ಸೆಂಟ್ರಲ್ ವಿಸ್ತಾ ಯೋಜನೆ ಮುಂದುವರಿಸಲು ಹೈಕೋರ್ಟ್ ಸಮ್ಮತಿ: ಅರ್ಜಿದಾರರಿಗೆ ದಂಡ

ನವದೆಹಲಿ: 'ಸೆಂಟ್ರಲ್ ವಿಸ್ತಾ' ಒಂದು 'ಪ್ರಮುಖ ಮತ್ತು ಅಗತ್ಯ' ರಾಷ್ಟ್ರೀಯ ಯೋಜನೆಯಾಗಿದ್ದು, ಆ ಯೋಜನೆಯಡಿ ನಡೆಯುತ್ತಿರುವ ನಿರ್ಮಾಣ ಕಾರ್ಯವನ್ನು ಮುಂದುವರಿಸಲು ದೆಹಲಿ ಹೈಕೋರ್ಟ್ ಸೋಮವಾರ ಅನುಮತಿ ನೀಡಿದ್ದು ಕಾಮಗಾರಿ ರದ್ಧತಿ ಕೋರಿದ್ದ ಅರ್ಜಿದಾರರಿಗೆ ನ್ಯಾಯಾಲಯ ₹1 ಲಕ್ಷ ದಂಡ ವಿಧಿಸಿದೆ.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೈಬಿಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠ, ಇದೊಂದು ಪ್ರಚೋದಿತ (ಮೋಟಿವೇಟೆಡ್ ಪ್ಲೀ) ಅರ್ಜಿಯಾಗಿದ್ದು, ಇದರಲ್ಲಿ ನಿಜವಾದ ಸಾರ್ವಜನಿಕ ಹಿತಾಸಕ್ತಿಯಿಲ್ಲ‘ ಎಂದು ಹೇಳಿತು. ಜತೆಗೆ, ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿತು.
ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ತಡೆ: ದೆಹಲಿ ಹೈಕೋರ್ಟ್ನಿಂದ ವಿಚಾರಣೆ
ಶಾಪೂರ್ಜಿ ಪಲ್ಲೊಂಜಿ ಗ್ರೂಪ್‌ಗೆ ನೀಡಲಾದ ಒಪ್ಪಂದದ ಪ್ರಕಾರ, ನವೆಂಬರ್ 2021 ರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಮತ್ತು ಅದನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಯೋಜನೆಯ ಕಾನೂನು ಬದ್ಧತೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿಹಿಡಿದಿದೆ ಎಂದು ನ್ಯಾಯಪೀಠ ಹೇಳಿತು.
ಇದನ್ನೂ ಓದಿ: ದೇಶದ ಜನರಿಗೆ ಉಸಿರಾಡುವುದು ಬೇಕಿದೆ, ಪ್ರಧಾನಿ ನಿವಾಸವಲ್ಲ: ರಾಹುಲ್ ಗಾಂಧಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.