ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಗಂಟೆ ವಿಚಾರಣೆ ಎದುರಿಸಿ ಇ.ಡಿ ಕಚೇರಿಯಿಂದ ತೆರಳಿದ ಸೋನಿಯಾ ಗಾಂಧಿ

Last Updated 21 ಜುಲೈ 2022, 9:58 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜಾರಿ ನಿರ್ದೇಶನಾಲಯ(ಇ.ಡಿ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎರಡು ಗಂಟೆ ವಿಚಾರಣೆ ಎದುರಿಸಿ ಮನೆಗೆ ತೆರಳಿದ್ದಾರೆ.

ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವುದಾಗಿ ಸೋನಿಯಾ ಗಾಂಧಿ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಇಂದಿನ ವಿಚಾರಣೆಯನ್ನು ಎರಡು ಗಂಟೆಗೆ ಮೊಟಕುಗೊಳಿಸಲಾಯಿತು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಝೆಡ್ ಪ್ಲಸ್ ಭದ್ರತೆಯೊಂದಿಗೆ ದೆಹಲಿಯ ವಿದ್ಯುತ್ ಲೇನ್‌ನಲ್ಲಿರುವ ಇ.ಡಿ ಕಚೇರಿಗೆ ಸೋನಿಯಾ ಹಾಜರಾಗಿದ್ದರು. ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಅವರ ಜೊತೆಗಿದ್ದರು.

ಸಮನ್ಸ್ ಪರಿಶೀಲನೆ ಮತ್ತು ಸಹಿ ಮುಂತಾದ ಔಪಚಾರಿಕ ಪ್ರಕ್ರಿಯೆ ಮುಗಿಸಿದ ಬಳಿಕ ಮಧ್ಯಾಹ್ನ 12.30ರ ಸುಮಾರಿಗೆ ಸೋನಿಯಾ ಗಾಂಧಿಯವರ ವಿಚಾರಣೆ ಆರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ.

ವೈದ್ಯಕೀಯ ಆಧಾರದ ಮೇಲೆ ಅವರ ಮನವಿಯನ್ನು ಪರಿಗಣಿಸಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT