ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 24ರಂದು ರಾಯಪುರದಲ್ಲಿ ಎಐಸಿಸಿ ಮಹಾ ಅಧಿವೇಶನ

Last Updated 5 ಫೆಬ್ರುವರಿ 2023, 13:00 IST
ಅಕ್ಷರ ಗಾತ್ರ

ರಾಯಪುರ: ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಮೂರು ದಿನಗಳ 85ನೇ ಮಹಾ ಅಧಿವೇಶನ ರಾಯಪುರದಲ್ಲಿ ಫೆಬ್ರುವರಿ 24ರಂದು ಆರಂಭವಾಗಲಿದೆ.

‘ಈ ಮಹಾ ಅಧಿವೇಶನವು ರಾಷ್ಟ್ರ ರಾಜಕಾರಣದ ದಿಕ್ಕನ್ನು ಬದಲಿಸಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಭಾನುವಾರ ಇಲ್ಲಿ ಪ್ರತಿಪಾದಿಸಿದರು.

ಮಹಾಧಿವೇಶನದ ಸಿದ್ಧತೆಗಳನ್ನು ಪರಿಶೀಲಿಸಲು ಪಕ್ಷದ ಹಿರಿಯ ಮುಖಂಡರಾದ ಪವನ್‌ ಬನ್ಸಾಲ್ ಮತ್ತು ತಾರೀಕ್‌ ಅನ್ವರ್‌ ಅವರ ಜೊತೆಗೆ ಆಗಮಿಸಿರುವ ಅವರು ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತಿದ್ದರು.

‘ಬಿಜೆಪಿ ದೇಶದಲ್ಲಿ ಸುಳ್ಳು ಪ್ರಚಾರ ಮಾಡುತ್ತಿದೆ. ಭಾರತ್‌ ಜೋಡೊ ಯಾತ್ರೆ ಕುರಿತೂ ಮಾತನಾಡಿದೆ. ಆದರೆ, ಈ ಯಾತ್ರೆ ಭಾರತದ ಅತಿದೊಡ್ಡ ರಾಜಕೀಯ ಅಭಿಯಾನವಾಗಿದ್ದು, ಬಿಜೆಪಿ ಅದರ ವಿರುದ್ಧವಾಗಿತ್ತು’ ಎಂದರು.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಸೆಪ್ಟೆಂಬರ್ 7, 2022ರಂದು ಆರಂಭವಾಗಿದ್ದು, ಭಾರತ್‌ ಜೋಡೊ ಯಾತ್ರೆಯು ಜನವರಿ 30, 2023ರಂದು ಶ್ರೀನಗರದಲ್ಲಿ ಅಂತ್ಯವಾಗಿತ್ತು.

ಎಐಸಿಸಿ ಮಹಾಧಿವೇಶನದಲ್ಲಿ ವಿವಿಧ ರಾಜ್ಯ ಘಟಕಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು ಭಾಗವಹಿಸುವರು. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸಾರಥ್ಯಕ್ಕೂ ಈ ಮಹಾಧಿವೇಶನವು ಅಧಿಕೃತವಾಗಿ ಅನುಮೋದನೆಯನ್ನು ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT