ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Election Results 2022: ಪಂಚರಾಜ್ಯ ಚುನಾವಣೆ ಫಲಿತಾಂಶ, ಇಲ್ಲಿವೆ ಮುಖ್ಯಾಂಶಗಳು

Last Updated 10 ಮಾರ್ಚ್ 2022, 12:57 IST
ಅಕ್ಷರ ಗಾತ್ರ

ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಹಾಗೂ ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಮತ ಎಣಿಕೆಯ ಹಾಗೂ ಫಲಿತಾಂಶದ ಮುಖ್ಯಾಂಶಗಳು ಇಲ್ಲಿವೆ;

*4 ರಾಜ್ಯ ಬಿಜೆಪಿ ತೆಕ್ಕೆಗೆ,ಅಚ್ಚರಿ ಮೂಡಿಸಿದ ಎಎಪಿ, ಕಾಂಗ್ರೆಸ್‌ಗೆ ಆಘಾತ

ಮತ ಎಣಿಕೆ ಪ್ರಗತಿಯಲ್ಲಿದೆ. ಸಂಜೆ 6.30ರ ಸಂದರ್ಭದ ಚಿತ್ರಣ
ಮತ ಎಣಿಕೆ ಪ್ರಗತಿಯಲ್ಲಿದೆ. ಸಂಜೆ 6.30ರ ಸಂದರ್ಭದ ಚಿತ್ರಣ

* ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಭರ್ಜರಿ ಗೆಲುವು

*ಉತ್ತರಾಖಂಡದಲ್ಲಿ ಬಿಜೆಪಿ ಗೆಲುವು ದಾಖಲಿಸಿದರೂ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಸೋಲು ಕಂಡಿದ್ದಾರೆ.ಕಾಂಗ್ರೆಸ್‌ ಅಭ್ಯರ್ಥಿ ಭುವನ್‌ ಕಾಪ್ರಿ ವಿರುದ್ಧ ಅವರಿಗೆ 7,000 ಮತಗಳ ಅಂತರದಿಂದ ಸೋಲಾಗಿದೆ.

* ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರಿಗೆ ಪಂಜಾಬ್‌ನ ‘ಮೊಗಾ’ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ವಿರುದ್ಧ ಸೋಲು.

*ಹೀಂಗಾಂಗ್‌ ಕ್ಷೇತ್ರದಿಂದ ಸ್ಪರ್ಧಿಸಿರುವ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 18,271 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

*ಪಂಜಾಬ್ ಮುಖ್ಯಮಂತ್ರಿಯಾಗಿರಾಜಭವನದ ಬದಲು ಭಗತ್ ಸಿಂಗ್ ಅವರ ಊರಾದ ಖಟ್‌ಕಡ್‌ಕಲಾಂನಲ್ಲಿಪ್ರಮಾಣವಚನ ಸ್ವೀಕರಿಸುವೆ: ಎಎಪಿಯಭಗವಂತ ಮಾನ್.

*ಗೋವಾ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 21 ಮತಗಳು ಅಗತ್ಯವಿದ್ದು, ಸದ್ಯ ಬಿಜೆಪಿ 19ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಮೂವರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

*ಗೋವಾದಲ್ಲಿ ಪ್ರಬಲ ಪ್ರತಿಪಕ್ಷ ಆಗುತ್ತೇವೆ, ಜನರ ವಿಶ್ವಾಸ ಗಳಿಸುವುದಕ್ಕಾಗಿ ನಮ್ಮ ಪಕ್ಷವು ಕಠಿಣ ಪರಿಶ್ರಮ ಪಡಲಿದೆ: ಕಾಂಗ್ರೆಸ್ ಮುಖಂಡ ಮೈಕೆಲ್ ಲೋಬೋ.

*ಮಣಿಪುರದಲ್ಲಿ ಬಿಜೆಪಿಗೆ ಮುನ್ನಡೆ, ಮುಖ್ಯಮಂತ್ರಿ ಬಿರೇನ್ ಸಿಂಗ್ ಜಯದ ಸನಿಹ

*ಗೋವಾದಲ್ಲಿ ಎಎಪಿ ಎರಡು ಸ್ಥಾನಗಳನ್ನು ಗೆದ್ದಿದ್ದು, ಪ್ರಾಮಾಣಿಕ ರಾಜಕಾರಣದ ಆರಂಭವಾಗಿದೆ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

*ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಶುಕ್ರವಾರ ಬೆಳಿಗ್ಗೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

*‘ಪಂಜಾಬ್ ಲೋಕ್ ಕಾಂಗ್ರೆಸ್’ ಅಧ್ಯಕ್ಷ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಟಿಯಾಲ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋಲು ಅನುಭವಿಸಿದ್ದಾರೆ.

*ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತದ ಹಾದಿಯಲ್ಲಿದ್ದು, 1985ರ ಬಳಿಕ ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಚುನಾವಣೆಯಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿದ ದಾಖಲೆ ಬರೆಯುವ ಸನಿಹದಲ್ಲಿದೆ.

*ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರಿಗೆ ಹಿನ್ನಡೆ.

*ಪಂಜಾಬ್‌ನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ, ಎಸ್‌ಎಡಿಯ ಪ್ರಕಾಶ್‌ ಸಿಂಗ್‌ ಬಾದಲ್‌, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅವರಿಂದರ್‌ ಸಿಂಗ್‌ ಹಾಗೂ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ಅವರಿಗೆ ಹಿನ್ನಡೆ.

*ಗೋವಾದ ಪಣಜಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉತ್ಪಲ್‌ ಪರ್‍ರೀಕರ್‌ (ಮಾಜಿ ಮುಖ್ಯಮಂತ್ರಿ ದಿ. ಮನೋಹರ್‌ ಪರ್‍ರೀಕರ್‌ ಅವರ ಮಗ) ಅವರು ಸೋಲು ಅನುಭವಿಸಿದ್ದಾರೆ.

*ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ 10 ಶಾಸಕರ ಪರವಾಗಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಗೋವಾ ಕಾಂಗ್ರೆಸ್ ಘಟಕವು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

*ಉತ್ತರ ಪ್ರದೇಶದ ವಾರಾಣಸಿಯ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ. ಸಮಾಜವಾದಿ ಪಕ್ಷವು 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

* ಗೋವಾದ ನಮ್ಮೆಲ್ಲ ಅಭ್ಯರ್ಥಿಗಳೂ ಪಕ್ಷಕ್ಕೆ ನಿಷ್ಠರಾಗಿದ್ದಾರೆ,ಯಾವೊಬ್ಬ ಅಭ್ಯರ್ಥಿಯೂ ಶಿಬಿರದಿಂದ ಹೊರಹೋಗಲ್ಲ: ಡಿ.ಕೆ.ಶಿವಕುಮಾರ್

* ಗೋವಾ: ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ಗೆ ಹಿನ್ನಡೆ, ಕಾಂಗ್ರೆಸ್‌ನ ಧರ್ಮೇಶ್ ಸಗ್ಲಾನಿಗೆ ಮುನ್ನಡೆ

*ಗೋವಾ: ಕಾಂಗ್ರೆಸ್‌ 12 ಕ್ಷೇತ್ರಗಳಲ್ಲಿ ಮುನ್ನಡೆ, ಬಿಜೆಪಿ 19ಕ್ಷೇತ್ರಗಳಲ್ಲಿ ಮುನ್ನಡೆ

*ಪಂಜಾಬ್‌ನಲ್ಲಿ ಎಎಪಿ 93ರಲ್ಲಿ ಮುನ್ನಡೆ

* ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ ಮುಖಂಡ ನವಜೋತ್‌ ಸಿಂಗ್‌ ಸಿಧು ಸಹ ಹಿನ್ನಡೆಯಲ್ಲಿದ್ದಾರೆ.

*ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಒಟ್ಟು 1,200 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8ರಿಂದ ಆರಂಭವಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯು 690 ಕ್ಷೇತ್ರಗಳ 6,944 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದೆ.

(ಈ ಮಾಹಿತಿ ಇನ್ನಷ್ಟು ವಿವರಗಳೊಂದಿಗೆಅಪ್‌ಡೇಟ್ ಆಗುತ್ತಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT