ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಂತರಗೊಂಡ ಕೊರೊನಾ ವೈರಸ್‌ ವಿರುದ್ಧವೂ ಲಸಿಕೆ ಪರಿಣಾಮಕಾರಿ: ಸಿಎಸ್‌ಐಆರ್

Last Updated 21 ಡಿಸೆಂಬರ್ 2020, 16:16 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ವಿರುದ್ಧ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ರೂಪಾಂತರಿತ ವೈರಸ್‌ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್) ಮಹಾ ನಿರ್ದೇಶಕ ಶೇಖರ್ ಮಾಂಡೆ ಹೇಳಿದ್ದಾರೆ.

ರೂಪಾಂತರಿತ ವೈರಸ್ ‘ಎನ್‌501ವೈ’ ಹರಡುವಿಕೆ ಪ್ರಮಾಣ ಜಾಸ್ತಿ ಇರಬಹುದು. ಹಾಗೆಂದು ಇದು ಹೆಚ್ಚು ಮಾರಕ ಹಾಗೂ ಇದರಿಂದ ಹೆಚ್ಚು ಜನ ಸಾಯುತ್ತಾರೆ ಎಂದು ಅರ್ಥವಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

‘ಪ್ರತಿಕಾಯಗಳ ಕೆಲವು ಅಂಶಗಳಲ್ಲಿ ವ್ಯತ್ಯಾಸ ಇರಬಹುದು ಎಂಬುದು ನಿಜ. ಆದರೆ, ಲಸಿಕೆಗಳು ನಿಷ್ಪ್ರಯೋಜಕ ಎನ್ನುವುದು ಇದರ ಅರ್ಥವಲ್ಲ. ವೈರಸ್ ರೂಪಾಂತರ ಹೊಂದಿದರೂ ಲಸಿಕೆಗಳು ಪರಿಣಾಮಕಾರಿಯಾಗಿಯೇ ಇರಲಿದೆ. ಹೀಗಾಗಿ ಹೆದರುವ ಅಗತ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಭಾರತದ ಸಂಸ್ಥೆಗಳು ಕೊರೊನಾ ವೈರಸ್‌ನ 4 ಸಾವಿರದಷ್ಟು ಜೀನೊಮ್‌ಗಳನ್ನು ಗುರುತಿಸಿದ್ದು ಎಲ್ಲ ಮಾಹಿತಿಯನ್ನೂ ‘ಗ್ಲೋಬಲ್ ಇನಿಷಿಯೇಟಿವ್ ಆನ್ ಶೇರಿಂಗ್ ಆಲ್ ಇನ್‌ಫ್ಲುಯೆಂಜಾ ಡೇಟಾಗೆ (ಜಿಐಎಸ್‌ಎಐಡಿ)’ ಸಲ್ಲಿಸಿವೆ.

ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರಿತ ವೈರಸ್‌ ಭಾರತದಲ್ಲಿ ಈವರೆಗೆ ಕಂಡುಬಂದಿಲ್ಲ. ಈ ವೈರಸ್ ಬಗ್ಗೆ ಭಾರತವೂ ಸೇರಿದಂತೆ ವಿಶ್ವದಾದ್ಯಂತ ವಿಜ್ಞಾನಿಗಳು ನಿಗಾ ಇರಿಸಿದ್ದಾರೆ ಎಂದೂ ಮಾಂಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT