್ದಿಷ್ಟ ದತ್ತಾಂಶವನ್ನು ಮಾತ್ರ ತನಿಖಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮಾಥುರ್‌ ತಿಳಿಸಿದ್ದಾರೆ.

ತನಗೆ ದೇಣಿಗೆ ನೀಡಿದವರ ಬಗೆಗಿನ ಮಾಹಿತಿಯನ್ನು ‘ರೇಜರ್‌ಪೇ’ ಪೊಲೀಸರೊಂದಿಗೆ ಹಂಚಿಕೊಂಡಿದೆ ಎಂದು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್ ‘ಆಲ್ಟ್ ನ್ಯೂಸ್’ ಆರೋಪಿಸಿತ್ತು.

‘ದಾನಿಗಳ ಪ್ಯಾನ್, ವಿಳಾಸ, ಪಿನ್ ಕೋಡ್ ಇತ್ಯಾದಿಗಳನ್ನು ಹಂಚಿಕೊಂಡಿಲ್ಲ. ಇದು ತನಿಖೆಯ ವ್ಯಾಪ್ತಿಯಿಂದ ಹೊರಗಿನ ಅಂಶಗಳು ಎಂದು ನಾವು ನಂಬಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT