ಬುಧವಾರ, ಡಿಸೆಂಬರ್ 7, 2022
21 °C

ನಮ್ಮ ಗಮನಕ್ಕೆ ತರದೆ ಸೇತುವೆ ಬಳಕೆಗೆ ಮುಕ್ತಗೊಳಿಸಿದ್ದ ಕಂಪನಿ: ಮೊರ್ಬಿ ಪುರಸಭೆ

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ‘ಮೊರ್ಬಿ ಸೇತುವೆಯ ದುರಸ್ತಿ ಕಾರ್ಯ ಕೈಗೊಂಡಿದ್ದ ಅಜಂತಾ ಕಂಪನಿಯು ನಮಗೆ ಯಾವ ಮಾಹಿತಿಯನ್ನೂ ನೀಡದೆ ಅದನ್ನು ಜನರ ಬಳಕೆಗೆ ಮುಕ್ತಗೊಳಿಸಿತ್ತು’ ಎಂದು ಮೊರ್ಬಿ ಪುರಸಭೆಯು ಗುಜರಾತ್‌ ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಪುರಸಭೆಯು ಮುಖ್ಯ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಮತ್ತು ನ್ಯಾಯಮೂರ್ತಿ ಆಶುತೋಷ್‌ ಶಾಸ್ತ್ರಿ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಅಫಿಡವಿಟ್ ಸಲ್ಲಿಸಿದೆ.

‘ತೂಗುಸೇತುವೆಯ ನವೀಕರಣವನ್ನು ಪರಿಪೂರ್ಣವಾಗಿ ಕೈಗೊಂಡ ನಂತರವೇ ನಾಗರಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಕಂಪನಿ ಜೊತೆ ಈ ವರ್ಷ ಮಾಡಿಕೊಂಡಿದ್ದ ಒಪ್ಪಂದದಲ್ಲಿ ತಿಳಿಸಲಾಗಿತ್ತು. ಆದರೆ ಕಂಪನಿ ನಮ್ಮ ಅನುಮತಿ ಪಡೆಯದೆ ಸೇತುವೆಯನ್ನು ಬಳಕೆಗೆ ಮುಕ್ತಗೊಳಿಸಿದೆ’ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ರಿಟಿಷರ ಕಾಲದ ಈ ಸೇತುವೆ ನವೀಕರಣದ ನಂತರ ಬಳಕೆಗೆ ಮುಕ್ತವಾದ ಐದು ದಿನಗಳಲ್ಲಿಯೇ (ಅಕ್ಟೋಬರ್‌ 30) ಕುಸಿದಿತ್ತು. ಈ ದುರಂತದಲ್ಲಿ 135 ಜನ ಅಸುನೀಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು