ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗಿನ ಮೂಲಕ ಕೋವಿಡ್‌ ಲಸಿಕೆ ಅನುಮತಿ ನಿರೀಕ್ಷೆ –ಭಾರತ್‌ ಬಯೊಟೆಕ್

Last Updated 2 ಆಗಸ್ಟ್ 2022, 11:30 IST
ಅಕ್ಷರ ಗಾತ್ರ

ಹೈದರಾಬಾದ್‌:ಮೂಗಿನ ಮೂಲಕ ನೀಡಬಹುದಾದ ಕೋವಿಡ್‌ ಲಸಿಕೆ ಅಭಿವೃದ್ಧಿಗೆ ಒತ್ತು ನೀಡಿರುವ ಭಾರತ್ ಬಯೊಟೆಕ್‌ ಸಂಸ್ಥೆಯು, ಲಸಿಕೆಗೆ ಇದೇ ತಿಂಗಳಲ್ಲಿ ನಿಯಂತ್ರಣ ಪ್ರಾಧಿಕಾರದ ಅನುಮತಿ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಅವರು ಈ ಮಾಹಿತಿ ನೀಡಿದ್ದಾರೆ. ‘ಗುಜರಾತ್‌ನ ಅಂಕಲೇಶ್ವರ್‌ನಲ್ಲಿ ಇರುವ ಔಷಧ ಉತ್ಪಾದನಾ ಘಟಕವು ಮಂಕಿಪಾಕ್ಸ್‌ ಕಾಯಿಲೆಗೆ ಲಸಿಕೆ ಅಭಿವೃದ್ಧಿಪಡಿಸಲು ಸನ್ನದ್ಧವಾಗಿದೆ’ ಎಂದು ಇದೇ ವೇಳೆ ತಿಳಿಸಿದರು.

ಮಂಕಿಪಾಕ್ಸ್‌ ಕಾಯಿಲೆಗೆ ಲಸಿಕೆ ಉತ್ಪಾದನಾ ಸಾಮರ್ಥ್ಯ ಹೊಂದಿರುವ ವಿಶ್ವದ ಎರಡು ಘಟಕಗಳಲ್ಲಿ ಇದೂ ಒಂದು. ಮತ್ತೊಂದು ಜರ್ಮನಿಯ ಬವರಿಯನ್‌ ನಾರ್ಡಿಕ್‌ನಲ್ಲಿದೆ ಎಂದು ಅವರು ವಿವರಿಸಿದರು.

‘ಮೂಗಿನ ಮೂಲಕ ನೀಡಬಹುದಾದ ಲಸಿಕೆಗಾಗಿ ನಾವು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲಿದ್ದೇವೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಆಗಸ್ಟ್‌ ಅಂತ್ಯದ ವೇಳೆಗೆ ಲೈಸೆನ್ಸ್ ಸಿಗಬಹುದು. ಮುಂಬರುವ ಯಾವುದೇ ಕೊರೊನಾ ರೂಪಾಂತರ ಸೋಂಕಿಗೆ ವಿರುದ್ಧವಾಗಿ ಮೂಗಿನ ಮೂಲಕವೇ, ಸುಲಭವಾಗಿ ನೀಡಬಹುದಾದ ಲಸಿಕೆಯು ಬಳಕೆಗೆ ಲಭ್ಯವಾಗಲಿದೆ’ ಎಂದೂ ಅವರು ತಿಳಿಸಿದರು.

ಇಂಥ ಲಸಿಕೆಯ ಪರೀಕ್ಷಾರ್ಥ ಪ್ರಯೋಗವು ಸುಮಾರು 4,000 ಸೇವಾ ಕಾರ್ಯಕರ್ತರಿಗೆ ಅನ್ವಯಿಸಿ ನಡೆಸಲಾಗಿದೆ. ಅಡ್ಡ ಪರಿಣಾಮದ ಒಂದೂ ಪ್ರಕರಣ ವರದಿಯಾಗಿಲ್ಲ. ಬೂಸ್ಟರ್ ಡೋಸ್ ಆಗಿ ಈ ಲಸಿಕೆಯನ್ನು ನೀಡುವ ಕ್ಲಿನಿಕಲ್‌ ಪ್ರಯೋಗಕ್ಕೆ ಭಾರತ ಔಷಧ ನಿಯಂತ್ರಣ ನಿರ್ದೇಶನಾಲಯವು (ಡಿಸಿಜಿಐಅನುಮತಿ ನೀಡಿತ್ತು ಎಂದು ತಿಳಿಸಿದರು.

ಅಲ್ಲದೆ, ಸುರಕ್ಷತೆ ಮತ್ತು ನಿರೋಧಕ ಶಕ್ತಿಯನ್ನು ಪರಿಶೀಲಿಸಲು ಕೋವ್ಯಾಕ್ಸಿನ್‌ ಲಸಿಕೆ ಜೊತೆಗೆ ಬಿಬಿವಿ 154 (ಮೂಗಿನ ಮೂಲಕ ನೀಡುವ ಲಸಿಕೆ) ಲಸಿಕೆಯ ಕ್ಲಿನಿಕಲ್‌ ಪ್ರಯೋಗಕ್ಕೂ ಡಿಸಿಜಿಐ ಅನುಮತಿ ನೀಡಿತ್ತು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT