ಮಂಗಳವಾರ, ಜೂನ್ 28, 2022
23 °C

ಕೆನರಾ ಬ್ಯಾಂಕ್‌ ವಂಚನೆ ಪ್ರಕರಣ: ಆರೋಪಿ ಸಂಜಯ್‌ ಗುಪ್ತ ಬಂಧಿಸಿದ ಸಿಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಕೆನರಾ ಬ್ಯಾಂಕ್‌ಗೆ ₹20.68 ಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿ ದೀರ್ಘ ಕಾಲದಿಂದ ತಲೆಮರೆಸಿಕೊಂಡಿದ್ದ ಗುಜರಾತ್‌ ಮೂಲದ ಸಮೂಹ ಕಂಪನಿಯೊಂದರ ನಿರ್ದೇಶಕ ಸಂಜಯ್‌ ಗುಪ್ತ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಭಾನುವಾರ ತಿಳಿಸಿದೆ. ‌

ಕೀನ್ಯಾದಲ್ಲಿಯ ನೈರೋಬಿಯಿಂದ ಇಲ್ಲಿಗೆ ಆಗಮಿಸಿದ ವೇಳೆ ಆರೋಪಿ ಸಂಜಯ್‌ ಅವರನ್ನು ಬಂಧಿಸಲಾಗಿದೆ. 2012ರ ಜುಲೈ 27 ರಂದು ಅಹಮದಾಬಾದ್‌ನಲ್ಲಿಯ ಕೆನರಾ ಬ್ಯಾಂಕ್‌ ನೀಡಿದ ದೂರಿನ ಆಧಾರದಲ್ಲಿ ದಾಖಲಿಸಿದ ಪ್ರಕರಣದ ಆರೋಪಿಗಳಲ್ಲಿ ಸಂಜಯ್‌ ಎಂಟನೆಯವರು ಎಂದು ಸಿಬಿಐ ಹೇಳಿದೆ. 

ಜಾಮ್‌ನಗರದಲ್ಲಿಯ ಕೆನರಾ ಬ್ಯಾಂಕ್‌ ಶಾಖೆಗೆ ₹20.68 ಕೋಟಿ ವಂಚಿಸುತ್ತಿರುವ ಆರೋಪದಲ್ಲಿ ಗುಜರಾತ್‌ ಮೂಲದ ನೋವಾ ಸಮೂಹ ಕಂಪನಿ ಮತ್ತು ಇದರ ನಿರ್ದೇಶಕರು, ಮಾಲೀಕರು, ಬ್ಯಾಂಕ್‌ ಅಧಿಕಾರಿಗಳು ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. 

‘ತನಿಖೆಯ ನಂತರ 2013ರ ಡಿಸೆಂಬರ್‌ 24 ರಂದು ಎಂಟು ಆರೋಪಿಗಳ ವಿರುದ್ಧ ಅಹಮದಾಬಾದ್‌ನ ಮಿರ್ಜಾಪುರದಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ. 

ಆರೋಪಿ ಸಂಜಯ್‌ ಗುಪ್ತ ದೀರ್ಘ ಕಾಲದವರೆಗೆ ತಲೆಮರೆಸಿಕೊಂಡಿದ್ದರು. ಇವರ ಪತ್ತೆಗೆ ಲುಕ್‌ಔಟ್‌ ಮತ್ತು ರೆಡ್‌ ಕಾರ್ನರ್‌ ನೋಟಿಸ್‌ ನೀಡಲಾಗಿತ್ತು. ಅವರನ್ನು ಅಹಮದಾಬಾದ್‌ನ ಸಕ್ಷಮ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪ್ರಕಟಣೆ ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು