ಶನಿವಾರ, ಸೆಪ್ಟೆಂಬರ್ 18, 2021
24 °C

ಕೇಂದ್ರವು 'ರಾಕ್ಷಸತ್ವ ಮೆರೆದಿದೆ': ಪೆಗಾಸಸ್ ಗೂಢಚರ್ಯೆ ಬಗ್ಗೆ ಮೆಹಬೂಬಾ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಪೆಗಾಸಸ್ ಗೂಢಚರ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರವು ‘ರಾಕ್ಷಸನಂತಾಗಿ ಹೋಗಿದ್ದು, ಮೂಲಭೂತ ಮಾನವ ಹಕ್ಕುಗಳನ್ನು ನಿರ್ಭಯವಾಗಿ ನಾಶಪಡಿಸುತ್ತಿದೆ.’ಎಂದು ಕಿಡಿಕಾರಿದ್ದಾರೆ.

‘ಭಯೋತ್ಪಾದಕರ ವಿರುದ್ಧ ಬಳಸುವ ಕುತಂತ್ರಾಂಶವನ್ನು ರಾಜಕೀಯ ವಿರೋಧಿಗಳು ಮತ್ತು ಭಿನ್ನಮತೀಯರನ್ನು ಎದುರಿಸಲು ಶಸ್ತ್ರಾಸ್ತ್ರವನ್ನಾಗಿ ಮಾಡಿಕೊಳ್ಳಲಾಗಿದೆ. ವಸಾಹತುಶಾಹಿ ಯುಗದಲ್ಲಿ ಬ್ರಿಟಿಷರು ಭಾರತೀಯರನ್ನು ಹೇಗೆ ಅನುಮಾನಿಸುತ್ತಿದ್ದರೋ ಮತ್ತು ಉಪಚರಿಸುತ್ತಿದ್ದರೋ ಅದೇ ರೀತಿ ಮಾಡುತ್ತಿದೆ. ಭಾರತ ಸರ್ಕಾರವು ರಾಕ್ಷಸನಾಗಿ ಹೋಗಿದೆ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ನಿರ್ಭಯವಾಗಿ ನಾಶಪಡಿಸುತ್ತಿದೆ.’ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸೋರಿಕೆಯಾಗಿರುವ ಪೆಗಾಸಸ್ ಗೂಢಚರ್ಯೆ ಕುರಿತಾದ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ತನ್ನ ಪಕ್ಷದ ಸದಸ್ಯರು ಮತ್ತು ಅವರ ಕುಟುಂಬದ ಫೋನ್ ಸಂಖ್ಯೆಗಳು ಟಾರ್ಗೆಟ್ ಆಗಿರುವವರ ಪಟ್ಟಿಯಲ್ಲಿ ಸೇರಿರಬಹುದು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು