ಮಂಗಳವಾರ, ಜನವರಿ 19, 2021
21 °C

ದೆಹಲಿಯಲ್ಲಿ 10 ಬಾತುಕೋಳಿಗಳ ಸಾವು; ಜನರಲ್ಲಿ ಹಕ್ಕಿ ಜ್ವರದ ಭೀತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೂರ್ವ ದೆಹಲಿಯ ಸಂಜಯ್‌ ಸರೋವರ ಬಳಿ ಶನಿವಾರ 10 ಬಾತುಕೋಳಿಗಳ ಮೃತದೇಹ ‍ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವ ತನಕ ಸರೋವರವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಯೂರ್‌ ವಿಹಾರ ಮೂರನೇ ಹಂತದ ಸೆಂಟ್ರಲ್‌ ಪಾರ್ಕ್‌ ಬಳಿ 17 ಕಾಗೆಗಳ ಮೃತದೇಹ ಪತ್ತೆಯಾಗಿತ್ತು. ಇದರ ಬೆನ್ನಲೇ ಬಾತುಕೋಳಿಗಳೂ ಮೃತಪಟ್ಟಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ನಮಗೆ ಸರೋವರದಲ್ಲಿ 10 ಬಾತುಕೋಳಿಗಳ ಮೃತದೇಹ ಸಿಕ್ಕಿವೆ. ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆಯ ವೈದ್ಯ ಡಾ.ರಾಕೇಶ್‌ ಸಿಂಗ್‌ ಅವರು ಮಾಹಿತಿ ನೀಡಿದರು.

‘ಪಶ್ಚಿಮ ದೆಹಲಿಯ ದ್ವಾರಕಾ, ಮಯೂರ ವಿಹಾರ ಮೂರನೇ ಹಂತ, ಹಸ್ತಾಲಾ ಗ್ರಾಮದಲ್ಲಿ ಹಲವು ಕಾಗೆಗಳು ಸತ್ತಿವೆ ಎಂಬ ಮಾಹಿತಿ ಸಿಕ್ಕಿವೆ. ಆದರೆ ಪಕ್ಷಿಗಳ ಈ ರೀತಿ ಸಾವಿಗೆ ಹಕ್ಕಿ ಜ್ವರ ಕಾರಣವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸೋಮವಾರ ವರದಿ ಲಭ್ಯವಾಗಲಿದೆ’ ಎಂದು ರಾಕೇಶ್‌ ಸಿಂಗ್‌ ಅವರು ಮಾಹಿತಿ ನೀಡಿದರು.

ದೆಹಲಿಯಲ್ಲಿ ಕಳೆದ ಕೆಲವು ದಿನಗಳಲ್ಲಿ 35 ಕಾಗೆಗಳು ಸೇರಿದಂತೆ 50 ಪಕ್ಷಿಗಳು ಮೃತಪಟ್ಟಿವೆ. ಇದು ನಗರದ ಜನರಲ್ಲಿ ‘ಹಕ್ಕಿ ಜ್ವರ’ದ ಭೀತಿ ಸೃಷ್ಟಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು