ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CBSE 12ನೇ ತರಗತಿಯ ಟರ್ಮ್-1 ಫಲಿತಾಂಶ ಪ್ರಕಟ

Last Updated 19 ಮಾರ್ಚ್ 2022, 15:40 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ(ಸಿಬಿಎಸ್ಇ) 12ನೇ ತರಗತಿಯ ಟರ್ಮ್-1 ಪರೀಕ್ಷೆಗಳ ಪರ್ಫಾರ್ಮೆನ್ಸ್ ವರದಿಯನ್ನು ಶಾಲೆಗಳಿಗೆ ತಿಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ, ಸಿಬಿಎಸ್‌ಇ 2022ರ ಬೋರ್ಡ್ ಪರೀಕ್ಷೆಗಳನ್ನು ಎರಡು ಅವಧಿಗಳಲ್ಲಿ ನಡೆಸಲಾಗುವುದು ಎಂದು ಮಂಡಳಿ ಘೋಷಿಸಿತ್ತು. ನವೆಂಬರ್ 30 ರಿಂದ ಡಿಸೆಂಬರ್ 11 ರ ನಡುವೆ ಪ್ರಮುಖ ವಿಷಯಗಳಿಗೆ ಟರ್ಮ್-1 ಪರೀಕ್ಷೆಗಳು ನಡೆದವು.

‘12ನೇ ತರಗತಿಯ ಟರ್ಮ್-1 ಪರೀಕ್ಷೆಗಳ ಪರ್ಫಾರ್ಮೆನ್ಸ್ ವರದಿಯನ್ನು ಸಿಬಿಎಸ್‌ಇ, ಶಾಲೆಗಳಿಗೆ ತಿಳಿಸಿದೆ. ಆಂತರಿಕ ಮೌಲ್ಯಮಾಪನ ಅಥವಾ ಪ್ರಾಯೋಗಿಕ ಅಂಕಗಳು ಈಗಾಗಲೇ ಶಾಲೆಗಳಲ್ಲಿ ಲಭ್ಯವಿರುವುದರಿಂದ ಥಿಯರಿ ಅಂಕಗಳನ್ನು ಮಾತ್ರ ತಿಳಿಸಲಾಗಿದೆ’ಎಂದು ಅಧಿಕಾರಿ ಹೇಳಿದರು.

ಮಂಡಳಿಯು ಟರ್ಮ್-2 ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಪರೀಕ್ಷೆಗಳು ಏಪ್ರಿಲ್ 26 ರಿಂದ ಪ್ರಾರಂಭವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT