ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನಿ ಪತಿಗೆ ಸೇರಿದ ಕಂಪನಿಯ ಜಿಎಸ್‌ಟಿ ಸಂಖ್ಯೆಯನ್ನೇ ಬಾರ್‌ ಹೊಂದಿದೆ: ಗೋವಾ ಶಾಸಕ

Last Updated 3 ಆಗಸ್ಟ್ 2022, 13:30 IST
ಅಕ್ಷರ ಗಾತ್ರ

ಪಣಜಿ:‘ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪತಿಗೆ ಸೇರಿದ ಕಂಪನಿಯ ಜಿಎಸ್‌ಟಿ ಸಂಖ್ಯೆಯನ್ನೇ ಸ್ಮೃತಿ ಅವರ ಮಗಳು ಅಕ್ರಮವಾಗಿ ನಡೆಸುತ್ತಿದ್ದಾರೆ ಎನ್ನಲಾದ ಸಿಲ್ಲಿ ಸೋಲ್ಸ್‌ ಕೆಫೆ ಆ್ಯಂಡ್‌ ಬಾರ್‌ ಹೊಂದಿದೆ’ ಎಂದು ಗೋವಾ ಕಾಂಗ್ರೆಸ್‌ ಮುಖಂಡ ಗಿರೀಶ್‌ ಚೋಡಾಂಕರ್‌ ಬುಧವಾರ ಆರೋಪಿಸಿದ್ದಾರೆ.

‘ಸ್ಮೃತಿ ಅವರ ಪತಿ ಏಯ್ಟ್‌ಆಲ್‌ ಫುಡ್‌ ಆ್ಯಂಡ್‌ ಬೆವರೇಜ್‌ ಎಂಬ ಕಂಪನಿಯ ಮಾಲೀಕತ್ವ ಹೊಂದಿದ್ದು, ಇದು ಮನೆ ಸಂಖ್ಯೆ 452, ಬೌಟಾ ವಡ್ಡೊ, ಅಸಗಾವೊ ವಿಳಾಸದಲ್ಲಿದೆ.ಸಿಲ್ಲಿ ಸೋಲ್ಸ್‌ ಬಾರ್‌ನ ನೋಂದಣಿಗೂ ಇದೇ ವಿಳಾಸ ನೀಡಲಾಗಿದೆ’ ಎಂದು ಅವರು ದೂರಿದ್ದಾರೆ.

ಈ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ, ಗಿರೀಶ್ ಅವರು ಈ ವಿಚಾರದ ಬಗ್ಗೆ ಮಾತನಾಡಲು ಯೋಗ್ಯರಲ್ಲ ಎಂದು ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT