ಛತ್ತೀಸಗಡ: ಚಲಿಸುತ್ತಿರುವ ರೈಲಿನ ಮುಂದೆ ಹಾರಿ ತಾಯಿ, ಐವರು ಮಕ್ಕಳು ಆತ್ಮಹತ್ಯೆ

ರಾಯಪುರ: ‘ಛತ್ತೀಸಗಡ ಮಹಾಸಮುಂಡ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಐದು ಹೆಣ್ಣು ಮಕ್ಕಳೊಂದಿಗೆ ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಗುರುವಾರ ತಿಳಿಸಿದರು.
‘ಮಹಾಸಮುಂಡ್ ಮತ್ತು ಬೆಲ್ಸೊಂಡ ಕ್ರಾಸ್ಸಿಂಗ್ ನಡುವೆ ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ’ ಎಂದು ಅವರು ಹೇಳಿದರು.
‘ಬೆಮ್ಚ ಗ್ರಾಮದ ನಿವಾಸಿ ಉಮಾ ಸಾಹು(45) ಅವರು ತನ್ನ ಪತಿಯೊಂದಿಗೆ ಜಗಳವಾಡಿದ್ದಾರೆ. ಇದರಿಂದ ಬೇಸರಗೊಂಡ ಅವರು ತನ್ನ ಐವರು ಹೆಣ್ಣು ಮಕ್ಕಳಾದ ಅನ್ನಪೂರ್ಣ(18), ಯಶೋದಾ(16), ಭೂಮಿಕಾ(14), ಕುಂಕುಮ್(12) ಮತ್ತು ತುಳಸಿಯೊಂದಿಗೆ(10) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೇಘಾ ತೆಂರ್ಬುಕರ್ ಸಾಹು ಅವರು ಮಾಹಿತಿ ನೀಡಿದರು.
‘ಈವರೆಗೆ ಯಾವುದೇ ಮರಣ ಪತ್ರ ಸಿಕ್ಕಿಲ್ಲ. ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.