ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸ್‌ಗಢ: ವಂದೇ ಭಾರತ್‌ ರೈಲಿಗೆ ಕಲ್ಲು ತೂರಾಟ, ಕಿಟಕಿಗೆ ಹಾನಿ

Last Updated 15 ಡಿಸೆಂಬರ್ 2022, 12:48 IST
ಅಕ್ಷರ ಗಾತ್ರ

ರಾಯಪುರ:ನಾಗ್ಪುರ– ಬಿಲಾಸ್ಪುರ ನಡುವೆ ಹೊಸದಾಗಿ ಆರಂಭವಾದ ವಂದೇ ಭಾರತ್‌ ರೈಲಿನ ಮೇಲೆ ಛತ್ತೀಸ್‌ಗಢ ರಾಜ್ಯದ ದುರ್ಗ್‌ ಮತ್ತು ಭಿಲಾಯ್‌ ರೈಲು ನಿಲ್ದಾಣಗಳ ನಡುವೆ ಬುಧವಾರ ಸಂಜೆ ದುಷ್ಕರ್ಮಿಯೊಬ್ಬ ಕಲ್ಲು ತೂರಿದ್ದು, ಇ1 ಕೋಚ್‌ನ ಕಿಟಕಿಗೆ ಹಾನಿಯಾಗಿದೆ.

ಈ ರೈಲು ನಾಗ್ಪುರದಿಂದ ಬಿಲಾಸ್ಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕಲ್ಲು ತೂರಾಟದಿಂದ ಯಾರಿಗೂ ಗಾಯವಾಗಿಲ್ಲ. ರೈಲ್ವೆ ಸಂರಕ್ಷಣಾ ಪಡೆ ಈ ಕುರಿತು ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಡಿಸೆಂಬರ್‌ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT