ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17.78 ಲಕ್ಷ ಎಕರೆ ರಕ್ಷಣಾ ಭೂಮಿ ಸಮೀಕ್ಷೆಗೆ ಆಧುನಿಕ ತಂತ್ರಜ್ಞಾನ ಬಳಕೆ

Last Updated 9 ಜನವರಿ 2022, 15:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೂರು ಆಯಾಮದ ಮಾದರಿ, ಡ್ರೋನ್‌ ಮತ್ತು ಉಪಗ್ರಹ ಚಿತ್ರಗಳ ರೀತಿ ಇತ್ತೀಚಿನ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರ ರಕ್ಷಣಾ ಇಲಾಖೆಯ 17.78 ಲಕ್ಷ ಎಕರೆ ಭೂಮಿಯನ್ನು ಸಮೀಕ್ಷೆ ನಡೆಸಿದೆ.

ಸ್ವಾತಂತ್ರ್ಯ ಬಂದಾಗಿನಿಂದ ಈ ರೀತಿಯ ಕಾರ್ಯ ಮಾಡಿರುವುದು ಮೊದಲನೆ ಬಾರಿ ಎನ್ನಲಾಗಿದೆ.

ಕಂಟೋನ್ಮೆಂಟ್‌ ಒಳಗೆ 1.61 ಲಕ್ಷ ಎಕರೆ ಮತ್ತು ಹೊರಗೆ 16.17 ಲಕ್ಷ ಎಕರೆ ರಕ್ಷಣಾ ಭೂಮಿಯ ಸಮೀಕ್ಷೆ 2018ರ ಅಕ್ಟೋಬರ್‌ನಿಂದ ಆರಂಭಿಸಲಾಗಿತ್ತು. ಈಗ ಪೂರ್ಣಗೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

‘ಸ್ವಾತಂತ್ರ್ಯ ಬಂದಾಗಿನಿಂದ ಮೊದಲ ಬಾರಿಗೆ ಇಂತಹ ಕಾರ್ಯ ಮಾಡಲಾಗಿದ್ದು, ಇದೊಂದ ಗಮನಾರ್ಹ ಸಾಧನೆಯಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಸಂಪೂರ್ಣ ರಕ್ಷಣಾ ಇಲಾಖೆಯ ಭೂಮಿಯನ್ನು ಸಮೀಕ್ಷೆ ನಡೆಸಲಾಗಿದೆ’ ಎಂದು ಸಚಿವಾಲಯ ಹೇಳಿದೆ.

ರಕ್ಷಣಾ ಭೂಹಿಡುವಳಿಯ ಪ್ರಮಾಣ ಸುಮಾರು 4,900 ಸ್ಥಳಗಳಲ್ಲಿದೆ. ಅನೇಕ ಕಡೆ ಪ್ರವೇಶಿಸಲಾಗದ ಸ್ಥಳಗಳಲ್ಲಿ, ಭೂ ಮಧ್ಯಸ್ಥದಾರರ ಭಾಗವಹಿಸುವಿಕೆಯ ನಡುವೆ ಈ ಕಾರ್ಯ ಕೈಗೊಳ್ಳಲಾಗಿದೆ. ಭಾರತದಲ್ಲಿ ಕೈಗೊಂಡ ಅತಿದೊಡ್ಡ ಭೂ ಸಮೀಕ್ಷೆಗಳಲ್ಲಿ ಇದೂ ಒಂದೆನಿಸಿದೆ ಎಂದೂ ಸಚಿವಾಲಯ ವಿವರಿಸಿದೆ.

‘ರಾಜಸ್ಥಾನದಲ್ಲಿ ಲಕ್ಷ ಎಕರೆ ರಕ್ಷಣಾ ಭೂಮಿಯ ಸಮೀಕ್ಷೆಗೆ ಮೊದಲ ಬಾರಿಗೆ ಡ್ರೋನ್‌ ತಂತ್ರಜ್ಞಾನದ ಮೂಲಕ ತೆಗೆದ ಚಿತ್ರಗಳನ್ನು ಬಳಸಲಾಗಿದೆ. ವರ್ಷಗಳ ವರೆಗೆ ಮಾಡಬೇಕಾದ ಈ ಕಾರ್ಯಕ್ಕೆ ಸರ್ವೇಯರ್‌ ಜನರಲ್‌ ಅವರ ಸಹಾಯದಿಂದ ವಾರಗಳಲ್ಲಿ ಇಡೀ ಪ್ರದೇಶವನ್ನು ಸಮೀಕ್ಷೆ ನಡೆಸಲಾಗಿದೆ’ ಎಂದು ಹೇಳಿಕೆಯೊಂದರಲ್ಲಿ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT