ಮಂಗಳವಾರ, ಜುಲೈ 27, 2021
20 °C

ಚಿರಾಗ್‌ ಪಾಸ್ವಾನ್‌ ವಿರುದ್ಧ ನಿತೀಶ್‌ ಕುಮಾರ್‌ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ‘ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ತಮ್ಮ ಪಕ್ಷದಲ್ಲಿನ ಒಗ್ಗಟ್ಟು ಕಾಪಾಡಲು ವಿಫಲರಾಗಿದ್ದಾರೆ. ಹೀಗಾಗಿ, ಈಗ ರಾಜಕೀಯ ಬೆಳವಣಿಗೆ ನಡೆದಿವೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಬಿತ್ತಿದಂತೆ ಬೆಳೆ ಬರುತ್ತದೆ. ಅದೇ ರೀತಿಯಲ್ಲಿ ಆ ಪಕ್ಷದಲ್ಲಿಯೂ ನಡೆದಿದೆ. ಚಿರಾಗ್‌ ಇನ್ನೂ ಯುವಕ. ಎನ್‌ಡಿಎ ಜತೆಗಿದ್ದ ಪಕ್ಷದ ನಾಯಕತ್ವವನ್ನು ಚಿರಾಗ್‌ ಪಾಸ್ವಾನ್‌ ವಹಿಸಿದ್ದರು. ಆದರೂ, ಅವರು ವಿಭಿನ್ನ ನಿಲುವು ಕೈಗೊಂಡರು. ಇದರಿಂದ, ವಿಧಾನಸಭೆ ಚುನಾವಣೆಯಲ್ಲಿ ‍ಪಕ್ಷಕ್ಕೆ ನಷ್ಟವಾಯಿತು. ಆಂತರಿಕವಾಗಿ ಪಕ್ಷದಲ್ಲೇ ಅಸಮಾಧಾನ ಸೃಷ್ಟಿಯಾಯಿತು’ ಎಂದು ವಿಶ್ಲೇಷಿಸಿದ್ದಾರೆ.

 ಪ್ರತ್ಯೇಕಗೊಂಡು ಗುಂಪು ಮಾಡಿಕೊಂಡಿರುವ ಲೋಕಜನಶಕ್ತಿಯ ಐವರು ಸಂಸದರು ಜೆಡಿಯು ಸೇರಲಿದ್ದಾರೆಯೇ ಎನ್ನುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಸಂಸದರು ಇನ್ನೂ ಹಲವಾರು ಪ್ರಕ್ರಿಯೆಗಳನ್ನು ಪೂರೈಸಬೇಕಾಗಿದೆ. ಆದರೆ, ಎನ್‌ಡಿಎನಲ್ಲಿ ಉಳಿಯುವುದಾಗಿ ಅವರೇ ಹೇಳಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು