ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿಗೆ ಪಿಎಂಎವೈ ಮನೆ ಕೊಡಿ: ಬಿಜೆಪಿ ವ್ಯಂಗ್ಯ  

Last Updated 1 ಮಾರ್ಚ್ 2023, 14:08 IST
ಅಕ್ಷರ ಗಾತ್ರ

ತಿರುವನಂತಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ತಮಗೆ ಮನೆ ಇಲ್ಲವೆಂದು ಇತ್ತೀಚೆಗೆ ನೀಡಿದ ಹೇಳಿಕೆ ಕುರಿತು ವ್ಯಂಗ್ಯ ಮಾಡಿರುವ ಬಿಜೆಪಿ, ರಾಹುಲ್‌ ಅವರಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ವಸತಿ ನೀಡಬೇಕು ಎಂದು ಸ್ಥಳೀಯಾಡಳಿತಕ್ಕೆ ಮನವಿ ಮಾಡಿದೆ.

ರಾಹುಲ್‌ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಬಿಜೆಪಿ ಮುಖಂಡರ ನಿಯೋಗವು, ಪಕ್ಷದ ವಯನಾಡು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ. ಮಧು ನೇತೃತ್ವದಲ್ಲಿ ಈ ಸಂಬಂಧ ಕಲ್ಪೆಟ್ಟಾ ಪುರಸಭೆಗೆ ಮನವಿ ಸಲ್ಲಿಸಿದೆ.

‘ಅಪಾರ ಸಂಪತ್ತನ್ನು ಹೊಂದಿದ್ದರೂ ರಾಹುಲ್ ಗಾಂಧಿ ಅವರು ತನಗೆ ಮನೆ ಇಲ್ಲವೆಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ’ ಎಂದು ಕೆ.ಪಿ. ಮಧು ಟೀಕಿಸಿದ್ದಾರೆ.

ಕಾಂಗ್ರೆಸ್‌ನ ರಾಯಪುರ ಸಮಾವೇಶದಲ್ಲಿ ರಾಹುಲ್‌ ಗಾಂಧಿ ‘ನನಗೀಗ 52 ವಯಸ್ಸು, ಸ್ವಂತ ಮನೆಯೇ ಇಲ್ಲ’ವೆಂದು ನೀಡಿದ್ದ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಘೋಷಿಸಿಕೊಂಡಿರುವ ₹15 ಕೋಟಿ ಮೌಲ್ಯದ ಆಸ್ತಿಯ ಪ್ರಮಾಣಪತ್ರವನ್ನು ಜಾಲತಾಣಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 2014ರ ಚುನಾವಣೆಯಲ್ಲಿ ರಾಹುಲ್‌, ₹9.4 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ ಸಲ್ಲಿಸಿದ್ದರು.

ಕೇರಳದ ಸಿಪಿಎಂ ಸರ್ಕಾರ ನಿರ್ವಸತಿಗರಿಗೆ ವಸತಿ ಕಲ್ಪಿಸುವ ‘ಲೈಫ್ ಮಿಷನ್’ ಯೋಜನೆಯಲ್ಲಿ ರಾಹುಲ್‌ ಗಾಂಧಿಯವರಿಗೆ ಮನೆ ನೀಡಲು ಬಯಸಿದ್ದರೂ ತಮ್ಮ ಬಳಿ ಇರುವ ಅಪಾರ ಸಂಪತ್ತಿನಿಂದಾಗಿ ರಾಹುಲ್‌ ಅವರು ಫಲಾನುಭವಿಯಾಗಲು ಅನರ್ಹರಾದರು ಎಂದು ಟ್ರೋಲಿಗರು ಅಪಹಾಸ್ಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT