‘ಐ ಡ್ರಾಪ್’ ಹಿಂಪಡೆದ ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್
ನವದೆಹಲಿ: ಅಮೆರಿಕದಲ್ಲಿ ಜನರ ದೃಷ್ಟಿ ಹಾನಿ ಮತ್ತು ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿರುವ ‘ಐ ಡ್ರಾಪ್’ (ಕಣ್ಣಿನ ಔಷಧಿ) ಅನ್ನು ಚೆನ್ನೈನ ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್ ಹಿಂಪಡೆದಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಔಷಧ ನಿಯಂತ್ರಕ ಸಂಸ್ಥೆಗಳ ತಂಡಗಳು ಚೆನ್ನೈನಲ್ಲಿ ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್ ಕಂಪನಿಯು ಹೊಂದಿರುವ ಐ ಡ್ರಾಪ್ ಉತ್ಪಾದನಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ತಪಾಸಣೆ ನಡೆಸಿದವು. ನಂತರ ಈ ಬೆಳವಣಿಗೆ ನಡೆದಿದೆ. ಆದರೆ, ಈ ನಿರ್ದಿಷ್ಟ ಐ ಡ್ರಾಪ್ ದೇಶದಲ್ಲಿ ಮಾರಾಟವಾಗುತ್ತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
‘ಚೆನ್ನೈ ಮೂಲದ ಕಂಪನಿಯು ಎಜ್ರಿಕೇರ್, ಎಲ್‌ಎಲ್‌ಸಿ ಮತ್ತು ಡೆಲ್ಸಮ್ ಫಾರ್ಮಾ ಮೂಲಕ ಗ್ರಾಹಕ ಮಾರುಕಟ್ಟೆಗೆ ಪೂರೈಸಿದ್ದ ಕೃತಕ ಕಣ್ಣೀರಿನ ಲೂಬ್ರಿಕೆಂಟ್ ಐ ಡ್ರಾಪ್‌ಗಳನ್ನು ದೃಷ್ಟಿ ಹಾನಿ ಸಂಭವನೀಯತೆಯ ಕಾರಣಕ್ಕೆ ಹಿಂಪಡೆದುಕೊಂಡಿದೆ. ಐ ಡ್ರಾಪ್‌ನಿಂದ ಈವರೆಗೆ ಕಣ್ಣಿನ ಸೋಂಕುಗಳು, ಶಾಶ್ವತ ದೃಷ್ಟಿ ಹಾನಿ ಮತ್ತು ರಕ್ತಸ್ರಾವದಂತಹ ಸೋಂಕಿನಿಂದ ಸಂಭವಿಸಿದ ಸಾವು, ಆರೋಗ್ಯದ ಮೇಲಿನ ಪ್ರತಿಕೂಲ ಪರಿಣಾಮ ಸೇರಿ 55 ಪ್ರಕರಣಗಳು ವರದಿಯಾಗಿವೆ’ ಎಂದು ಅಮೆರಿಕದ ಆರೋಗ್ಯ ನಿಯಂತ್ರಕ ಹೇಳಿಕೆ ಬಿಡುಗಡೆ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.