ಶುಕ್ರವಾರ, ಅಕ್ಟೋಬರ್ 7, 2022
28 °C

ಆದಾಯ ಮೀರಿದ ಆಸ್ತಿ: ಅಮಾನತುಗೊಂಡ ಜಡ್ಜ್‌ ವಿರುದ್ಧ ಸಿಬಿಐ ಮೊಕದ್ದಮೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಮಾನತುಗೊಂಡಿರುವ, ದೆಹಲಿ ಕೋರ್ಟ್‌ನ ನ್ಯಾಯಾಧೀಶರಾದ ರಚನಾ ಲಖನ್‌ಪಾಲ್‌ ಮತ್ತು ಅವರ ಪತಿಯ ವಿರುದ್ಧ ನಿಗದಿತ ಆದಾಯ ಮೀರಿ ₹2.99 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಕುರಿತಂತೆ ಸಿಬಿಐ ಪ್ರಕರಣ ದಾಖಲಿಸಿದೆ.

ಹಿರಿಯ ಸಿವಿಲ್‌ ನ್ಯಾಯಾಧೀಶರಾದ ರಚನಾ ಅವರನ್ನು ತೀಸ್‌ ಹಜಾರಿ ಕೋರ್ಟ್‌ಗೆ ನಿಯೋಜಿಸಲಾಗಿತ್ತು. ಅವರ ಪತಿ, ವಕೀಲ ಅಲೋಕ್‌ ಅವರನ್ನು ತಮ್ಮ ಪರ ತೀರ್ಪು ಬರುವಂತೆ ನೋಡಿಕೊಳ್ಳಲು ಕಕ್ಷಿದಾರರಿಂದ ₹ 4 ಲಕ್ಷ ಲಂಚ ಸ್ವೀಕರಿಸುವಾಗ 2016ರಲ್ಲಿ ಸಿಬಿಐ ಬಂಧಿಸಿತ್ತು. ಈ ಪ್ರಕರಣ ಕುರಿತು 2018ರಲ್ಲಿ ಆರೋಪಪಟ್ಟಿಯನ್ನು ದಾಖಲಿಸಿತ್ತು.

ಲಂಚ ಪ್ರಕರಣದ ತನಿಖೆ ವೇಳೆ, ದಂಪತಿಯು 2006–16ರ ಅವಧಿಯಲ್ಲಿ ಆದಾಯ ಮೀರಿ ಆಸ್ತಿ ಸಂಪಾದಿಸಿರುವುದು ಪತ್ತೆಯಾಗಿದೆ ಎಂದು ಬಳಿಕ ಸಿಬಿಐ ಪ್ರತಿಪಾದಿಸಿತ್ತು. ದಂಪತಿಯ ಬಳಿ ಜುಲೈ 27, 2006ರಲ್ಲಿ ₹1.09 ಲಕ್ಷ ಮೌಲ್ಯದ ಆಸ್ತಿ ಇತ್ತು. ಆಗಷ್ಟೇ ರಚನಾ ಸೇವೆಗೆ ಸೇರಿದ್ದರು. ಸೆಪ್ಟೆಂಬರ್ 28, 2016ರ ವೇಳೆಗೆ ಅವರ ಆಸ್ತಿ ಮೌಲ್ಯ ₹3.53 ಕೋಟಿ ಆಗಿತ್ತು ಎಂದು ತಿಳಿಸಿದೆ.

ಈ ಅವಧಿಯಲ್ಲಿ ದಂಪತಿಯ ಒಟ್ಟು ಆದಾಯ ₹ 1.05 ಕೋಟಿ ಆಗಿದ್ದರೆ, ಅವರ ವೆಚ್ಚ ₹ 51.73 ಲಕ್ಷವಾಗಿತ್ತು ಎಂದು ವಿವರಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು