ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಳಿ ದ್ವೇಷದ ಹಲವು ಕಾರ್ಖಾನೆಗಳಿವೆ: ರಾಹುಲ್‌

Last Updated 8 ಜನವರಿ 2022, 14:52 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿಯ ಬಳಿ ದ್ವೇಷದ ಹಲವು ಕಾರ್ಖಾನೆಗಳಿವೆ. ಅವುಗಳಲ್ಲಿ ‘ಟೆಕ್‌ ಫಾಗ್‌’ ಆ್ಯಪ್‌ ಕೂಡ ಒಂದು’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ನಿರ್ದಿಷ್ಟ ಸಮುದಾಯದ ಮಹಿಳೆಯರನ್ನೇ ಗುರಿಯಾಗಿಸಿದ್ದ ಬುಲ್ಲಿ ಬಾಯಿ ಆ್ಯಪ್‌ ಪ್ರಕರಣದ ಆರೋಪಿಗಳ ವಯಸ್ಸು ಉಲ್ಲೇಖಿಸಿ, ಇಷ್ಟೊಂದು ದ್ವೇಷ ಎಲ್ಲಿ ಉಗಮವಾಗುತ್ತಿದೆ ಎಂದು ಇಡೀ ದೇಶವೇ ಆಶ್ಚರ್ಯಪಟ್ಟಿತ್ತು ಎಂದರು.

ಟೆಕ್‌ ಫಾಗ್‌ ಎಂಬುದು ಬಿಜೆಪಿಗೆ ನೆರವಾಗುವ ಆ್ಯಪ್‌ ಎಂದು ಉಲ್ಲೇಖಿಸಿರುವ ವರದಿಯನ್ನು ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ. ಬುಲ್ಲಿ ಬಾಯಿ ಆ್ಯಪ್‌ನಲ್ಲಿ ಅನೇಕ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ಅಪ್‌ಲೋಡ್‌ ಮಾಡಿ, ಇವರು ಹರಾಜಿಗೆ ಇದ್ದಾರೆ ಎಂದು ಒಕ್ಕಣೆ ಸೇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT